ತಂದೆನಯ್ಯಾ ತಮ್ಮಾ ತಂದೆನಯ್ಯಾ ಸ್ನೇಹದ ಹಸ್ತವ ಪ್ರೀತಿಯ ಹೃದಯವ || ಪ || ಮಾರು ದೂರ ಇದ್ದುಕೊಂಡು ಸಂಘವನ್ನು ಹಳಿಯಬೇಡ ತನ್ನನ್ನೇ ತಿದ್ದಿಕೊಂಡು ಓಡಿಬಂದು ಕರ್ಮವ ನೋಡ ನೋಡಿದಲ್ಲಿ ಮರೆವೀ ನೀನು ತಂತನವನು ತಮ್ಮಾ || 1 || ಹೆದರಿ ಹೆದರಿ ಸರಿಯಬ್ಯಾಡ ಉದುರಿ ಉದುರಿ ಹೋಗಲು ಬ್ಯಾಡ ಹೇಡಿತನವ ಬಿಟ್ಟು ತಮ್ಮಾ ಧೈರ್ಯತನವ ತಂದು ಮುಂದು ವೀರಭದ್ರನಾಗು ತಮ್ಮಾ ಭದ್ರನಾಗಿರು || 2 || ಮನಸ್ಸಿನ ಭೇದವ ಬಿಟ್ಟು ಕನಸಿನ ರೋಷವ ಕಟ್ಟು ಕನಸು ಮನಸು […]
ಜಯ ಜಯ ಜಯ ಜನ್ಮಭೂಮಿ ಜಯ ಜಯ ಜಯ ಮಾತೃಭೂಮಿ || ಪ || ಆಕಾಶಗಂಗೆ ಇಳಿದು ಬಂದ ಭೂಮಿ ಶ್ರೀ ಕೃಷ್ಣಗೀತೆಯ ಅಮೃತವಿತ್ತ ಭೂಮಿ || ಅ.ಪ || ಸ್ನೇಹದ ಕುಸುಮಮಾಲೆ ಧರಿಸಿದ ಭೂಮಿ ತ್ಯಾಗಿಗಳು ಜನಿಸಿರುವ ಪಾವನ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತಭೂಮಿ ಭಾಸುರಭೂಮಿ || 1 || ಹೈಮಾದ್ರಿ ವಿಂಧ್ಯಗಳ ಉನ್ನತಭೂಮಿ ಕಾವೇರಿ ಗಂಗೆಗಳು ಹರಿಯುವ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತಭೂಮಿ ಭಾಸುರಭೂಮಿ || 2 ||
ಭಾರತಿಯು ಇರಬೇಕು ಅನುದಿನ ಸಸ್ಯಸ್ಯಾಮಲೆಯಾಗುತ ಹಸಿರು ಹೊನ್ನಿನ ಬೆಲೆಯನರಿಯಲಿ ಜನತೆಯಾಗಲಿ ಜಾಗೃತ || ಪ || ತುಂಬಿ ನಿಲ್ಲಲಿ ತುಂಬ ಗಿಡಮರ ಬಿಂಬಿಸಲಿ ವನಸಿರಿಯನು ಕಂಪನೊಯ್ಯಲು ಪವನ, ಮಳೆಹನಿ ತಂಪುಗೈಯಲಿ ನೆಲವನು || 1 || ಬೆಳೆಯು ಬೆಳೆಯಲಿ ಇಳೆಯು ಬೆಳಗಲಿ ಕಳೆಯ ನಗುಮೊಗ ತೋರಲಿ ಒಸರು ಹೊರಡಲಿ ಹಸಿರು ಹರಡಲಿ ಹೊಸತು ಉಸಿರಲಿ ಹಾಡಲಿ || 2 || ಮರುಳು ಮಾಡುತ ವನವ ಕೆಡವುತ ಮರಳುಗಾಡನು ತರುವರೇ? ಮರಳಿಬಾರದು ಭೂಮಿ, ಅರಳದು ತಿರುಳು ತೀರಲು, ತಿಳಿಯರೇ? […]
