ತುಂಗ ಹಿಮಾಲಯ ಶೃಂಗವಿಲಾಸಿನಿ ಮಂಜುಳವಾಹಿನಿ ಗಂಗಾ ಪುಂಗವಪೂಜಿತ ಮಂಗಲದಾಯಿನಿ ನಿನ್ನಯ ಕೀರ್ತಿ ಅಭಂಗ | ಬಾ ನಲಿದಾಡುತ ಬಾ || || ಪ || ಪರಮೇಶ್ವರ ಹರನರಗಿಣಿ ನೀನು ಕಲಕಲನಾದ ತರಂಗಿಣಿ ನೀನು ಭಾರತ ಹೃದಯ ವಿಹಾರಿಣಿ ನೀನು ಅಗಣಿತ ಭಾಗ್ಯಪ್ರದಾಯಿನಿ ನೀನು ಬಾ ನಲಿದಾಡುತ ಬಾ || 1 || ಸಾಧಕರಿಗೆ ಭವತಾರಿಣಿಯಾಗಿ ಪೂಜಕರಿಗೆ ಅಘನಾಶಿನಿಯಾಗಿ ನಾಡಿನ ತಾಪ ನಿವಾರಿಣಿಯಾಗಿ ಕಶ್ಮಲ ಕಲಿ ಸಂಹಾರಿಣಿಯಾಗಿ ಬಾ ನಲಿದಾಡುತ ಬಾ || 2 || ಹಿಂದು ಸಮಾಜದ […]
ತಾಯಿ ಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ | ಹಿಂದು ಸಾಗರದ ಬಿಂದುಬಿಂದುಗಳೆ ಒಂದುಗೂಡಿ ಬನ್ನಿ || || ಪ || ಧ್ಯೇಯಭಾಸ್ಕರನ ದಿವ್ಯಕಿರಣಗಳ ನವ್ಯರಮ್ಯಲಾಸ್ಯ ತರುಣರಂಗದೊಳು ಅರುಣಗೈಯುತಿಹ ನವೋದಯದ ನಾಟ್ಯ ಬಾಹುಬಾಹುಗಳ ಸ್ಫುರಣಗೊಳಿಸುತಲಿ ನಲಿಯುತೀಗ ಬನ್ನಿ || || 1 || ಶಕ್ತಿಯಿಂದ ಅಭಿವ್ಯಕ್ತಗೊಳಿಸಿರೈ ದೇಶಭಕ್ತಿಯನ್ನು ತಪ್ತಮನಗಳಲಿ ಸುಪ್ತವಾಗಿರುವ ಧ್ಯೇಯದೀಪ್ತಿಯನ್ನು ತ್ಯಾಗ ಸಾಹಸದ ಪುಷ್ಪಮಾಲೆಯನು ತಾಯ್‍ಗೆ ತೊಡಿಸಬನ್ನಿ || || 2 || ಮಾತೃಭುವಿಯ ವಿಚ್ಛಿದ್ರಗೊಳಿಸುತಿರೆ ಕ್ಷುದ್ರ ಅರಿಯ ಸಂಚು ಪ್ರಲಯರುದ್ರನುರಿಗಣ್ಣ ತೆರೆಸಿರೈ ಹರಿಸಿ ಪ್ರಖರ ಮಿಂಚು […]
ತರುಣ ಬಲದ ಜಲಧಿ ಭರದಿ ಭೋರ್ಗರೆದಿದೆ ಭರತ ಭುವಿಯ ಭಾಗ್ಯದ್ವಾರವಿಂದು ತೆರೆದಿದೆ ಬಿಂದು ಬಿಂದು ಸಿಂಧುವಾಗಿ ಉಕ್ಕಿ ಮೊರೆದಿದೆ ಹಿಂದು ಹಿಂದು ಎಂಬ ಘೋಷ ಮುಗಿಲಮುಟ್ಟಿದೆ ಜೈ ಭಾರತಿ ಜೈ ಭಾರತಿ ಜೈ ಭಾರತಿ ಅಮರ ನಿನ್ನ ಕೀರುತಿ || ಪ || ಕಷ್ಟನಷ್ಟವೇನೆ ಬರಲಿ ನಿಷ್ಠೆ ಎಮದು ರಾಷ್ಟ್ರಕೆ ಭ್ರಷ್ಟರನ್ನು ಬಡಿದು ಅಟ್ಟಿ ದುಷ್ಟರನ್ನು ದೂರಕೆ ಧೂರ್ತ ಶತ್ರುಗಳನು ಮೆಟ್ಟಿ ಚೆಂಡಾಡುತ ರುಂಡವ ಗೈವೆವಿಂದು ಸಮರ ಭೂಮಿಯಲ್ಲಿ ರುದ್ರತಾಂಡವ ಜೈ ಭಾರತಿ ಜೈ ಭಾರತಿ ಜೈ […]
ಜ್ಞಾನದಾತನೆ ಚಿರಪುನೀತನೆ ಧ್ಯೇಯ ದೇವನೆ ವಂದನೆ ಜೀವನಕೆ ಸಾರ್ಥಕತೆ ಕರುಣಿಸು ಗುರಿಯ ಸೇರಲಿ ಸಾಧನೆ || ಪ || ಕಾಯದಾ ಗುಡಿಯಲ್ಲಿ ನಿನ್ನಯ ದಿವ್ಯಮೂರ್ತಿಯನಿರಿಸಿದೆ ತಾಯಿ ಭೂಮಿಯ ಸೇವೆಗೈಯುವ ಶಪಥವನು ಸ್ವೀಕರಿಸಿದೆ ಮಾಯಗೊಳಿಸಿದೆ ಮನದ ಭ್ರಾಂತಿಯ ಭ್ರಮೆಯ ಕಂಗಳ ತೆರೆಸಿದೆ || 1 || ಕದನಕಂಜದ ದಮನಕಳುಕದ ಭರತಭೂಮಿಯ ಪೌರುಷ ಹೃದಯಸದನದಿ ತುಂಬಿ ಬೆಳೆಸಿದೆ ಶೌರ್ಯಛಲಬಲ ಸಾಹಸ ಉದಯಭಾಸ್ಕರನಂತೆ ಬೆಳಗಿದೆ ತಿಮಿರಮಯ ಮನದಾಗಸ || 2 || ಕೀರ್ತಿಪಥದಲಿ ಮುಂದೆ ನಡೆಯುವ ಸ್ಫೂರ್ತಿಯನು ನೀ ನೀಡಿದೆ ಧೂರ್ತ […]
ಚಿಮ್ಮುತಿದೆ ನೋಡಿಲ್ಲಿ ಧ್ಯೇಯ ಕಾರಂಜಿ ಹೊಮ್ಮಿಸುತ ಹೊಂಗನಸಿನೋಕುಳಿಯ ಮನಮನದಿ || ಪ || ನಿಷ್ಕ್ರಿಯತೆ ಕರಿನೆರಳ ಚಾಚಿರಲು ನಾಡಗಲ ಜಡತೆಯಿಂ ಮೈಮರೆತು ಮಲಗಿರಲು ಹಿಂದು ನೆಲ ಸ್ಫೂರ್ತಿ ಉತ್ಸಾಹಗಳ ಹೊನಲನ್ನು ಹರಿಸಿ ಮುಚ್ಚಿರುವ ಭ್ರಮೆಯಾಂತ ಕಂಗಳನು ತೆರೆಸಿ || 1 || ನಾಡನೋವಳಿಸುತಿಹ ದಿವ್ಯ ಸಂಜೀವಿನಿಯು ಸಾವನ್ನೆ ಸಾಯಿಸುವ ಈ ಜೀವವಾಹಿನಿಯು ವೇದಘೋಷದ ನೆಲದ ಪುಣ್ಯತಮ ಸ್ರೋತ ಶಿವಪ್ರತಾಪರ ಶೌರ್ಯದಮರ ಸಂಕೇತ || 2 || ಕೇಶವನು ನೆಟ್ಟಿರುವ ಸಂಘರೂಪದ ಸಸಿಗೆ ನೀರುಣಿಸಿ ಅನವರತ ಪೋಷಿಸಿತು ಈ […]
