ಬಿಂದು ಬಿಂದು ಒಂದುಗೂಡಿ ಸಿಂಧು ಎನಿಪುವಂತೆ

ಬಿಂದು ಬಿಂದು ಒಂದುಗೂಡಿ ಸಿಂಧು ಎನಿಪುವಂತೆ
ನೂರು ಕೋಟಿ ಭಾರತೀಯರೊಂದುಗೂಡುವಂತೆ || ಪ ||

ಭಾಷೆ ವೇಷ ಕಲೆಯ ಬಲವು ಎದ್ದು ನಿಲ್ಲುವಂತೆ
ಮಾನವತೆಯ ಹೃದಯದೊಲವ ಜಗಕೆ ಸಾರುವಂತೆ || 1 ||

ಧುಮ್ಮಿಕ್ಕುತ ಭೋರ್ಗರೆದಿದೆ ಭರತವರ್ಷ ಸಾಗರ
ಎದೆ ಎದೆಯಲಿ ಝೇಂಕರಿಸಿದೆ ಭ್ರಾತೃತ್ವದ ಬಂಧುರ || 2 ||

ಕಣ ಕಣದಲಿ ಮಿಡಿಯುತಲಿದೆ ಶಾಂತಿಮಂತ್ರದಿಂಚರ
ಭಾರತೀಯ ಮನುಜ ಮನವು ವಿಶ್ವಪ್ರೇಮದಾಗರ || 3 ||

ಆಗಸದಿಂದನವರತವು ಸುರಿವುದಿಲ್ಲಿ ಹೂಮಳೆ
ಬೆಂದ ಹೃದಯದಾಳದಲ್ಲಿ ಬಂಧ ಬೆಸೆವುದೀ ಇಳೆ || 4 ||

ವಿವಿಧತೆಯಲಿ ಏಕತೆಯಿಹ ಹೊಸತು ಶಕ್ತಿ ಹೊಮ್ಮಲಿ
ದ್ವೇಷದುರಿಯ ಶಾಂತಗೊಳಿಸಿ ಪ್ರೀತಿ ಧಾರೆ ಹೊಮ್ಮಲಿ || 5 ||

Leave a Reply

Your email address will not be published. Required fields are marked *

*

code