ಹರ ಮಹದೇವ್ ಹರ ಮಹದೇವ್ ಹರ ಹರ ಹರ ಹರ ಹರ ಮಹದೇವ್ || ಪ || ಶಿವರಾಯನ ಮಹದೇವನು ಒಮ್ಮೆ ಬಾರೆಂದು ಬಳಿಗೆ ಕರೆಯಿಸುತ ಶಿವ ನೀ ಧರ್ಮವ ಸಲಹಲು ಬೇಗನೆ ಭಾರತ ಭೂಮಿಗೆ ನಡೆಯೆಂದ || 1 || ಅಂಬಾ ಭವಾನಿ ಲೋಕದ ತಾಯಿ ಶಿವನನು ಅಂದು ಹರಸಿದಳು ಇಂಬಾಗಿ ವಿಜಯಲಕ್ಷ್ಮಿಯ ಸಂತತ ಬವರದಿ ನಿನ್ನಲಿ ನಿಲಲೆಂದು || 2 || ಶಿವನಂದು ನಮ್ಮ ಭೂಮಿಗೆ ಬಂದ ಹರನಾಣತಿಯನು ನಡೆಸಲಿಕೆ ಅವನಾಣತಿಯನು ನಡೆಸಿದ ಮನುಜಗೆ […]
ಸ್ವಾರ್ಥರಹಿತ ಕ್ರಾಂತಿ ಎನುವ ವಿಜಯಗಾನ ಮೊಳಗುವಾ ದೇಶಕಾಗಿ ಪ್ರಾಣತೆತ್ತ ವೀರರನ್ನು ಸ್ಮರಿಸುವಾ || ಪ || ನೊಂದಮನದ ತಾಯಕರೆಗೆ ಧಿಗ್ಗನೆದ್ದು ನಿಲ್ಲುವಾ ಬೆಂದ ಒಡಲ ಉರಿಯ ಬೇಗೆಯನ್ನು ಶಮನಗೊಳಿಸುವಾ ತಾಯ ಶಿರವ ತರಿಯ ಬಂದ ಅರಿಯ ಅಂತ್ಯಗೊಳಿಸುವಾ ಆಕೆ ಘನತೆಗೆಂದು ಕುಂದು ಬಾರದಂತೆ ಸೆಣಸುವಾ || 1 || ಶೌರ್ಯ ಮೆರೆದ ನಾಡಿನಲ್ಲಿ ಹೇಡಿತನವು ಸಲ್ಲದು ಕಾರ್ಯಕ್ಷೇತ್ರ ಕೂಗಿಕರೆಯೆ ಕಿವುಡುತನವು ಕೂಡದು ಕ್ರೌರ್ಯ ಕಪಟ ಕುಟಿಲನೀತಿ ಜನತೆಯಿನ್ನು ಸಹಿಸದು ಧೈರ್ಯದಿಂದ ಎದ್ದುನಿಲಲು ದುರುಳರಾಟ ನಡೆಯದು || 2 […]
ಸ್ವಾತಂತ್ರ್ಯದ ಅರುಣೋದಯ ಸಾರುತ ಹಾರುತ ಧ್ವಜ ಭಗವಾ ದಾಸ್ಯದ ಇರುಳಿಗೆ ಪಂಜಾಗುರಿಯುತ ಬೆಳಬೆಳಗಿತು ನಭವ || ಪ || ಸ್ವತಂತ್ರ ಗಡಗಳ ಗುಡಿಗೋಪುರಗಳ ತಲೆತಲೆಗಳ ಮೇಲೆ ಕೃಪಾಛಾಯೆಯದೋ ಸಿಂಧು ಸಮುದ್ರದ ಅಲೆ ಅಲೆಗಳ ಮೇಲೆ ಅರಮನೆ ಗುರುಮನೆ ಜನತಾ ಕೋಟಿಯ ಮನೆ ಮನೆಗಳ ಮೇಲೆ ಗಡಿನಾಡಿನ ತುದಿಕೋಡಿನ ಪಹರೆಯ ನೆಲೆ ನೆಲೆಗಳ ಮೇಲೆ || 1 || ಪ್ರಾಣ ಪುಷ್ಪಗಳ ಕಾಣಿಕೆಯೊಯ್ಯುವ ಶೂರರ ಹೆಗಲಿನಲಿ ಮಹಾ ಪರಾಕ್ರಮಿ ಮಾವಳಿಯೋಧರ ಭೀಮ ಬಾಹುಗಳಲಿ ಆನಂದದ ಶುಭ ಸಂವತ್ಸರದಲಿ ಸಿಂಹಾಸನವೇರಿ […]
