ಅಸದಳ ಕಾರ್ಯವ ಸಾಧಿಸಿ ತೋರುವ

ಅಸದಳ ಕಾರ್ಯವ ಸಾಧಿಸಿ ತೋರುವ ಯುವಮನಸುಗಳೇ ಮೇಲೇಳಿ ಕನಸಲಿ ಅರಳಿಹ ಚಿತ್ತಾರಗಳಿಗೆ ರಂಗನು ತುಂಬಲು ಎದ್ದೇಳಿ || ಪ || ತ್ಯಾಗಸ್ವಭಾವದಿ ಸೇವೆಯ ಗುಣದಲಿ ನಮಗೆಣೆಯಿಲ್ಲ ಸರಿಮಿಗಿಲು ಬಲದಾರಾಧನೆ ನಿತ್ಯವು ನಡೆದಿದೆ ಕೊಡಲಿಗೆ ಮಣಿಯಿತು ಪಡುಗಡಲು || 1 || ಶಂಕರ ಮಧ್ವರ ಸಿದ್ಧಾಂತಗಳಿವೆ ನಾರಾಯಣ ಗುರು ಉಪದೇಶ ಕನಕನಿಗೊಲಿದ ಮುರುಳಿಯ ನಾದದಿ ಸಮರಸತೆಯ ಸ್ವರವಿನ್ಯಾಸ || 2 || ಎದ್ದಿಹ ತರುಣನೆ ನಿಲ್ಲದೆ ಮುನ್ನಡೆ ಕೇಳದೆ ಸಂತನ ಉದ್ಘೋಷ ಪಡುವಣ ಕಡಲಿನ ಮೊರೆತಕೆ ಮರುದನಿ ಭಾರತ […]

Read More

ಸಂಘಶಕ್ತಿಯ ಸೀಮೋಲ್ಲಂಘನ

ಸಂಘಶಕ್ತಿಯ ಸೀಮೋಲ್ಲಂಘನ ಹಿಂದುನವೋದಯ ಸಂಕ್ರಮಣ ಮನ ಮನೆಗಳ ಬಂಧುತ್ವದ ಮಿಲನ ಸಮರಸಗಂಗೆಯ ಅವತರಣ ಸೀಮೋಲ್ಲಂಘನ… ನವಯುಗ ಸಂಕ್ರಮಣ || ಪ || ಸಾಸಿರ ವರುಷದ ಸಂಘರ್ಷದ ಸೆಲೆ ಸ್ವಾತಂತ್ರ್ಯದ ಗಳಿಕೆಯ ಘನ ಹಿನ್ನಲೆ ರಾಷ್ಟ್ರಸಮರ್ಪಿತ ಜೀವನವೇ ಬೆಲೆ ನಾಡನಾಗಿಸಲು ಹಿಂದುತ್ವದ ನೆಲೆ || 1 || ಪತಿತರು ದೀನರು ದೇವಸಮಾನ ನಿರತ ಸೇವೆಯೇ ಪರಮ ಸಾಧನ ಪಂಥ ಪಕ್ಷ ಮತ ಒಡಕಿಗೆ ಕಾರಣ ಬೆರೆತು ನಡೆಸುವಾ ಸಮರಸ ಜೀವನ || 2 || ಬಲ ಎಲ್ಲಿಹುದೋ ಬೆಲೆ […]

Read More

ಭಾರತಿ ನಿನ್ನಯ ವೈಭವಕಾಗಿ

ಭಾರತಿ ನಿನ್ನಯ ವೈಭವಕಾಗಿ ದುಡಿವೆವು ಸಾವಿರ ಹಗಲಿರುಳು… ಕೇಶವ ತೋರಿದ ಗುರಿಯನು ತಲುಪಲು ಅರ್ಪಿತ ಜೀವನ ಕುಸುಮಗಳು… || ಪ || ಗೋಪುರ ಶಿಖರದಿ ಹೊನ್ನಿನ ಕಳಶ ಧನ್ಯವು ಹೊತ್ತಿಹ ಕಂಬಗಳು… ಸಂಘಮಂದಿರಕೆ ತನುಮನ ಅರ್ಪಿಸಿ ಮಣ್ಣಲಿ ಹೂತಿಹ ಕಲ್ಲುಗಳು… || 1 || ದ್ವಂದ್ವಗಳಿಲ್ಲದ ಸಮತೆಯ ಭಾವ ನಮ್ಮೊಳಗಿರುವ ನಿಜಧ್ಯಾನ… ಜಗದೇಕಾತ್ಮತೆಯು ನಮ್ಮೊಳಗಿದ್ದರೆ ಅದುವೇ ಹದವರಿತಾತ್ಮಜ್ಞಾನ… || 2 || ಧ್ಯೇಯಸಾಧನೆಗೆ ಪ್ರತಿಫಲವಿರದು ಅಲ್ಲಿದೆ ಸಂತನ ಆತ್ಮತೃಪ್ತಿ… ಹೆಗಲೇ ಸವೆದರು ಕಾರ್ಯವು ನಿಲ್ಲದು ಅಕ್ಷಯ ಉಜ್ವಲ […]

