ಅರಳಲಿದೆ ನವಭಾರತ ದೇಶ ಕಗ್ಗತ್ತಲ ಒಡಲಿಂದ ಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ || ಪ || ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿ ಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶ್ರೇಣಿ ಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ || 1 || ಶತಶತಮಾನದ ಆ ಗತವೈಭವ ಭೂಗತವಾಗುವ ಮುನ್ನ ಜಾಗೃತಗೊಳಿಸಿ ಸುಷುಪ್ತ ಜನಾಂಗವ ಸಮಯವು ಮೀರುವ ಮುನ್ನ ಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ || 2 || ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ […]
ಭರತ ವೀರ ಬಾಲರೇ ವೈರಿ ಘನ ಸಮೀರರೆ ಏಳಿರೇಳಿರೇಳಿರೈ ಭರತಕೀರ್ತಿ ರನ್ನರೇ || ಪ || ಹರಪ್ರಿಯಾ ಕುಮಾರರೆ ಸುರಚಮೂಪ ಧೀರರೆ ಸುರಸುಜನ ಸುರಕ್ಷಸ್ಕಂದ ತಾರಕಾಂಧ ಸೂರ್ಯರೆ || 1 || ಸದಭಿಮಾನ ಶೂರರೆ ಸದಭಿಮನ್ಯು ವೀರರೆ ಗೆಲುವ ಪಣದಿ ಜೀವವಿಡುವ ಕುರುಚಮೂ ಕೃತಾಂತರೆ || 2 || ಗುರುಗೋವಿಂದ ಪುತ್ರರೆ ಪರಮತ್ಯಾಗ ಜೀವರೆ ಹುಗಿದ ಗೋಡೆಯೊಳಗೆ ನಿಂತ ಧರಮ ಕಾಪಿನಮರರೆ || 3 || ರಾಷ್ಟ್ರಹಿತಕೆ ದುಡಿಯಿರೋ ಅಸ್ತ್ರಶಸ್ತ್ರವೆತ್ತಿರೊ ಶತೃವಾರೆ ಬರಲಿ ಕರೆದು ಶಸ್ತ್ರದೂಟ ಬಡಿಸಿರೊ […]
ಜಯ ಭಾರತ ಜಯ ಭಾರತ ಜಯ ಭಾರತವೆನ್ನಿರಿ ಜಗನ್ಮಾತೆ ಭಾರತಿಯ ಚರಣಕೆಲ್ಲ ನಮಿಸಿರಿ || ಪ || ಮಲಗಿರುವ ಹಿಂದುಗಳ ಎಚ್ಚರಿಸಿ ಏಳಿಸುವ ಸಂಘಶಕ್ತಿ ಬೆಳದಿಹ ವಿಶ್ವರೂಪ ತೋರಿಸುವ ನವಭಾರತ ನಿರ್ಮಾಣಕೆ ಒಂದಾಗಿ ದುಡಿಯುವ ಹಿಂದುಗಳ ಸಂಘಟಿಸಿ ಭಾರತವ ರಕ್ಷಿಸುವ || 1 || ಜಗಕೆಲ್ಲ ಕೊಡುವಂಥ ಜ್ಞಾನ ನಮ್ಮಲ್ಲಿರಲು ನಾವು ಹೀನ ದೀನರಲ್ಲ ಎಂದು ಜಗಕೆ ತೋರುವ ಜಗವನ್ನೇ ಗೆಲ್ಲುವಂಥ ಶಕ್ತಿ ಭುಜದಲ್ಲಿರಲು ನಮ್ಮ ಶೌರ್ಯದಿತಿಹಾಸ ಮತ್ತೊಮ್ಮೆ ಬರೆಯುವ || 2 || ಭಾಷೆ ವೇಷ […]
