ವಂದಿಪೆ ಮಾಧವ ಧ್ಯೇಯಭಾಸ್ಕರ ಸಂಘರೂಪದಿ ನೀ ಅಜರಾಮರ || ಪ || ಕಣ ಕಣ ಆಜ್ಯವು ರಾಷ್ಟ್ರಕಾರ್ಯಕೆ ಕ್ಷಣ ಕ್ಷಣ ಜೀವನ ಶಾಖೆಯ ಬೆಳೆಗೆ ಸಾಸಿರ ಸಾಸಿರ ತರುಣ ಸಾಧಕರ ಹೃನ್ಮನ ಬೆಳಗಿದ ವಿಚಾರ ಸಾಗರ || 1 || ಅಕ್ಷಯ ಸ್ಫೂರ್ತಿಯ ಕರ್ಮಯೋಗಿಯೇ ಲಕ್ಷ್ಯವ ಪೂರ್ತಿಪ ಧ್ಯೇಯ ಜೀವಿಯೇ ನಿನ್ನಯ ಪಥದಿ ನಮ್ಮಯ ಹೆಜ್ಜೆಯು ಪರಮ ವೈಭವಕೆ ಅದುವೇ ನಾಂದಿಯು || 2 || ವಿಘ್ನಕೋಟಿಗಳ ಕ್ರಮಿಸಿದ ಸಾಧಕ ತರುಣ ಹೃದಯಗಳ ಮೀಟಿದ ವೈಣಿಕ ಜಗವನೆ […]
ಒಟ್ಟುಗೂಡಿ ಜನತೆಯೆಲ್ಲ ಗಟ್ಟಿ ಮನದಿ ಹುಟ್ಟಿದೂರ ದಿಟ್ಟತನದಿ ಮತ್ತೆ ಮೇಲಕ್ಕೆತ್ತುವ ಬನ್ನಿ ಕೆಟ್ಟ ಚಟದ ಮೂಲವಳಿಸಿ ಮತ್ತೆ ಹುಟ್ಟದಂತೆ ಅದನು ಮೆಟ್ಟಿ ತುಳಿದು ನಾವು ಸುಟ್ಟು ಹಾಕೋಣ ಬನ್ನಿ || ಹೊಯ್ || ತಿತ್ತಿತ್ತಾರಾ ತಿತ್ತಿತೈ ತಿತ್ತೈ ತಗಧಿನ್ನತ್ತೋಂ ನಷ್ಟವೆಂದೂ ಬಾರದಂತೆ ಇಷ್ಟದೇವನೊಲಿದು ಕೊಡುವ ಕಷ್ಟಪಟ್ಟು ದುಡಿದು ನಾವು ಗಳಿಸೋಣ ಬನ್ನಿ ಅಷ್ಟೋ ಇಷ್ಟೋ ಗಳಿಸಿದುದನು ಒಟ್ಟು ಮಾಡಿ ಇಟ್ಟುಕೊಂಡು ಸ್ವಾವಲಂಬಿ ಜೀವನವ ನಡೆಸೋಣ ಬನ್ನಿ || ಹೊಯ್ || ತಿತ್ತಿತ್ತಾರಾ ತಿತ್ತಿತೈ ತಿತ್ತೈ ತಗಧಿನ್ನತ್ತೋಂ ಸುಮ್ಮನಿರದೆ […]
ಪುಣ್ಯಚರಿತೆ ಭರತ ಮಾತೆ ಸಣ್ಣದಲ್ಲ ಕೀರ್ತಿಯು ವಿಶ್ವ ದೇಹದಲ್ಲಿ ಹೃದಯ ದೇಶ ನಮ್ಮ ಸ್ಫೂರ್ತಿಯು || ಪ || ಜಗದೊಳೆಲ್ಲ ಅಂಧಕಾರ ತುಂಬಿದಂಥ ಆ ದಿನ ಮನುಕುಲಕ ಮಾನವೀಯ ವೇದವೆ ನಿದರ್ಶನ || 1 || ಧೀರರೆಲ್ಲ ಸೇರಿ ರಾಷ್ಟ್ರ ಪ್ರೇಮದಿಂದ ಕಟ್ಟುತ ಸಾರಿ ಸತ್ಯ ಶಾಂತಿಯಿಂದ ಅರಿಗಳನೆ ಅಟ್ಟುತ || 2 || ತೋರಿ ವಿಶ್ವಶಾಂತಿ ವಿಜಯ ಧ್ವಜವನೆತ್ತಿ ಹಿಡಿಯುತ ಮೊಗವ ಎತ್ತಿ ವಿಜಯಘೋಷ ಧ್ವನಿಯು ಮುಗಿಲು ಮುಟ್ಟುತ || 3 || ಇಂದು ನಮ್ಮ […]
