ಮಾತೆ ನಿನ್ನಯ ದಿವ್ಯ ಚರಣಕೆ

ಮಾತೆ ನಿನ್ನಯ ದಿವ್ಯ ಚರಣಕೆ ನಮ್ಮ ಕಾಯವು ಬೀಳಲಿ ಶೌರ್ಯ… ತ್ಯಾಗದ ಸಂಗಮದಲಿ ಜಗದ ಉನ್ನತಿಯಾಗಲಿ ವಿಶ್ವವೇ ತಲೆಬಾಗಲಿ… || ಪ || ದೇಶಭಕ್ತಿಯು ಪ್ರಕಟವಾಗಲಿ ತೊರೆದು ಮನಸಿನ ಆಮಿಷ ತೋಳಶಕ್ತಿ ಬಲಾಢ್ಯವಾಗಲಿ ವ್ಯಕ್ತವಾಗುತ ಪೌರುಷ ವೀರತನವಿದು ದೇಶಕೋಸ್ಕರ, ಹಾರಿ ಮುಟ್ಟಲು ಆಗಸ ವೈರಿ ನಾಶದಿ ಸಂತಸ… || 1 || ನಮ್ಮ ಹಿರಿಯರ ಕನಸಿನಂತೆ ಭಾರತಿಯು ತಲೆಯೆತ್ತಲಿ ಕಡಲ ಅಲೆಗಳ ಓಟದಂತೆ ದೇಶಕಾರ್ಯವು ಸಾಗಲಿ ಹಿಂದು ಕಲಿಗಳ ಶಕ್ತಿಯಿಂದ ಶತ್ರು ಕಾಯವು ಬೀಳಲಿ ಅಂಧಕಾರವು ತೊಲಗಲಿ… […]

Read More

ಬಂದಿಹುದು ಶುಭ ಗಳಿಗೆ…

ಬಂದಿಹುದು ಶುಭ ಗಳಿಗೆ, ಪರಿವರ್ತನೆಯ ಕಡೆಗೆ ಕೃತಿರೂಪದಾರತಿಯ ಬೆಳಗ ಬನ್ನಿ || ಪ || ಸ್ವಾರ್ಥಲಾಲಸೆ ದಿಗಿಲು, ತ್ಯಾಗಸೇವೆಯೆ ಮಿಗಿಲು ಕೊರತೆ ಕಲುಷವ ನೀಗಿ, ಸಾಮರಸ್ಯದಿ ಸಾಗಿ ನೆಮ್ಮದಿಯ ಬಾಳ ಬಗೆ ಬರಲಿ ಇಳೆಗೆ ಕೃತಿರೂಪದಾರತಿಯ ನಾವು ಬೆಳಗೆ || 1 || ವಿಕೃತಿಯು ವಿಭ್ರಮಿಸಿ, ಸಂಸ್ಕೃತಿಯ ಹದಗೆಡಿಸಿ ಮನೆಮನೆಯ ಮನಮನವ, ಬೆಸೆವ ಬಂಧುರ ಭಾವ ಪರಿವಾರದಾಧಾರ ದೇಶಕಾಧಾರ ಕೃತಿರೂಪದಾರತಿಯ ನೈಜ ಸಾಕಾರ || 2 || ಸುಖದಾಹ ಮಿತಿಮೀರಿ, ಭೂರಮೆಗೆ ಒಡಲ ಉರಿ ಜಲ ವಾಯು […]

Read More

ಸುರಿಯಲಿ ತಂಪೆರೆಯಲಿ

ಸುರಿಯಲಿ ತಂಪೆರೆಯಲಿ ಜೀವನಪ್ರೀತಿಯ ಮಳೆ ಹರಿಯಲಿ ಭೋರ್ಗರೆಯಲಿ ಬತ್ತಿದೆಡೆಗಳಲೀ ಹೊಳೆ ಕೊಚ್ಚಿಹೋಗಲಿ ಸ್ವಾರ್ಥ ದುರಾಸೆ ಸ್ವಚ್ಛವಾಗಲಿ ಇಳೆ || ಪ || ಚಿಮ್ಮಲಿ ಹಚ್ಚನೆ ಹಸಿರು ನಿರ್ಮಲವಾಗಲಿ ಉಸಿರು ಮತ್ತೆ ಆಗಲಿ ವಸುಂಧರೆ ಸಕಲ ಜೀವಿಗಳಿಗಾಸರೆ …ಕೊಚ್ಚಿಹೋಗಲಿ || 1 || ಧುಮ್ಮಿಕ್ಕಿ ಧುಮುಕಿ ಜಲಪಾತ ನೀಡಿ ಜಡತೆಗೆ ಆಘಾತ ಹೊಮ್ಮಿಸಲಿ ಹೊಸಚೇತನ ಕ್ರಿಯಾಶೀಲತೆಗೆ ಇಂಧನ …ಕೊಚ್ಚಿಹೋಗಲಿ || 2 || ತೊನೆಯಲಿ ತೆನೆ ಹೊಂದೇರು ಅಡಗಲಿ ಹಸಿವಿನ ಚೀರು ಅರಳಲಿ ಎಲ್ಲೆಡೆ ಹೂನಗೆ ಹಾಯ್ ಎನಿಸಲಿ […]