Read More

ಮೈಕೊಡವಿ ಮೇಲೇಳು

ಮೈಕೊಡವಿ ಮೇಲೇಳು ಸಾಧನೆಯ ಕಲಿಪುರುಷ, ಬಾ ಹಿಂದು ಸೋದರನೆ ರಾಷ್ಟ್ರಕಾಗಿ… ಮೃತ್ಯುಭೃತ್ಯನು ನೀನು ನಿನಗೆಲ್ಲಿ ಅಂಜಿಕೆಯೊ, ಕರೆದಿಹಳು ಭಾರತಿಯು ರಾಷ್ಟ್ರಕಾಗಿ… || ಪ || ಜಗದಗಲ ಹರಡಿಹುದು ಕತ್ತಲೆಯ ಕಾರ್ಮೋಡ, ಬೆಳಕ ಹರಿಸಿ ತಮವ ದೂರ ಸರಿಸು… ರಣಘೋಷ ಮೂಡಿಹುದು ರಣಕಹಳೆ ಮೊಳಗಿಹುದು, ತರುಣ ರಕ್ತದ ಕಣದಿ ಸಿಡಿಲ ತರಿಸು… || 1 || ಏಕತೆಯ ತೊರೆದಿಹರು ಸಂಸ್ಕೃತಿಯ ಮರೆತಿಹರು, ಹಿಂದು ಮಂತ್ರವ ಪಠಿಸು ನಾಡಿಗೆಲ್ಲ… ಮೈಮರೆತು ಮಲಗಿಹರು ಬಲಭೀಮ ಹನುಮರು, ಪಾಂಚಜನ್ಯವ ನುಡಿಸು ವಿಶ್ವಕೆಲ್ಲ… || […]

Read More

ಹಿಂದುಶಕ್ತಿಯು ಒಂದುಗೂಡಿದೆ

ಹಿಂದುಶಕ್ತಿಯು ಒಂದುಗೂಡಿದೆ, ಭೇದಭಾವವ ಮರೆಯುತಾ… ಸಾಮರಸ್ಯದಿ ಮುಂದೆ ನಡೆಯಲು, ಶಕ್ತವಾಯಿತು ಭಾರತ… || ಪ || ದಿಕ್ಕು ದಿಕ್ಕಲಿ ಧೂರ್ತನರ್ತನ ರಕ್ತವಾಯಿತು ಈ ಧರೆ… ದಿಟ್ಟ ಉತ್ತರ ನೀಡಿದುದಕೆ ಮತ್ತೆ ಬೆಳಗಿತು ಬಾನ್‍ಧರೆ… || 1 || ಹಿಂದು ಹೃದಯವು ಶೂನ್ಯವಾಗಲು, ಸೂತಕದ ಮನೆ ರಾಷ್ಟ್ರವು… ಸಂಘ ಜನಿಸಿತು ಮೌಢ್ಯ ಅಳಿಯಲು, ಭವ್ಯ ಮಂಗಳ ಪೀಠವು… || 2 || ದಿವ್ಯ ಪುರುಷರು ನಡೆದು ತೋರಿದ, ವೀರವ್ರತದಾ ಸ್ವೀಕೃತಿ… ನಾನು ನನ್ನದು ಎಲ್ಲ ಮೋಹವು, ರಾಷ್ಟ್ರ ಯಜ್ಞಕೆ […]

Read More

ಅ ಆ ಇ ಈ ಕನ್ನಡದಾ ಅಕ್ಷರಮಾಲೆ

ಅ ಆ ಇ ಈ, ಅ ಆ ಇ ಈ ಕನ್ನಡದಾ ಅಕ್ಷರಮಾಲೆ ಅಮ್ಮಾ ಎಂಬುದೇ ಕಂದನ ಕರುಳಿನ ಕರೆಯೋಲೆ || ಪ || ಆಟ ಊಟ ಓಟ ಕನ್ನಡ ಒಂದನೇ ಪಾಠ ಕನ್ನಡ ಭಾಷೆಯ ಕಲಿತವನಿಗೆ ಜೀವನವೇ ರಸದೂಟ || 1 || ಇ ಈ ಇದ್ದವರೆಲ್ಲ ಇಲ್ಲದವರಿಗೆ ನೀಡಲೇಬೇಕು ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು || 2 || ಉ, ಊ ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ […]