ನವಭಾವ ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿ ಏರಬೇಕು || ಪ || ಉನ್ನತೋನ್ನತ ಘನಹಿಮಾಗ್ರಿ ಶಿಖರವನೇರಿ ಹಾಡಲ್ಲಿ ಹಾಡಬೇಕು ಹಾಡು ನುಡಿಗುಂಡುಗಳು ಹಾರಿದಶದಿಕ್ಕಿನಲಿ ಭಯವಬೆನ್ನಟ್ಟಬೇಕು ಗಂಡೆದೆಯಘರ್ಜನೆಗೆ ಮೂಹತ್ತು ಮೂರ್ಕೋಟಿ ಕಲಕಂಠ ಬೆರೆಸಬೇಕೂ ಭೂಮ್ಯಾಂತರಾಳದಲಿ ನಭಚಕ್ರಗೋಳದಲಿ ಮಾರ್ದನಿಗಳೇಳಬೇಕು || 1 || ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲಿ ಬಾನುಭುವಿ ಬೆಳಗಬೇಕು ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು ಅಳಿದುಳಿದ ಭವ್ಯತೆಯ ರುದ್ರ ಶಿಖೆಯುಜ್ವಲಿಸೆ ಹಾಡು ತಿದಿಯೊತ್ತಬೇಕೂ ದಿವಸ ದಿವಸಗಳಿಂದ ಮನದಿ ಮರುಗುತಲಿದ್ದ […]
ಅಮ್ಮನ ಸಮವಲ್ಲವೇ ಮನುಜ ನಮ್ಮಯ ಗೋಮಾತೆ ಅಮೃತದಂತಹ ಹಾಲನ್ನುಣಿಸುವ ಪ್ರೀತಿಯ ಜಗನ್ಮಾತೆ || ಪ || ದುಷ್ಟರು ಶಿಷ್ಟರು ಭೇದವ ತೋರದೆ ಕಾಣುವಳಲ್ಲ ಮಗುವಂತೆ ಉಸಿರಿರುವನಕವು ಕೆಡುಕನು ಬಯಸದೆ ಪೊರೆಯುವಳಲ್ಲ ತಾಯಂತೆ || 1 || ಮಾತೆಯ ಸಹನೆಗೆ ಸಾಟಿಯದಾವುದು ತುಂಬಿದ ಒಡಲು ಒಲವಿಂದ ಗೋ ಒಲುಮೆಯನು ಪಡೆದು ಬದುಕಲು ಜೀವನವೇ ಬಲು ಚಂದ || 2 ||
ಭಾರತೀಯ ಹೃದಯವಿಂದು ರಾಷ್ಟ್ರ ದೇವನಾಲಯ ಯುವ ಮನಸಿನ ಭಾವದಲೆಗೆ ರಾಷ್ಟ್ರಭಕ್ತಿ ಶ್ರುತಿ ಲಯ ಕಲೆ-ಸಂಸ್ಕೃತಿ, ಕಥೆ-ಕವನದಿ ಗುರುಭಾರತ ಪರಿಚಯ ಮನುಜಕುಲದ ಉನ್ನತಿಯೇ ತರುಣ ಗಣದ ಆಶಯ || ಪ || ಅನ್ವೇಷಣೆ, ಉತ್ಖನನವು ಹೊಸ ಪುರಾವೆ ನೀಡಿದೆ ಭರತ ಭುವಿಯ ಹಿರಿಮೆಯರಿಮೆ ಹೊಸ ದಿಶೆಯನು ತೋರಿದೆ ದಿಟದ ಚರಿತೆಯರಿತು ಜಗವು ನತಮಸ್ತಕವಾಗಿದೆ ವಿದ್ವಜ್ಜನ ಸಂದೋಹದ ಮಣಿ ಮುಕುಟವು ಮಣಿದಿದೆ || 1 || ಪ್ರತಿಯೋಧನ ಎದೆಗುಂಡಿಗೆ ವಿಶ್ವಾಸದ ಆಗರ ಹೊಸ ಸಾಧನ, ನವ ಚೇತನ ಉತ್ಸಾಹದ ಸಾಗರ […]
ಜಯಜಯ ಗೋಮಾತೆ, ಅಂಬ ಜಯ ಜಯ ಗೋಮಾತೆ || ಪ || ದಿವಿಜರಿಗಾಶ್ರಯದಾತೇ,ತಾಯೇ ಋಷಿ ಮುನಿಕುಲ ಸಂಪ್ರೀತೇ ಭುವಿಯೊಳು ಕಾಣುವ ದೇವತೆ, ನೀನು ನಮಿಸುವೆ ನಿನ್ನಡಿಗೆ ತಾಯೇ ನಮಿಸುವೆ ನಿನ್ನಡಿಗೆ || 1 || ಅನುದಿನ ಸೇವೆಯ ಗೈವೆ, ತಾಯೆ ಕರುಣದಿ ನಮ್ಮನು ಪೊರೆಯೇ ವಸು ಕುವರಿಯೆ, ಆದಿತ್ಯ ಸಹೋದರಿ ರುದ್ರರ ಹಡೆದಿಹ ಮಾತೆ ನೀ ತ್ರಿಭುವನಪೋಷಿಣಿ ಮಾತೆ || 2 || ಪಾಪ ವಿನಾಶಿನಿ ತಾಯೇ, ಭವ ತಾಪ ನಿವಾರಿಣಿ ಕಾಯೇ ಕಾರುಣ್ಯದ ಖನಿ ವೈತರಣಿಯ […]