ಸ್ವಾಗತವು ಸ್ವಾಗತವು ಪೂಜ್ಯ ಶ್ರೀ ಮಾಧವಗೆ ಸ್ವಾಗತವು || ಪ || ಆಗಸದ ವೈಶಾಲ್ಯ ಸಾಗರದ ಗಾಂಭೀರ್ಯ ಹಿಮಗಿರಿಯ ವರಸ್ಥೈರ್ಯ ಮೂರ್ತಿಮಂತನೆ ನಿನಗೆ || 1 || ಹೃದಯದ ಔದಾರ್ಯ ಮಮತೆಯ ಮಾಧುರ್ಯ ಸಂಘಟನ ಚಾತುರ್ಯ ಮಾರ್ಗದರ್ಶಕ ನಿನಗೆ || 2 || ಕೇಶವನ ಪ್ರತಿಬಿಂಬ ರಾಷ್ಟ್ರದೀಪದ ಸ್ತಂಭ ದೇಶಭಕ್ತಿಯ ಕುಂಭ ಶಕ್ತಿದಾತನೆ ನಿನಗೆ || 3 || ಸಂಸ್ಕೃತಿಯ ಸುವಿಚಾರ ಋಷಿವರ್ಯರಾಚಾರ ಭವಿತವ್ಯದುಚ್ಚಾರ ಯೋಗಿವರ್ಯನೆ ನಿನಗೆ || 4 || ಜಯಜಯವು ಭಾರತಿಗೆ ಜಯಜಯವು ಕೇಶವಗೆ […]
ಸ್ವರ್ಗಕಿಂತ ಮೇಲು ಜನನಿ ಜನ್ಮಭೂಮಿ ಭಾರತ ವರದೆ ಕಾಯೆ ತಾಯೆ ಇರಲಿ ಒಲವು ರಕ್ಷೆ ಶಾಶ್ವತ || ಪ || ಏರಿ ನಿಂತ ಮೇರು ಗಿರಿಯ ಪಡೆಯು ಗಿರಿಯ ಕಾಯಲು ಮೀರಿ ಮೊರೆವ ಕಡಲು ಮಣಿದು ನಿಂದು ಪಾದ ತೊಳೆಯಲು ಮೆರೆದ ಹಸಿರು ನರ್ತನ – ಮೆರೆಯೆ ದಿವ್ಯದರ್ಶನ || 1 || ಪುಣ್ಯಜಲವ ಹೀರಿ ಫಲವ ನೀಡಿ ನೆಲವು ಪಾವನ ವರ್ಷಧಾರೆ ಸುರಿದು ಬೆಳೆದು ಮಧುರ ಗಂಧ ಕಾನನ ಕುಣಿವ ಝರಿಯ ವೈಖರಿ – ಕಾಣ […]
ಸುಪ್ತ ಸಾಗರನೆ ಶಕ್ತಿಯಾಗರನೆ ತೆರೆಯ ಹಸ್ತಗಳ ತೆರೆದು ಶತ್ರುಗಳ ಥಳಿಸಿ ಅಪ್ಪಳಿಸಿದೆ || ಪ || ಜಯದ ಹಗಲಿನಲಿ ಜಗದ ಬಯಲಿನಲಿ ಭಾಗ್ಯ ವೈರಾಗ್ಯದೆರಡು ಪದಗಳಲಿ ಕುಣಿದು ಕುಪ್ಪಳಿಸಿದೆ || ಅ.ಪ.|| ವಾಲಿ ರಾವಣರು ಸೂತ್ರಪುಥಳಿಗಳು ಹಿಡಿದು ಕೋದಂಡ ನಡೆಸು ನಾಟಕವ ರಾಮ ಹೇ ಪುರುಷೋತ್ತಮ ನೂರು ದಂತಿಗಳು ಆಟಕಣಿಯಾಗಿ ಬಂದು ನಿಲುತಿವೆ ನೋಡು ಮುಂದೋಡು, ಆಡು ಬಾ ಬಾಲಭೀಮ || 1 || ಶ್ಯಾಮ ಶ್ರೀರಾಮ ಗುಪ್ತ ಶ್ರೀಹರ್ಷ ಹನುಮ ಭೀಮರಲಿ ಪುಣ್ಯ ನಾಮರಲಿ ಬೆಳೆದಂತೆ […]
ಸುಂದರ ಸೊಬಗಿನ ರಮ್ಯ ರಮಣೀಯ, ನಂದನವನವಿದು ಭಾರತವು ಕಾವೇರಿ ಗಂಗಾ ಯಮುನೆಯು ಹರಿಯುವ, ಬೃಂದಾವನವಿದು ಭಾರತವು || ಪ || ಹಿಮವತ್ಪರ್ವತ ಮಾನಸ ಸರಸಿನ, ಕೈಲಾಸವಾಸಿಯ ಕರುಣೆಯಿದು ಮೂರು ಸಾಗರದ ಸಂಗಮದಂಚಿನ, ನಿತ್ಯ ನೂತನ ಧರಣಿಯಿದು ಮಾನವ ಕುಲದ ಮೌನ ಸಂಜೀವಿನಿ, ಲೋಕ ಪಾವನಿ ಭಾರತವು || 1 || ವೇದ ವೇದಾಂತದ ಉಪನಿಷದಾಗರ, ಮಹಾಕಾವ್ಯಗಳ ತವರಿದುವು ತತ್ವ ಚಿಂತನದ ಜ್ಞಾನ ಜೀವನದ, ಮಾರ್ಗದರ್ಶಿ ಚಿರಸತ್ಯವಿದು ಅನಂತ ಕಾಲದ ಸಾಕ್ಷ್ಯ ಮೋಕ್ಷದ, ತಪೋವರ್ಧಿನಿ ಭಾರತವು || 2 […]
