ಏಳಿ ಎದ್ದೇಳಿ, ಹಿಂದುತ್ವ ಮೈತಾಳಿ

ಏಳಿ ಎದ್ದೇಳಿ, ಹಿಂದುತ್ವ ಮೈತಾಳಿ, ಏಳಿ ಎದ್ದೇಳಿ
ಸತ್ಯರತ ಸರ್ವಹಿತ ಹಿಂದುತ್ವದಮರ ಪಥ || ಪ ||

ತಮ್ಮದೇ ದಿಟವೆಂಬ ವಿವಿಧ ವಾದವಿವಾದ
ಕಪಟ ವಂಚನೆ ಕ್ರೌರ್ಯ ದಾಸ್ಯ ದಮನದ ಪರ್ವ
ದ್ವೇಷ ಸಂಘರ್ಷಗಳ ಹಾಲಾಹಲವ ಕುಡಿದು
ಸಹಿಸಿ ಸಾವನು ಗೆದ್ದ ನೀಲಕಂಠನ ತೆರದಿ
ಮತ್ತೆ ಮೇಲೆದ್ದಿಹುದು ಅಮರ ಹಿಂದುತ್ವ || 1 ||

ಸುಖದಾಸೆ ಮಿತಿಮೀರಿ ಭುವಿಯೊಡಲ ಬಿಸಿಯೇರಿ
ಪರಿಸರವು ಹದಗೆಡಲು ಜೀವಕುಲ ನಲುಗಿರಲು
ತ್ಯಾಗತಪಗಳ ಸರಳ ಸಹಜ ಜೀವನ ನಡೆಸಿ
ನಾಕವನು ಮೀರಿಸುವ ಧರೆಯನಾಗಿಸಲೆಂದು
ಮತ್ತೆ ಸಾರುತಲಿಹುದು ಅಮರ ಹಿಂದುತ್ವ || 2 ||

ವ್ಯಕ್ತಿಯೇ ಆಧಾರ ಜನಹಿತದ ಹರಿಕಾರ
ದೀನಹೀನನೆ ದೇವ ಸೇವೆ ಜೀವನವ್ರತವು
ಸಮರಸದ ಸಹಬಾಳ್ವೆ ನಿತ್ಯಸಾಧನೆಗೈದು
ಸಂಘಶಕ್ತಿಯ ಬಲದಿ ದೇಶಧರ್ಮವನುಳಿಸಿ
ಮತ್ತೆ ಮೆರೆಯುತಲಿಹುದು ಅಮರ ಹಿಂದುತ್ವ || 3 ||

Leave a Reply

Your email address will not be published. Required fields are marked *

*

code