ಬಂದಿಹುದು ಶುಭ ಗಳಿಗೆ, ಪರಿವರ್ತನೆಯ ಕಡೆಗೆ
ಕೃತಿರೂಪದಾರತಿಯ ಬೆಳಗ ಬನ್ನಿ || ಪ ||
ಸ್ವಾರ್ಥಲಾಲಸೆ ದಿಗಿಲು, ತ್ಯಾಗಸೇವೆಯೆ ಮಿಗಿಲು
ಕೊರತೆ ಕಲುಷವ ನೀಗಿ, ಸಾಮರಸ್ಯದಿ ಸಾಗಿ
ನೆಮ್ಮದಿಯ ಬಾಳ ಬಗೆ ಬರಲಿ ಇಳೆಗೆ
ಕೃತಿರೂಪದಾರತಿಯ ನಾವು ಬೆಳಗೆ || 1 ||
ವಿಕೃತಿಯು ವಿಭ್ರಮಿಸಿ, ಸಂಸ್ಕೃತಿಯ ಹದಗೆಡಿಸಿ
ಮನೆಮನೆಯ ಮನಮನವ, ಬೆಸೆವ ಬಂಧುರ ಭಾವ
ಪರಿವಾರದಾಧಾರ ದೇಶಕಾಧಾರ
ಕೃತಿರೂಪದಾರತಿಯ ನೈಜ ಸಾಕಾರ || 2 ||
ಸುಖದಾಹ ಮಿತಿಮೀರಿ, ಭೂರಮೆಗೆ ಒಡಲ ಉರಿ
ಜಲ ವಾಯು ಭುವಿಯ ಕ್ಷತಿ, ಮಲಿನತೆಗೆ ಇರಲಿ ಮಿತಿ
ಹೊತ್ತ ತಾಯಿಯ ಚಿತ್ತ ಸಂಭ್ರಮಿಸುವತ್ತ
ಕೃತಿರೂಪದಾರತಿಯ ಬೆಳಗಲತ್ತ || 3 ||
ಸರ್ವಸಮ ಭಾವನೆಯು, ಚಿರಸೌಖ್ಯ ಸಾಧನೆಯು
ಸಂಘಬಲ ಹಿಂದುತ್ವ, ಗುರಿ ವಿಶ್ವಬಂಧುತ್ವ
ವಿಶ್ವಗುರು ಭಾರತವು ಜಗದಿ ನಲವು
ಕೃತಿರೂಪದಾರತಿಯ ದಿವ್ಯ ಫಲವು || 4 ||