ಮತ್ತೆ ಮೂಡುತಿದೆ ಕತ್ತಲೆದೆಯಿಂದ ಪೌರುಷಮಯ ಇತಿಹಾಸ ಸತ್ತ ಬೂದಿಯಲು ಕಿಡಿಗಳ ತೆರೆಯುವ ಅನಂತತೆಯ ಚಿರಸಾಹಸ || ಪ || ಮನೆಗೆ ಕವಿದ ಇರುಳನು ತೊಳೆದು ಹಗಲ ಹಚ್ಚಿದುದೆ ಸಾಲದೆ ನೆರೆಜನ ಮೊರೆಯಿಡೆ ಕಾದಿ ಗೆಲಿಸಿದೆವು ಊರುಗೋಲಾಗಿ ಬಳ್ಳಿಗೆ || 1 || ಎಂದಿನಿಂದಲೋ ಹರಿದು ಬಂದಿರುವ ಜೀವನ ಧರ್ಮದ ಶ್ರುತಿಗೆ ಇಂದಿನ ಸ್ವರವನ್ನು ಹೊಂದಿಸಿ ಹಾಡುವ ಆಸೆ ಫಲಿಸುತಿದೆ ಬಾಳಿಗೆ || 2 || ಕಂಠ ಕಂಠದಲು ದನಿಗೊಳ್ಳುತ್ತಿದೆ ಶ್ರೀ ಸಾಮಾನ್ಯನ ಜಯಕಾರ ಮೂಲೆ ಮೂಲೆಯಲು ಮೈ […]
ರಕ್ಷೆಯನು ಕಟ್ಟುತ್ತ ಕರಪಿಡಿದು ನಡೆಯೋಣ ಒಂದಾಗಿ ನಿಲ್ಲೋಣ ರಾಷ್ಟ್ರರಕ್ಷಣೆಗಿಂದು || ಪ || ಸ್ನೇಹದ ಕಂಪನ್ನು ಪಸರಿಸುವ ರಕ್ಷೆ ನೋವ ಮರೆಸುತ ಧೈರ್ಯ ತುಂಬುವಾ ರಕ್ಷೆ ಒಡೆದ ಮನಸುಗಳ ಒಂದುಗೂಡಿಸೆ ರಕ್ಷೆ ಸಂಬಂಧಗಳನುಬಂಧ ಬೆಸೆಯುವುದೀ ರಕ್ಷೆ || 1 || ಇತಿಹಾಸ ನೆನಪಿಸಲು ಕಾಲನೇ ರಕ್ಷೆ ಗುರಿಯೆಡೆಗೆ ನಡೆಯಲು ನಕ್ಷೆಯೇ ರಕ್ಷೆ ಮೇಲುಕೀಳುಗಳ ಅಳಿಸೆ ಆಯುಧವು ರಕ್ಷೆ ಎಲ್ಲರೂ ಒಂದೆಂಬ ಭಾವವೀ ರಕ್ಷೆ || 2 || ತಾಯ ರಕ್ಷಣೆಗೆ ಸಿದ್ಧಕಂಕಣವು ರಕ್ಷೆ ರಾಷ್ಟ್ರರಕ್ಷಣೆಯ ಮನವಕೊದುವಿದಿದೋ ರಕ್ಷೆ […]
ಸಿಂಧು ಸಂಸ್ಕೃತಿಯಲ್ಲಿ ಸಿರಿ ಪರಂಪರೆಯಲ್ಲಿ ಹಿಂದು ಹೆಸರಲಿ ನಾವು ಬಂದೆವಿಳೆಗೆ ಸಂದ ಕಾಲವನೆಳೆದು ಇಂದು ಯಶ ಸಾಧಿಸಲು ಬಂದಿಹುದು ಶುಭ ಸಮಯ ನಮ್ಮ ಬಳಿಗೆ || ಪ || ಒಡೆದು ಶಂಖಧ್ವನಿಯ ಗುಡುಗು ನೂರ್ಮಡಿಗೊಂಡು ಸಿಡಿಸಿಡಿದು ಸೀಳಾಗಿ ಸ್ವೀಕರಿಪ ಮೊದಲೇ ಬಡವ ಅಂತ್ಯಜರೆಂಬ ತಡೆಗೋಡೆಗಳು ಬೆಳೆದು ದುಡುಕಿ ವಿಷನಾಗಗಳು ಫೂತ್ಕರಿಪ ಮೊದಲೇ ಹುಡುಕಿ ಓರೋರ್‍ವರನು ನಿಜವಿಕಾಸಕೆ ತರಲು || 1 || ವಿಸ್ಮೃತಿಯ ಕರಿಮುಗಿಲು ಪ್ರಗತಿಪಥವನು ಕವಿದು ಪಶ್ಚಿಮಕೆ ಸೋತವರ ಅನುಸರಿಸದೇ ಆತ್ಮರತಿಯಲಿ ಮುಳುಗಿ ಆರ್ತರನು ಕಡೆಗಣಿಸಿ […]