Read More

ಬೆಚ್ಚನೆಯ ಗೂಡು

ಬೆಚ್ಚನೆಯ ಗೂಡು ಇದು ನೆಚ್ಚಿ ನಾವಿರಲು ಹಚ್ಚ ಹಸಿರಿನ ನೆಳಲು ಬಿಚ್ಚು ಮನವಿರಲು || ಪ || ತುರು ಕರೆವ ತಿಳಿಹಾಲು ಹೊಳೆಹರಿದುನಿಂದು ತರುತಂಪು ತಿಳಿಗಾಳಿ ಒಳಸಾರಿ ಬಳಿಬಂದು ತಮವಡಗಿ ಇಳೆಬೆಳಗಿ ಕಳೆಕಟ್ಟಿತಿಲ್ಲಿಂದು ತರವಿಲ್ಲ ಗೃಹಗೇಹದೊಳಗಿಂತ ಮತ್ತೊಂದು || 1 || ಪಡುವಣದ ರವಿಕಿರಣ ಪೂರ್ವದಿಂದಲೆ ಪಯಣ ಅಡಿಮೊದಲು ಮನೆಯಲ್ಲಿ ಆತನೊಂದಿಗೆ ಗಮನ ಮಡಿಯಾಗಿ ಮನಕಾಯ ಹೊಸಿಲುಗೋವಿಗೆ ನಮನ ಅಡಿಗೆರಗಿ ಶ್ರೀತುಳಸಿ ತೀರ್ಥ ಅಮೃತಪಾನ || 2 || ಬಗೆಬಗೆಯ ರಸಭಾವ ಶುಚಿರುಚಿಯ ಸಾರ ಹಗೆಹೊಗೆಯ ಜಾಡಿಲ್ಲ […]

Read More

ಯುವಶಕ್ತಿಯು ಸಿಡಿದೇಳಲಿ

ಯುವಶಕ್ತಿಯು ಸಿಡಿದೇಳಲಿ ನವಭಾರತ ನಿರ್ಮಿತಿಗೆ ಸುಮುಹೂರ್ತವು ಬಂದೊದಗಿದೆ ಘನಧ್ಯೇಯದ ಸ್ವೀಕೃತಿಗೆ | ಸಚ್ಚರಿತೆಯ ಕಡಲಾಳದ ಬಡಬಾನಲವನ್ನು ಬಡಿದೆಬ್ಬಿಸಿ ಎಚ್ಚರಿಸಲು ತಡವೇತಕೆ ಇನ್ನೂ? || ಪ || ಉತ್‍ಸ್ಫೂರ್ತಿಯ ಇತಿಹಾಸದ ಓ ವಾರಸುದಾರ ಸತ್ಕೀರ್ತಿಯ ಹೆಗ್ಗುರಿಯೆಡೆ ಮುನ್ನುಗ್ಗುತ ಬಾರಾ ಶತಶತಕದ ಹೊಂಗನಸನು ನನಸಾಗಿಸೊ ಈಗ ಗತವೈಭವ ಮರುಗಳಿಕೆಗೆ ಹೊರಹೊಮ್ಮಲಿ ತ್ಯಾಗ || 1 || ಧಿಕ್ಕರಿಸುತ ರಕ್ಕಸತೆಯ ಪೈಶಾಚಿಕ ನೃತ್ಯ ಹುಟ್ಟಿಳಿಸುತ ಧರ್ಮಾಂಧರ ದುರ್ಮಾಗದ ಕೃತ್ಯ ನಯವಂಚಕ ಗೋಹಂತಕರಂತಿಮ ಕ್ಷಣ ಬಂತು ಭಯ ಅಂಜಿಕೆ ಕಿತ್ತೆಸೆಯದೆ ನಾಡುಳಿಯುವುದೆಂತು? || […]