ಭೋಗ ಮೆಟ್ಟಿ ತ್ಯಾಗ ಮೆರೆದ ಕರ್ಮಭೂಮಿ ಭಾರತ ಮನುಜರಾಗಿ ಹುಟ್ಟಲಿಲ್ಲಿ ಜನುಮಜನುಮ ಸುಕೃತ || ಪ || ನಾಲ್ಕುದಿನದ ಬಾಳು ನಮದು ಆಗಲಿಂದು ಸಾರ್ಥಕ ತ್ಯಾಗ ಮೆರೆದು ಅಮರರಾದ ಸಂತರೆಮೆಗೆ ಪ್ರೇರಕ ಮಣ್ಣ ಋಣವ ಕಳೆವುದಕ್ಕೆ ಸೇವೆಯೊಂದೇ ಸಾಧಕ ನಗುತ ನಲಿವ ರಾಷ್ಟ್ರಕ್ಕಾಗಿ ಸಾಗಬೇಕು ಕಾಯಕ || 1 || ಧ್ಯೇಯ ಪಥವ ಬಿಟ್ಟ ಬಾಳ್ವೆ ಬೇಡ ನಮಗೆ ನೀರಸ ಪರರಿಗಾಗಿ ಸತತ ಮಿಡಿವ ಹೃದಯದಿಂದ ಸಂತಸ ಕಳೆದು ಬಿಡುವ ರೋಷ ದ್ವೇಷ ಎಲ್ಲ ಮನದ ಕಲ್ಮಶ […]
ಭರತ ದೇಶ ಭಾಗ್ಯ ಕೋಶ ನಮ್ಮ ಜನರ ಸಂಪದ ಕೋಟಿ ಕೋಟಿ ಹೃದಯ ತೀರ್ಥ ಬೃಂದಾರಕ ಶಿವಪಥ || ಪ || ಹೈಮಾಚಲದುನ್ನತಿಯಲಿ ಆಧ್ಯಾತ್ಮದ ತೇಜದಲ್ಲಿ ಸಗ್ಗಸಿರಿಯ ಸುರಿವಳಿಲ್ಲಿ ಆತ್ಮರತೀ ವನಮಾಲಿ || 1 || ಸಹಾಧ್ಯಯನ ಸಹಭೋಜನ ಸಹ ಪೌರುಷ ಸಹ ತೋಷ ವಿಶ್ವಮೈತ್ರಿ ಗಾಯತ್ರಿಯ ಪಠಿಸಿದಂಥ ಧೀರಯುತ || 2 || ಭವ್ಯಭೂಮಿ ಭಾರತ ಮಿಗಿಲೆನಗಿದು ಜಗಕಿಂತ ಈ ಮಣ್ಣಿನ ಕಣಕಣವೂ ನನ್ನ ದೇಹ ನಿಶ್ಚಿತ || 3 || ಜನ್ಮ ಭೂಮಿ, ಜನನಿ […]
ನಮಿಸಿ ಭಾರತಮಾತೆಗೆ ಧುಮುಕಿ ಕಾರ್ಯಕ್ಷೇತ್ರಕೆ ತ್ಯಜಿಸಿ ಭೀತಿ ಅಂಜಿಕೆ ಚಲಿಸಿ ಮುಂದೆ ಮುಂದಕೆ ಜೈ ಭಾರತಿ, ಜೈ ಭಾರತಿ, ಜೈ ಭಾರತಿ ನಮೋ ಜಗದ ಸಾರಥಿ || ಪ || ಶೂರವೀರಧೀರರು ಸಾಧುಸಂತಯತಿಗಳು ತೋರಿದಂಥ ದಾರಿಯು ಸಾರಿದಂಥ ನೀತಿಯು ನಮಗೆ ಮಾರ್ಗದರ್ಶಕ ಸತತ ಸ್ಫೂರ್ತಿದಾಯಕ || 1 || ಬರಲಿ ವಿಘ್ನ ಸಾವಿರ ಕಷ್ಟನಷ್ಟ ಭೀಕರ ಕೆಚ್ಚಿನಿಂದ ಎದುರಿಸಿ ಧ್ಯೇಯದೀಪ ಬೆಳಗಿಸಿ ಮುಂದೆ ನಡೆವ ಛಲವಿದೆ […]