ಭಾವಮಂದಿರದಲ್ಲಿ ತಾಯ ಮೂರ್ತಿಯನಿರಿಸಿ

ಭಾವಮಂದಿರದಲ್ಲಿ ತಾಯ ಮೂರ್ತಿಯನಿರಿಸಿ
ಧ್ಯೇಯ ಜಲದಭಿಷೇಕ ಎರೆಯ ಬನ್ನಿ
ನೋವು ನಲಿವಲಿ ಬೆರೆತು
ನಾಡ ವೈಭವ ಚರಿತೆ ಬರೆಯ ಬನ್ನಿ || ಪ ||

ಪಸರಿಸುತ ಜಗದಗಲ ಧರ್ಮಸೂತ್ರದ ಬೆಳಕ
ಜ್ಞಾನ ವಿಜ್ಞಾನಗಳ ಧಾರೆಯೆರೆದು
ಯೋಗದಮೃತ ಹರಿಸಿ ಆಧ್ಯಾತ್ಮ ಸುಧೆಯನುಣಿಸಿ
ವಿಶ್ವವನೆ ಪೊರೆದಂತ ಹಿರಿಮೆ ನಮದು || 1 ||

ತರತಮವ ಬದಿಗಿಟ್ಟು ಜನಹಿತವ ಎದುರಿಟ್ಟು
ಸಾಮರಸ್ಯದ ಸೂತ್ರ ಹೆಣೆದು ಹೆಣೆದು
ಜಾಡ್ಯ ಬಡಿದೋಡಿಸುತ ಮೌಢ್ಯಗಳ ಮರ್ದಿಸುತ
ಯುವ ಮನಕೆ ಜಾಗೃತಿಯ ಭಾವ ಬೆಸೆದು || 2 ||

ಕವಲುದಾರಿಯ ಹಿಡಿವ ಪುತ್ರ ಕೋಟಿಯ ಮನಕೆ
ಸಂಸ್ಕಾರ ಸಂಗೀತ ಹೊನಲು ಹರಿಸಿ
ಕರೆವಿಡಿದು ಮುನ್ನಡೆಸಿ ವೀರವ್ರತ ಪಣ ತೊಡಿಸಿ
ಬೆವರು ನೆತ್ತರ ಧಾರೆ ಹರಿಸಿ ಸುರಿಸಿ || 3 ||

Leave a Reply

Your email address will not be published. Required fields are marked *

*

code