Read More

ಶತಶತಮಾನದ ಕನಸಿನ ಬಿತ್ತು

ಶತಶತಮಾನದ ಕನಸಿನ ಬಿತ್ತು ಹೊಸಬೆಳಕಿಗೆ ಕಣ್ದೆರೆಯುವ ಹೊತ್ತು ಪಲ್ಲವಿಸಲಿ ಸಂವರ್ಧಿತವಾಗಲಿ ನೆತ್ತರು ಬೆವರಿನಲಿ – ಸಾಹಸ ಚರಿತದಲಿ || ಪ || ಮಳಲನು ಸುರಿಯಲಿ ಅಳಿಲಿನ ಭಕ್ತಿ ಶಿಲೆ ಬಂಡೆಗಳನು ಹನುಮನ ಶಕ್ತಿ ಜಲಧಿಗೆ ಸೇತುವೆ ಅಳಿಯದ ಕೀರ್ತಿ ಒಲಿವುದು ಪರದೈವ – ಸಲಿಸಲು ಕರ್ತವ್ಯ || 1 || ಹಿಗ್ಗದೆ ಜಯಹಾರಕೆ ಹೊಗಳಿಕೆಗೆ ಕುಗ್ಗದೆ ಸೋಲಿಗೆ ನಿಂದೆಯ ನುಡಿಗೆ ಒಗ್ಗುತ ಸಂಘದ ರೀತಿಗೆ ನೀತಿಗೆ ಅರ್ಪಿತವೆನ್ನೋಣ – ತನು ಮನ ಧನ ಪ್ರಾಣ || 2 […]

Read More

ಕಲ್ಪನೆಯ ಹಕ್ಕಿ ಗರಿಬಿಚ್ಚಿ ಆಗಸದಿ ಕೊರಳೆತ್ತಿ ಸಾರುತಿದೆ ಕೇಳಿ

ಕಲ್ಪನೆಯ ಹಕ್ಕಿ ಗರಿಬಿಚ್ಚಿ ಆಗಸದಿ ಕೊರಳೆತ್ತಿ ಸಾರುತಿದೆ ಕೇಳಿ ಸ್ವಾಗತಕೆ ಕಾದಿಹೆವು ಪರಿವರ್ತನೆಯ ಕಾಲ ಸಾಕಿನ್ನು ಜಡತೆ ಎದ್ದೇಳಿ ಮೇಲೆದ್ದು ನಿಲಲಿ ಪೌರುಷವೇ ಮೈದಾಳಿ || ಪ || ನಾಡಸೇವೆಯ ಪಥದಿ ನೆರಳು ನಿಲುಗಡೆಯಿಲ್ಲ ಪಾಂಚಜನ್ಯವು ಮೊಳಗೆ ಕ್ಲೈಬ್ಯ ಸಲ್ಲ ಸಾಮರಸ್ಯದ ಸುಧೆಯ ಹರಿಸುವ ಭಗೀರಥರು ಪೂರ್ಣತೆಯ ಪಡೆವನಕ ನಿಲುವರಲ್ಲ || 1 || ಡಂಭರವು ಧನಭವನ ಸೌಖ್ಯ ತಂತ್ರಜ್ಞಾನ ಅರ್ಥ ಕಾಮವೇ ವಿಕಾಸವಲ್ಲ ಅಂಬರವನಾಳುವೆವು ಅಂಗಳದ ನೆಲೆಬಿಡದೆ ಧರ್ಮ ಸಂಸ್ಕೃತಿಗೆ ಪರ್ಯಾಯವಿಲ್ಲ || 2 || […]

