ಜಯ ಭಾರತ ಜಯ ಭಾರತ ಜಯ ಭಾರತವೆನ್ನಿರಿ ಜಗನ್ಮಾತೆ ಭಾರತಿಯ ಚರಣಕೆಲ್ಲ ನಮಿಸಿರಿ || ಪ || ಮಲಗಿರುವ ಹಿಂದುಗಳ ಎಚ್ಚರಿಸಿ ಏಳಿಸುವ ಸಂಘಶಕ್ತಿ ಬೆಳದಿಹ ವಿಶ್ವರೂಪ ತೋರಿಸುವ ನವಭಾರತ ನಿರ್ಮಾಣಕೆ ಒಂದಾಗಿ ದುಡಿಯುವ ಹಿಂದುಗಳ ಸಂಘಟಿಸಿ ಭಾರತವ ರಕ್ಷಿಸುವ || 1 || ಜಗಕೆಲ್ಲ ಕೊಡುವಂಥ ಜ್ಞಾನ ನಮ್ಮಲ್ಲಿರಲು ನಾವು ಹೀನ ದೀನರಲ್ಲ ಎಂದು ಜಗಕೆ ತೋರುವ ಜಗವನ್ನೇ ಗೆಲ್ಲುವಂಥ ಶಕ್ತಿ ಭುಜದಲ್ಲಿರಲು ನಮ್ಮ ಶೌರ್ಯದಿತಿಹಾಸ ಮತ್ತೊಮ್ಮೆ ಬರೆಯುವ || 2 || ಭಾಷೆ ವೇಷ […]
ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ ಮನುಜರಾಗಿ ಹುಟ್ಟಲಿಲ್ಲಿ ಜನುಮಜನುಮ ಸುಕೃತ || ಪ || ನಾಲ್ಕುದಿನದ ಬಾಳು ನಮದು ಆಗಲಿಂದು ಸಾರ್ಥಕ ತ್ಯಾಗ ಮೆರೆದು ಅಮರರಾದ ಸಂತರೆಮೆಗೆ ಪ್ರೇರಕ ಮಣ್ಣ ಋಣವ ಕಳೆವುದಕ್ಕೆ ಸೇವೆಯೊಂದೇ ಸಾಧಕ ನಗುತ ನಲಿವ ರಾಷ್ಟ್ರಕ್ಕಾಗಿ ಸಾಗಬೇಕು ಕಾಯಕ || 1 || ಧ್ಯೇಯ ಪಥವ ಬಿಟ್ಟ ಬಾಳ್ವೆ ಬೇಡ ನಮಗೆ ನೀರಸ ಪರರಿಗಾಗಿ ಸತತ ಮಿಡಿವ ಹೃದಯದಿಂದ ಸಂತಸ ಕಳೆದು ಬಿಡುವ ರೋಷ ದ್ವೇಷ ಎಲ್ಲ ಮನದ ಕಲ್ಮಶ […]
ಧರೆಯ ಹೃದಯ ಗೆಲ್ಲುತ ಮೆರೆಯಲಿಹುದು ಭಾರತ || ಪ || ಭರತ ಭೂಮಿ ಧರೆಯಲಿ ಗರಿಮೆ ಹಿರಿಮೆ ಗಳಿಸಲಿ ಎಂಬುದೊಂದೆ ಹಂಬಲ ಧರ್ಮವೊಂದೆ ಬೆಂಬಲ || 1 || ತ್ಯಾಗ ಶೌರ್ಯ ಸಾಹಸ ದೇಶಕೆಲ್ಲ ಅರ್ಪಿತ ಧ್ಯೇಯಗೀತೆ ಹಾಡುತಾ ಬಾಳನದಕೆ ನೀಡುತಾ || 2 || ಸ್ವಾಭಿಮಾನವುಳಿಯಲು ಶ್ರೇಷ್ಠ ಜ್ಞಾನ ಬೆಳಗಲು ನಾಡ ಕೀರ್ತಿ ಬೆಳೆಸಲು ಗಳಿಸಿ ಶಕ್ತಿ ಭುಜದೊಳು || 3 || ಕಷ್ಟಗಳನು ಸಹಿಸುತಾ ದುಷ್ಟಬಲವ ದಹಿಸುತಾ ಹಿಂದುರಾಷ್ಟ್ರ ಬೆಳಗಲು ಸಂಘಶಕ್ತಿ ಕಟ್ಟಲು || […]
ಉಜ್ವಲ ಇತಿಹಾಸ ಎಮ್ಮದು ಭಾರತ ನಾಡಿನ ಸ್ಫೂರ್ತಿಯದು || ಪ || ಪವಿತ್ರ ಧರ್ಮದ ಗೌರವಕಾಗಿ ಮೃತ್ಯುವನಪ್ಪಿದ ಹಕಿಕತನೂ ಗುರುಗೋವಿಂದನ ವೀರ ಸುಪುತ್ರರು ತೆತ್ತರು ಅಸುವನು ಹರುಷದಲಿ ಧೈರ್ಯದಿ ಗೋಡೆಯ ಮಧ್ಯದಲಿ || 1 || ನಾಡಿನ ಗೌರವರಕ್ಷಣೆಗಾಗಿ ಸಹಿಸಿದ ರಾಣನು ಕಷ್ಟವನು ರಜಪೂತರ ನಿಜ ತೇಜವ ತೋರುತ ದೇಶದೊಳಲೆದನು ಕಂಗೆಟ್ಟು ಮಾಡಿದ ಜನತೆಯ […]