ಚಿನ್ನದ ನಾಡಿನ ಚಿಣ್ಣರು ನಾವು ಸನ್ನಡತೆಯ ಸುಕುಮಾರರು ನಾವ್ | ಸೇವೆಯ ದೀಕ್ಷೆಯ ತೊಟ್ಟಿಹೆವು, ಹೊಸನಾಡೊಂದನು ಕಟ್ಟುವೆವು || || ಪ || ಧ್ರುವ ನಚಿಕೇತ ಲವಕುಶ ಭರತ ನಮ್ಮ ಪರಂಪರೆ ಸಾಹಸಭರಿತ ಪುಟ್ಟ ಶಾಮನೊಲು ದಿಟ್ಟತನದಲಿ ದುಷ್ಟರ ಶಿರವನು ಮೆಟ್ಟುವೆವು || 1 || ಭಾಷೆಯು ನೂರು ಭಾವನೆಯೊಂದೇ ಹರಿಯುವ ನೆತ್ತರ ಬಣ್ಣವದೊಂದೇ ಭಾರತಮಾತೆಯ ಮಕ್ಕಳು ನಾವು, ಭೇದಗಳನು ಪುಡಿಗಟ್ಟುವೆವು || 2 || ಪರಹಿತಕಾಗಿ ಮುಡಿಪೀ ಬದುಕು ಎಲ್ಲೆಡೆ ಮೂಡಿಸಿ ಜ್ಞಾನದ ಬೆಳಕು ನಿದ್ರಿತ […]
ಗರಿಗೆದರಿದೆ ಹಿಂದುತ್ವವು ಇಂದು ಭೋರ್ಗರೆದಿದೆ ಯುವಶಕ್ತಿಯ ಸಿಂಧು ಯುಗದ ಸವಾಲಿಗೆ ಉತ್ತರ ನೀಡಿ ಜಗದ ವಿಕಾಸಕೆ ನಾಂದಿಯ ಹಾಡಿ ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ || ಪ || ಶೃತಿ-ವೇದಂಗಳ ಅಂಗಳದಲ್ಲಿ, ಗಂಗೆಯ ಮಂಜುಳ ಲಹರಿಗಳಲ್ಲಿ ತುಂಗ ಹಿಮಾಚಲ ಶೃಂಗಗಳಲ್ಲಿ, ಮೂಡಿಹುದು ನವವಿಶ್ವಾಸ ಜಾಗೃತಿಯಾ ಜಯ ಜಯ ಘೋಷ || 1 || ಶತಶತಮಾನದ ಜಡತೆಯ ಸರಿಸಿ, ಗತ ಚರಿತೆಯ ಅಪಮಾನವನೊರೆಸಿ ದೃಢಸಂಕಲ್ಪದ ಹೆಜ್ಜೆಯನಿರಿಸಿ, ಭೇದವನಳಿಸಿದೆ ಬಂಧುತ್ವ ಮೇಲೆದ್ದಿಹುದು ಹಿಂದುತ್ವ || 2 || ಭಾರತ ತೋರಿದ […]
ಕೋಟಿ ಕಂಠಗಳಿಂದ ಜಗಕೆ ಸಾರುವೆವಿಂದು ಹಿಂದುಗಳು ನಾವೆಂದು ಹಿಂದುರಾಷ್ಟ್ರವಿದೆಂದು || ಪ || ನಮ್ಮ ನೆಲಜಲಗಡಿಯ ಗುಡಿನುಡಿಯ ರಕ್ಷಣೆಗೆ ಪೂರ್ಣಜೀವನವನ್ನು ಅರ್ಪಿಸುವೆವೆಂದು ಶಪಥವನು ಸ್ವೀಕರಿಸಿ ಧ್ಯೇಯದೀಪವ ಧರಿಸಿ ಸಾಗುವೆವು ಗುರಿಯೆಡೆಗೆ ಭರದೊಳಿಂದು || 1 || ಗಾದಿಯೇರಿದ ಜನರು ಹಾದಿತಪ್ಪಿಹರಿಂದು ಬೀದಿಪಾಲಾಗಿಹುದು