ಕೋಟಿಕಂಠಗಳಿಂದ ಜಗಕೆ ಸಾರುವೆವಿಂದು

ಕೋಟಿ ಕಂಠಗಳಿಂದ ಜಗಕೆ ಸಾರುವೆವಿಂದು
ಹಿಂದುಗಳು ನಾವೆಂದು ಹಿಂದುರಾಷ್ಟ್ರವಿದೆಂದು || ಪ ||

ನಮ್ಮ ನೆಲಜಲಗಡಿಯ ಗುಡಿನುಡಿಯ ರಕ್ಷಣೆಗೆ
ಪೂರ್ಣಜೀವನವನ್ನು ಅರ್ಪಿಸುವೆವೆಂದು
ಶಪಥವನು ಸ್ವೀಕರಿಸಿ ಧ್ಯೇಯದೀಪವ ಧರಿಸಿ
ಸಾಗುವೆವು ಗುರಿಯೆಡೆಗೆ ಭರದೊಳಿಂದು || 1 ||

ಗಾದಿಯೇರಿದ ಜನರು ಹಾದಿತಪ್ಪಿಹರಿಂದು
ಬೀದಿಪಾಲಾಗಿಹುದು ನಾಡಮಾನ
ಬೂದಿ ಮುಚ್ಚಿದ ಕೆಂಡದಂತಿರ್ದ ಯುವಶಕ್ತಿ
ಕೆರಳಿಹುದು ಧರಿಸಿಹುದು ಸ್ವಾಭಿಮಾನ || 2 ||

ಜನಮನವ ಕೆಣಕುತಿಹ ದಾಸ್ಯದವಶೇಷಗಳ
ನಿಶ್ಚಯದಿ ನಿಶ್ಶೇಷಗೊಳಿಸಲಿಹೆವು
ಐಕ್ಯಶಕ್ತಿಯ ತಳೆದು ವಿಘ್ನಕೋಟಿಯ ತುಳಿದು
ನೈಜ ರಾಷ್ಟ್ರೀಯತೆಯ ಮೆರೆಸಲಿಹೆವು || 3 ||

Leave a Reply

Your email address will not be published. Required fields are marked *

*

code