ಬಾs ಬಾರೊ ಬಾರೊ ಬಾರೊ
ಬಾರೊs ಸಂಘದ ಶಾಖೆಗೆ
ತಾಯಿ ಭಾರತಿಯ ಸೇವೆಗೆ || ಪ ||
ಸಿದ್ಧನಾಗು ದೇಶಿ ಆಟಕೆ
ಉಸಿರು ಹಿಡಿದುಕೊ ಕಬ್ಬಡ್ಡಿಗೆ
ಗೆಲ್ಲು ಛಲದಿ ಯೋಧನಂತೆ
ಗಟ್ಟಿಯಾಗಲಿ ಶರೀರಕೆ
ಆಟಗಳದಿ ಉಲ್ಲಾಸವೆದ್ದಿದೆ
ಹೊಸ ಚೈತನ್ಯವು ಮೂಡಿದೆ || 1 ||
ಆತ್ಮರಕ್ಷಣೆಯ ಪ್ರಹಾರವು
ದಿನಕರನಿಗೆ ಆಸನ ನಮನವು
ಹೆಜ್ಜೆ ಹೆಜ್ಜೆ ಕೂಡಿ ನಡೆವೆವು
ಶಿಸ್ತಿನ ಕ್ರಿಯೆ ಮೈತಾಳೆವು
ಅಂಕತಾಳ ನಡೆಯು ಒಂದೇ
ಗುರಿಯು ಒಂದೇ ನಮಗಿದೆ || 2 |||
ಹತ್ತು ಹಲವು ಕಂಠದಿಂದ
ಒಂದು ಸ್ವರವು ಮನಸ್ಸಿನಿಂದ
ಶ್ಲೋಕ-ವಚನ ಬೆಳಕಿನಿಂದ
ಮನವು ಅರಳಿತು ವಿಚಾರದಿಂದ
ನಿತ್ಯ ನವ ವಿಷಯ ಕೇಳಿ ತಿಳಿವೆವು
ರಾಷ್ಟ್ರ ಚಿಂತನೆ ಸ್ಫುರಣವು || 3 ||
ಎದುರಿಹುದು ಗುರು ಭಗವೆಯು
ಜ್ಞಾನ ಜ್ಯೋತಿಯ ಸಂಕೇತವು
ನಿತ್ಯ ಗುರುವಿಗೆ ಪ್ರಣಾಮವು
ಸಂಘ ಗುರಿಯ ಸ್ಮರಣವು
ಮಾತೆ ಭಾರತಿಯ ಪರಮ ವೈಭವ
ಅದಕೆ ಜೀವನ ಮೀಸಲು || 4 ||