ಒಂದ ದಿನ ಸಂಜೆಯ ಹೊತ್ತಿನಲಿ ಹೊರಬಿದ್ದೆನು ನಮ್ಮೂರ ಹಾದಿಯಲಿ ನಮ್ಮೂರ ಶಾಲೆಯ ಅಂಗಳದಲ್ಲಿ ಕಂಡರು ಕೆಲ ಬಾಲಕರು ಕಾವಿಧ್ವಜದಡಿ || ಪ || ಬಾಲಕರು ಆಡುತ್ತಿದ್ದ ಆಟದ ಮೋಡಿ ನಿಲ್ಲಿಸಿತು ನನ್ನ ಅಲ್ಲೇ ಗೆಳೆಯರ ಕೂಡಿ ಹಾಡುತ್ತಿದ್ದ ದೇಶಭಕ್ತಿ ಹಾಡಿನ ಹೊನಲು ಕೇಳುತಲಿ ನಿಂತೆ ಕಡೆಗೆ ಪ್ರಾರ್ಥನೆ ಸಾಲು || 1 || ಹೊರಬಿದ್ದ ಹುಡುಗರ ಆ ಗುಂಪಿನ ಗೆಳೆಯ ನನ್ನ ಬಳಿ ಬಂದು ಕೇಳಲೆನ್ನ ಪರಿಚಯ ಎನಗವರ ಅವರಿಗೆನ್ನ ಪರಿಚಯವಾಗೆ ದಿನನಿತ್ಯ ಹೋಗುತ್ತಿದ್ದೆ ಶಾಖೆಯ ಕಡೆಗೆ […]
ಹಮ ಭಾರತ ಮಾ ಕೀ ಸಂತಾನೇ ಹಮ ಮಾತೃಭೂಮಿ ಹಿತ ಜೀತೇ ಹೈ ಹಮ ಶೂರ ವೀರ ಹಮ ಭರತಪುತ ಸಿಂಹೋ ಸೇ ಬೇಲಾ ಕರತೇ ಹೈ || ಪ || ಇಸ ಭೂಮಂಡಲ ಪರ ಭಾರತ ಹೀ ವಿಶ್ವಗುರು ಕಹಲಾಯಾ ಹೈ ಭಾರತ ನೇ ಸಾರೇ ಜಗಕೋ ಜೀನೇ ಕಾ ಢಂಗ ಸಿಖಾಯಾ ಹೈ ಜ್ಞಾನೀ ಋಷಿ ಮುನಿಯೋ ಕೀ ಹಮ ಕರ ಜೋಡ ವಂದನಾ ಕರತೇ ಹೈ || 1 || ದೇಶ ಕೀ […]
ಶಾರದೆಯ ಸದನವಿದು ರಾಷ್ಟ್ರದೀಕ್ಷೆಯ ಭವನ ಪೂರ್ಣತೆಯ ಪಥಿಕನಿಗೆ ದೀಪಗಂಬ ತನ್ನರಿವ ತಾ ಗಳಿಸಿ ರಾಷ್ಟ್ರದುನ್ನತಿ ಬಯಸಿ ಮುನ್ನಡೆವ ಸಾಧಕನ ಸ್ಫೂರ್ತಿ ಬಿಂಬ || ಪ || ಲೋಕ ಹಿತದಾಶಯದ ಋಷಿತುಲ್ಯ ಸಾಧಕರ ಕಲ್ಪನೆಯ ಕುಸುಮಗಳು ಅರಳಿಹವು ಇಲ್ಲಿ. ಕಾಯಿಗಳು ಮಾಗಿಹವು, ಸಫಲತೆಯ ಪಡೆದಿಹವು ದಶದಿಶೆಗೆ ಏಕತೆಯ ಬೀಜ ಚೆಲ್ಲಿ || 1 || ಶೈಶವದ ತೊದಲ್ನುಡಿಗೆ, ಬಾಲ್ಯದಾಟದ ಮನಕೆ ಹೊಸ ಶೋಧ ಕೆಳಸುತಿಹ ಯುವ ಮನಸಿಗೆ ದೇಶವೇ ಮೊದಲೆಂಬ ಸಂಸ್ಕಾರ ಕ್ಷಣಕ್ಷಣವು ಹೊಸ ದೃಷ್ಟಿ, ಹೊಸ ದಿಕ್ಕು […]
ಮೇರುಸದೃಶ ಜ್ಞಾನಿ ರಾಷ್ಟ್ರಯುಗ ದ್ರಷ್ಟಾರ ಯುಗಪುರುಷ ನೀನಾದೆ ಹೇ ಮಾಧವ || ಪ || ಅಡಿಗಡಿಗೆ ಭಾರತದ ಕೀರ್ತಿಯನು ಪಸರಿಸುವ ಯೋಜನೆಯ ರೂಪಿಸಿದ ಓ ಯೋಜಕ ಪರಮವೈಭವ ಪದಕೆ ಭಾರತಿಯನೆತ್ತರಿಪ ಮಾರ್ಗದರ್ಶಕನಾದೆ ನೀ ಮಾಧವ || 1 || ಜನಮನವನೆಚ್ಚರಿಸಿ ರಾಷ್ಟ್ರವೇ ಮೊದಲೆಂದೆ ನಾನಲ್ಲ ನೀನೆಂಬ ಕರೆ ನೀಡಿದೆ ಸ್ವಾರ್ಥವಿಲ್ಲದ ತ್ಯಾಗ ಸಾರ್ಥಕವು ಎಂದೆಂಬ ಮೌಲ್ಯವನು ಜೀವನದಿ ನೀ ತೋರಿದೆ || 2 || ಮಾತೃಋಣ ತೀರಿಸುವ ಋಣಭಾರ ಎಮಗಿಹುದು ನಿತ್ಯಸಾಧನೆಯೊಂದೆ ಸನ್ಮಾರ್ಗವೆಂದೆ ಏಕಾತ್ಮಭಾವದಲೆ ಭಾರತವ ನಿರ್ಮಿಸುವ […]