Read More

ಬಿಂದು ಬಿಂದು ಒಂದುಗೂಡಿ ಸಿಂಧು ಎನಿಪುವಂತೆ

ಬಿಂದು ಬಿಂದು ಒಂದುಗೂಡಿ ಸಿಂಧು ಎನಿಪುವಂತೆ ನೂರು ಕೋಟಿ ಭಾರತೀಯರೊಂದುಗೂಡುವಂತೆ || ಪ || ಭಾಷೆ ವೇಷ ಕಲೆಯ ಬಲವು ಎದ್ದು ನಿಲ್ಲುವಂತೆ ಮಾನವತೆಯ ಹೃದಯದೊಲವ ಜಗಕೆ ಸಾರುವಂತೆ || 1 || ಧುಮ್ಮಿಕ್ಕುತ ಭೋರ್ಗರೆದಿದೆ ಭರತವರ್ಷ ಸಾಗರ ಎದೆ ಎದೆಯಲಿ ಝೇಂಕರಿಸಿದೆ ಭ್ರಾತೃತ್ವದ ಬಂಧುರ || 2 || ಕಣ ಕಣದಲಿ ಮಿಡಿಯುತಲಿದೆ ಶಾಂತಿಮಂತ್ರದಿಂಚರ ಭಾರತೀಯ ಮನುಜ ಮನವು ವಿಶ್ವಪ್ರೇಮದಾಗರ || 3 || ಆಗಸದಿಂದನವರತವು ಸುರಿವುದಿಲ್ಲಿ ಹೂಮಳೆ ಬೆಂದ ಹೃದಯದಾಳದಲ್ಲಿ ಬಂಧ ಬೆಸೆವುದೀ ಇಳೆ […]

Read More

ಬಾಗಿಲನು ತೆರೆದಿರಿಸಿ ಸ್ವಾಗತಕೆ ಕಾದಿಹೆವು

ಬಾಗಿಲನು ತೆರೆದಿರಿಸಿ ಸ್ವಾಗತಕೆ ಕಾದಿಹೆವು ಸದ್ವಿಚಾರದ ಧಾರೆ ಹರಿದು ಬರಲಿ ಶುದ್ಧ ಸಾತ್ವಿಕ ಪ್ರೇಮಸುಧೆಯುಂಡ ಹೃದಯಗಳು ಜತೆಗೂಡಿ ಭಾರತಕೆ ಕೀರ್ತಿ ತರಲಿ || ಪ || ಭೂರಮೆಯ ಭವನಕಿದೆ ಆಧ್ಯಾತ್ಮ ತಳಹದಿಯು ಸಂಗೀತ ನೃತ್ಯಾದಿ ಕಲೆಯ ದ್ವಾರ ‘ಶಾಸ್ತ್ರ’ ಬೆಳಗುವ ದೀಪ್ತಿ ‘ಕ್ಷಾತ್ರ’ ರಕ್ಷಿಪ ಭಿತ್ತಿ ಸ್ನೇಹ ಬಯಸುವ ಮನಕೆ ತೆರೆದ ದ್ವಾರ || 1 || ಶಿಲೆ ಶಿಲೆಯು ಹೊಮ್ಮಿಸುವ ಸಮರಸದ ಸುರನಾದ ಜನ ಮನವ ಬೆಸೆಯುತಿಹ ನವ್ಯ ವೇದ ಧ್ಯೇಯ ಪ್ರಣತಿಯ ಪ್ರಭೆಯ ಪ್ರತಿಫಲಿಸುತಿದೆ […]

Read More

ಏಳಿ ಎದ್ದೇಳಿ, ಹಿಂದುತ್ವ ಮೈತಾಳಿ

ಏಳಿ ಎದ್ದೇಳಿ, ಹಿಂದುತ್ವ ಮೈತಾಳಿ, ಏಳಿ ಎದ್ದೇಳಿ ಸತ್ಯರತ ಸರ್ವಹಿತ ಹಿಂದುತ್ವದಮರ ಪಥ || ಪ || ತಮ್ಮದೇ ದಿಟವೆಂಬ ವಿವಿಧ ವಾದವಿವಾದ ಕಪಟ ವಂಚನೆ ಕ್ರೌರ್ಯ ದಾಸ್ಯ ದಮನದ ಪರ್ವ ದ್ವೇಷ ಸಂಘರ್ಷಗಳ ಹಾಲಾಹಲವ ಕುಡಿದು ಸಹಿಸಿ ಸಾವನು ಗೆದ್ದ ನೀಲಕಂಠನ ತೆರದಿ ಮತ್ತೆ ಮೇಲೆದ್ದಿಹುದು ಅಮರ ಹಿಂದುತ್ವ || 1 || ಸುಖದಾಸೆ ಮಿತಿಮೀರಿ ಭುವಿಯೊಡಲ ಬಿಸಿಯೇರಿ ಪರಿಸರವು ಹದಗೆಡಲು ಜೀವಕುಲ ನಲುಗಿರಲು ತ್ಯಾಗತಪಗಳ ಸರಳ ಸಹಜ ಜೀವನ ನಡೆಸಿ ನಾಕವನು ಮೀರಿಸುವ ಧರೆಯನಾಗಿಸಲೆಂದು […]

Read More