ನಾಡಮಾನ ಬೂದಿ ಮುಚ್ಚಿದ ಕೆಂಡದಂತಿರ್ದ ಯುವಶಕ್ತಿ ಕೆರಳಿಹುದು ಧರಿಸಿಹುದು ಸ್ವಾಭಿಮಾನ || 2 || ಜನಮನವ ಕೆಣಕುತಿಹ ದಾಸ್ಯದವಶೇಷಗಳ ನಿಶ್ಚಯದಿ ನಿಶ್ಶೇಷಗೊಳಿಸಲಿಹೆವು ಐಕ್ಯಶಕ್ತಿಯ ತಳೆದು ವಿಘ್ನಕೋಟಿಯ ತುಳಿದು ನೈಜ ರಾಷ್ಟ್ರೀಯತೆಯ ಮೆರೆಸಲಿಹೆವು || 3 […]
ಕೇಶವನ ಕರಗಳಿಂದ ರೂಪು ತಳೆದ ಯಾದವ ತೆರೆಯ ಮರೆಯ ಸಾಧಕರಿಗೆ ಅಮರಸ್ಫೂರ್ತಿಯಾದವ ಧ್ಯೇಯಮೂರ್ತಿಯಾದವ … ಹರಸು ನಮ್ಮ ಬಾಂಧವ || ಪ || ಬಾಲ್ಯದಾ ದಿನಗಳಲ್ಲಿ ಮಧುರ ದನಿಯ ಗಾಯಕ ಸಂಘಟನೆಯ ದೀಕ್ಷೆ ಧರಿಸಿ ಆದೆಯೊ ಘನಸಾಧಕ ಧ್ಯೇಯಕಾಗಿ ದೇಹ ಸವೆಸಿದಂಥ ನಿನ್ನ ಜೀವನ ಸಾರ್ಥಕತೆಯ ವೀರಗಾಥೆ ನಿನ್ನ ಜನುಮ ಪಾವನ || 1 || ಕಲ್ಲುಮುಳ್ಳು ವಿಘ್ನಕೋಟಿ ಎಲ್ಲ ಮೆಟ್ಟಿ ಕ್ರಮಿಸಿದೆ ಹಸಿವು ನಿದ್ದೆ ಪರಿವೆ ತೊರೆದು ನಾಡಿಗಾಗಿ ಶ್ರಮಿಸಿದೆ ಶೂನ್ಯದಲ್ಲಿ ಸೃಷ್ಟಿಗೈದ ನಿನ್ನ ಕಾರ್ಯಶಕ್ತಿಗೆ […]
ಕಳೆದಿಹುದು ಕಾರಿರುಳು ಕರಗಿಹುದು ಕಾರ್ಮುಗಿಲು ಇಂದು ಹಿಂದು ಭಾಸ್ಕರನ ಉದಯಕಾಲ ನಾಡ ಪರಿವರ್ತನೆಯ ಪರ್ವಕಾಲ || ಪ || ಉಷೆಯುದಿಸಿ ಬಂದಿಹಳು, ನಿಶೆಯುಸಿರ ನೀಗಿಹಳು ಅರುಣ ಕಿರಣದ ಪ್ರಭೆಗೆ ಸ್ವಾಗತವ ಕೋರಿಹಳು ಮೈಮರೆತು ಮಲಗಿದ್ದ ನಾಡು ಮೇಲೆದ್ದಿಹುದು ದಾಸ್ಯದವಶೇಷವದು ಧರೆಗುರುಳಿ ಬಿದ್ದಿಹುದು || 1 || ಪುಟಪುಟದ ಇತಿಹಾಸ ಸಟೆಯ ಧಿಕ್ಕರಿಸಿಹುದು ದಿಟದ ಧೀಮಂತಿಕೆಯ ದಿಟ್ಟತನ ಧರಿಸಿಹುದು ದ್ರೋಹಿಗಳು ಒಡ್ಡಿರುವ ಭೀಕರ ಸವಾಲುಗಳ ಕಟಿಬದ್ಧ ಯುವಜನತೆ ಛಲದಿ ಸ್ವೀಕರಿಸಿಹುದು || 2 || ಎಚ್ಚೆತ್ತ ಕೇಸರಿಗೆ ವನದೊಳೆದುರಾರಿಹರು? […]