ವಿದ್ಯಾಭಾರತಿ ವಿತರತಿ ನೂನಮ್ ನವಚೈತನ್ಯಮನವರತಮ್ ಋಷಿಪುತ್ರಾ ಇತಿ ಹೃದಿಮಾನಮ್ ಭವತು ಭಾರತಮ್ ನನು ಭವ್ಯಂ || ಪ || ವಿದ್ಯಾಮಂದಿರಮ ತಪೋ ಭೂರಿತಮ್ ವೀಣಾ ವಾದಿನ್ಯಾ: ಸದನಮ್ ದೃಢ ಸಂಕಲ್ಪಿತ ಮನ: ಪುನೀತಂ ನಿರ್ಮಲ ಪ್ರಾಣಾ: ಸ್ಮಿತ ವದನಮ್ ಪ್ರಖರ ಬುದ್ಧಿರಾಧ್ಯಾತ್ಮ ಚೇತನಾ ಪ್ರಸರತು ವಿಶ್ವೇ ನಿರಂತರಮ್ || 1 || ರಾಷ್ಟ್ರ ವಂದನಾ ಮಂತ್ರೋಸ್ಮಾಕಮ್ ಸಂಸ್ಕೃತಿ ರೇಷಾ ನನು ವರದಾ ಉಪೇಕ್ಷಿತಾಸ್ತು ಸಹೋದರಾ ನಃ ಶೋಷಣ ಮುಕ್ತಾಃ ಸಂತು ಸದಾ ಯಶೋಮೃತಂ ವೈ ಭಾರತ ಭೂಮೇಃ […]
ಸುದರ್ಶನಂ ಸದಾಶಿವಂ ಸದಾ ಸ್ಮರಾಮಿ ಮಾಧವಮ್ ಶುಭಂಕರಂ ಪ್ರಿಯಂ ವರಂ ಸದಾ ಸ್ಮರಾಮಿ ಮಾಧವಮ್ || ಪ || ಅಖಂಡರಾಷ್ಟ್ರನಾಯಕಂ ಸಮತ್ವಗೀತಗಾಯಕಮ್ ಸುಸಂಘಮಂತ್ರದಾಯಕಂ ಸದಾ ಸ್ಮರಾಮಿ ಮಾಧವಮ್ || 1 || ತಪೋಧನಂ ಕೃಪಾಘನಂ ಆದ್ಯಶಂಕರೋಪಮಮ್ ಸುಸಿದ್ಧಯೋಗಭಾಸ್ವರಂ ಸದಾ ಸ್ಮರಾಮಿ ಮಾಧವಮ್ || 2 || ಪ್ರಕೃಷ್ಟಧೈರ್ಯಧಾರಕಂ ವಿಮುಕ್ತಹಾಸ್ಯಸುಂದರಮ್ ಭಯಾರ್ತದೀನಬಾಂಧವಂ ಸದಾ ಸ್ಮರಾಮಿ ಮಾಧವಮ್ || 3 || ವಿಧೇಯಧೇಯತತ್ಪರಂ ಸ್ವರಾಷ್ಟ್ರಭಕ್ತಿಸಾಧಕಮ್ ‘ಇದಂ ನ ಮೇ’ ವ್ರತೋಜ್ವಲಂ ಸದಾ ಸ್ಮರಾಮಿ ಮಾಧವಮ್ || 4 ||
ಬಾs ಬಾರೊ ಬಾರೊ ಬಾರೊ ಬಾರೊs ಸಂಘದ ಶಾಖೆಗೆ ತಾಯಿ ಭಾರತಿಯ ಸೇವೆಗೆ || ಪ || ಸಿದ್ಧನಾಗು ದೇಶಿ ಆಟಕೆ ಉಸಿರು ಹಿಡಿದುಕೊ ಕಬ್ಬಡ್ಡಿಗೆ ಗೆಲ್ಲು ಛಲದಿ ಯೋಧನಂತೆ ಗಟ್ಟಿಯಾಗಲಿ ಶರೀರಕೆ ಆಟಗಳದಿ ಉಲ್ಲಾಸವೆದ್ದಿದೆ ಹೊಸ ಚೈತನ್ಯವು ಮೂಡಿದೆ || 1 || ಆತ್ಮರಕ್ಷಣೆಯ ಪ್ರಹಾರವು ದಿನಕರನಿಗೆ ಆಸನ ನಮನವು ಹೆಜ್ಜೆ ಹೆಜ್ಜೆ ಕೂಡಿ ನಡೆವೆವು ಶಿಸ್ತಿನ ಕ್ರಿಯೆ ಮೈತಾಳೆವು ಅಂಕತಾಳ ನಡೆಯು ಒಂದೇ ಗುರಿಯು ಒಂದೇ ನಮಗಿದೆ || 2 ||| ಹತ್ತು ಹಲವು […]