ಅಹನಿ ನಮನ ಅಮರ ಜನನಿ

ಅಹನಿ ನಮನ ಅಮರ ಜನನಿ
ಸಕಲಭುವನ ಮೋಹಿನಿ
ಭವ್ಯಮೂರ್ತಿ ದಿವ್ಯಕೀರ್ತಿ
ನಿನಗೆ ನಿತ್ಯ ಆರತಿ || ಪ ||

ವಿವಿಧ ವೇಷ ವಿವಿಧ ಭಾಷೆ
ಭಂಗಿಗಿರುವ ರಕ್ಷೆಯು
ಒಂದೆ ಸತ್ವ ಒಂದೆ ಭಾವ
ತುಂಬಿದೊಂದೆ ತತ್ವವು || 1 ||

ವೇದವಾಣಿ ವೀರವಾಣಿ
ಏನು ದಿವ್ಯ ವಾಙ್ಮಯ
ಏಕರಾಗ ಏಕತಾಳ
ಏಕತಾನ ತನ್ಮಯ || 2 ||

ಸತ್ಯಶಾಂತಿ ಸಹನೆ ಪ್ರೀತಿ
ನಿನ್ನ ಅಮರ ನೀತಿಯು
ಮೌನ ಧ್ಯಾನ ಭಕ್ತಿಗಾನ
ಕಲಿಸಿ ಯಾವ ಭೀತಿಯು || 3 ||

Leave a Reply

Your email address will not be published. Required fields are marked *

*

code