ಸಾಧನೆಯ ವರ ಮಾರ್ಗದಲ್ಲಿ ಬಂಧನಗಳ ಪ್ರೀತಿ ಎಲ್ಲಿ ? || ಪ || ಶಲಭದಂತೆ ದೀಪದಲ್ಲಿ ಅಸ್ತಿತ್ವವನ್ನು ಕಳೆವ ನಮಗೆ ಜ್ಯೋತಿಯಂತೆ ಜ್ವಲಿಪ ನಮಗೆ ದಹಿಪ ಜ್ವಾಲೆಯ ಭೀತಿ ಎಲ್ಲಿ ? || 1 || ಸಿಂಧುವೊಡನೆ ಮಿಲನಕಾಗಿ ಸರ್ವಸ್ವವನ್ನು ಹೋಮ ಗೈವ ಅತಲ ಮಿಲನದ ಗುರಿಯ ನಮಗೆ ಶೂನ್ಯತಟದಾ ದೃಷ್ಟಿ ಎಲ್ಲಿ ? || 2 || ದೀಪದಂತೆ ಸತತ ಬೆಳಗಿ ಕತ್ತಲನ್ನು ದೂರ ಸರಿವ ಜೀವನದ ಕಣಕಣವ ಸುರಿವ ನಮಗೆ ನಿಶೆಯ ಭೀತಿ ಎಲ್ಲಿ […]
ಸನ್ನುತವಾಗಲಿ ಉನ್ನತಿಗೇರಲಿ ಭಾರತಭೂಮಿಯ ವೈಭವವು ರಾಷ್ಟ್ರ ಸಮಾಜಕೆ ಸೇವೆಯು ಸಲ್ಲಲಿ ಸಾರ್ಥಕವಾಗಲಿ ಜೀವನವು || ಪ || ಸ್ವಧರ್ಮ ಗೌರವ ಸ್ವದೇಶಪ್ರೇಮವ ದಿನದಿನವೂ ಕೃತಿಗಿಳಿಸೋಣ ಭಗವಂತನ ವರವನ್ನೀ ಬಾಳನು ಮಾತೆಯ ಹಿತಕಾಗಿರಿಸೋಣ || 1 || ಒಳಹೊರಗೆಲ್ಲೆಲ್ಲಿಯು ನಡೆಯುತಲಿದೆ ಹಿಂದೂ ಜೀವನದಪಮಾನ ಅದೊ ನೋಡಿರಿ ಕ್ಷಣಕ್ಷಣವೂ ಬರುತಿದೆ ನಮ್ಮಯ ಭುಜಬಲಕಾಹ್ವಾನ || 2 || ಉತ್ಸಾಹದೊಳೇಳಿರಿ ಧ್ವಂಸ ವಿನಾಶದ ತಡೆಗಾಗಿ ಬೆಳೆಸಿದ ನೆಲಜಲದೊಳಗನುರಾಗವ ತಾಳುವ ಅನುಶಾಸಿತರಾಗಿ || 3 ||
ಸಂಘ ಪ್ರವಾಹದ ಸತತ ಧಾರೆಯಲಿ ಒಂದಾಗುವಾ ನಾವು ಶಕ್ತಿಯ ಬೆಳೆಯಿಸುವಾ ನಾವು || ಪ || ಈಶನ ಶಿರದಿಂ ಇಳಿದಿಹ ಧಾರೆ ನಾಕದಿ ಇಳೆಗೆ ಹರಿದಿಹ ಧಾರೆ ಹೃದಯದ ಕಲ್ಮಷ ತೊಳೆಯುವ ಧಾರೆಯೊ- ಳೊಂದಾಗುವ ನಾವು || 1 || ಕಠಿಣ ಶಿಲೆಗಳ ಕೊರೆಯುತ ಹರಿವ ವಿರೋಧವೆಲ್ಲವ ನುಂಗುತ ನಡೆವ ರಿಪು ಭಯಂಕರ ನಾದದ ಧರೆಯೊ- ಳೊಂದಾಗುವ ನಾವು || 2 || ಹರಿಯುವೆಡೆಯಲಿ ತಂಪನು ತರುವ ಹಚ್ಚ ಹಸಿರನು ತೋರುತಲಿರುವ ಸೌಖ್ಯ ಸಮೃದ್ಧಿಯ ಹರಡುವ ಧಾರೆಯೊ- […]