ಭಾರತಿ ನಿನ್ನಯ ವೈಭವಕಾಗಿ

ಭಾರತಿ ನಿನ್ನಯ ವೈಭವಕಾಗಿ
ದುಡಿವೆವು ಸಾವಿರ ಹಗಲಿರುಳು…
ಕೇಶವ ತೋರಿದ ಗುರಿಯನು ತಲುಪಲು
ಅರ್ಪಿತ ಜೀವನ ಕುಸುಮಗಳು… || ಪ ||

ಗೋಪುರ ಶಿಖರದಿ ಹೊನ್ನಿನ ಕಳಶ
ಧನ್ಯವು ಹೊತ್ತಿಹ ಕಂಬಗಳು…
ಸಂಘಮಂದಿರಕೆ ತನುಮನ ಅರ್ಪಿಸಿ
ಮಣ್ಣಲಿ ಹೂತಿಹ ಕಲ್ಲುಗಳು… || 1 ||

ದ್ವಂದ್ವಗಳಿಲ್ಲದ ಸಮತೆಯ ಭಾವ
ನಮ್ಮೊಳಗಿರುವ ನಿಜಧ್ಯಾನ…
ಜಗದೇಕಾತ್ಮತೆಯು ನಮ್ಮೊಳಗಿದ್ದರೆ
ಅದುವೇ ಹದವರಿತಾತ್ಮಜ್ಞಾನ… || 2 ||

ಧ್ಯೇಯಸಾಧನೆಗೆ ಪ್ರತಿಫಲವಿರದು
ಅಲ್ಲಿದೆ ಸಂತನ ಆತ್ಮತೃಪ್ತಿ…
ಹೆಗಲೇ ಸವೆದರು ಕಾರ್ಯವು ನಿಲ್ಲದು
ಅಕ್ಷಯ ಉಜ್ವಲ ರಾಷ್ಟ್ರಭಕ್ತಿ… || 3 ||

Leave a Reply

Your email address will not be published. Required fields are marked *

*

code