Read More

ನಮ್ಮ ಮನೆ ಇದು ನಮ್ಮ ಮನೆ

ನಮ್ಮ ಮನೆ ಇದು ನಮ್ಮ ಮನೆ ನಲಿವಿನ ಅರಿವಿನ ನಮ್ಮ ಮನೆ | ರೀತಿಯ ನೀತಿಯ ಭದ್ರ ಬುನಾದಿಯ ಮೇಲೆ ನಿಂತಿದೆ ನಮ್ಮ ಮನೆ || ಪ || ತಾಯಿಯ ಮಮತೆಯ ತಂದೆಯ ಪ್ರೀತಿಯ ಸೆಲೆಯಲಿ ತೆರೆದಿದೆ ನಮ್ಮ ಮನೆ ಅಜ್ಜಿಯ ಕಥೆಯ ಅಜ್ಜನ ಶಿಸ್ತಿನ ನಿಲುವಲಿ ನಿಂತಿದೆ ನಮ್ಮ ಮನೆ || 1 || ಹಕ್ಕಿಗಳುಲಿವಿಗೆ ನೇಸರನುದಯಕೆ ಏಳುವರೆಲ್ಲರು ಮುದದಿಂದ ಮೀಯುತ ಮಡಿಯಲಿ ನೆನೆಯುತ ದೇವಗೆ ಭಕುತಿಯ ನಮನ ಕರದಿಂದ || 2 || ಅಕ್ಕತಂಗಿಯರ […]

Read More

ಭರತ ಭೂಮಿ ನನ್ನ ತಾಯಿ (ರಚನೆ – ಕುವೆಂಪು)

ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು || ಪ || ತುಹಿನ ಗಿರಿಯ ಸಿರಿಯ ಮುಡಿಯ ಹಿರಿಯ ಕಡಲು ತೊಳೆಯುವಡಿಯ ಪೈರು ಪಚ್ಚೆ ಪಸುರಿನುಡೆಯ || ಅ.ಪ || ಸಿಂಧು ಯಮುನೆ ದೇವ ಗಂಗೆ ತಪತಿ ಕೃಷ್ಣೆ ಭದ್ರೆ ತುಂಗೆ ಸಲಿಲ ತೀರ್ಥ ಪುಣ್ಯ ರಂಗೆ || 1 || ಮತದ ಬಿರುಕುಗಳನು ತೊರೆವೆ ನುಡಿಗಳೊಡಕುಗಳನು ಮರೆವೆ ತೊತ್ತ ತೊಡಕುಗಳನು ಬಿರಿವೆ ಸ್ವಾತಂತ್ರ್ಯದ ಸ್ವರ್ಗಕೇರೆ ಪುಣ್ಯದೇಣಿ ಮೆಟ್ಟಿಲು […]

Read More

ಎಲೆಗಳು ನೂರಾರು (ರಚನೆ – ಹೆಚ್.ಎಸ್. ವೆಂಕಟೇಶಮೂರ್ತಿ)

ಎಲೆಗಳು ನೂರಾರು ಭಾವದ ಎಲೆಗಳು ನೂರಾರು ಎಲೆಗಳ ಬಣ್ಣ ಒಂದೇ ಹಸಿರು ಜಾತಿ ಭಾಷೆ ಪಂಥ ಹಲವು ಅವುಗಳ ಹಿಂದೆ ಒಂದೇ ಒಲವು ಸಾಗೋಣ ಒಟ್ಟಿಗೆ ಸಾಗೋಣ ನಾವು ನೀವು ಸೇರಿ ಒಂದಾಗಿ ನೀಗೋಣ ಭಿನ್ನತೆ ನೀಗೋಣ ಸಾವಿರ ಹೆಜ್ಜೆ ಒಂದೇ ಗುರಿಗಾಗಿ || 1 || ಕಿಡಿಗಳು ನೂರಾರು ಬೆಳಕಿನ ಕಿಡಿಗಳು ನೂರಾರು ಬೆಳಕಿನ ಪರಿಗೆ ಒಂದೇ ಹೆಸರು ಸೂರ್ಯ ಚಂದ್ರ ಲಾಂದ್ರ ಹಣತೆ ಅವುಗಳ ಹಿಂದೆ ಒಂದೇ ಘನತೆ ತೆರೆಯೋಣ ಹೃದಯ ತೆರೆಯೋಣ ನಾವು […]

Read More

ಹೊಸ ಹರೆಯದ ಛಲ ಉತ್ಸಾಹ

ಹೊಸ ಹರೆಯದ ಛಲ ಉತ್ಸಾಹ ಕೃತಿ ರೂಪದಿ ಪರಿವರ್ತಿಸಲಿ ಭಾರತ ಮಾತೆಯ ಕೀರ್ತಿಧ್ವಜ ಬಾನೆತ್ತರದಿ ನರ್ತಿಸಲಿ || ಪ || ಕೀಳರಿಮೆಯ ಕಿತ್ತೆಸೆಯೋಣ ಹೃದಯ ಹೃದಯಗಳ ಬೆಸೆಯೋಣ ನಾರೀ ಶಕ್ತಿಯ ಸಂಘಟಿಸಿ ನಾಡಿನ ಸೇವೆಯ ಗೈಯೋಣ || 1 || ತಾಯ್ನೆಲದೇಕತೆ ಏಳಿಗೆಗೆ ವೀರಪ್ರತಿಜ್ಞೆಯ ಸ್ವೀಕರಿಸಿ ಪರಮ ವೈಭವದ ಸಾಧನೆಗೆ ಜೀವನವನು ಮುಡಿಪಾಗಿರಿಸಿ || 2 ||

Read More