ಮತ್ತೆ ಮೂಡುತಿದೆ ಕತ್ತಲೆದೆಯಿಂದ

ಮತ್ತೆ ಮೂಡುತಿದೆ ಕತ್ತಲೆದೆಯಿಂದ
ಪೌರುಷಮಯ ಇತಿಹಾಸ
ಸತ್ತ ಬೂದಿಯಲು ಕಿಡಿಗಳ ತೆರೆಯುವ
ಅನಂತತೆಯ ಚಿರಸಾಹಸ || ಪ ||

ಮನೆಗೆ ಕವಿದ ಇರುಳನು ತೊಳೆದು
ಹಗಲ ಹಚ್ಚಿದುದೆ ಸಾಲದೆ
ನೆರೆಜನ ಮೊರೆಯಿಡೆ ಕಾದಿ ಗೆಲಿಸಿದೆವು
ಊರುಗೋಲಾಗಿ ಬಳ್ಳಿಗೆ || 1 ||

ಎಂದಿನಿಂದಲೋ ಹರಿದು ಬಂದಿರುವ
ಜೀವನ ಧರ್ಮದ ಶ್ರುತಿಗೆ
ಇಂದಿನ ಸ್ವರವನ್ನು ಹೊಂದಿಸಿ ಹಾಡುವ
ಆಸೆ ಫಲಿಸುತಿದೆ ಬಾಳಿಗೆ || 2 ||

ಕಂಠ ಕಂಠದಲು ದನಿಗೊಳ್ಳುತ್ತಿದೆ
ಶ್ರೀ ಸಾಮಾನ್ಯನ ಜಯಕಾರ
ಮೂಲೆ ಮೂಲೆಯಲು ಮೈ ಪಡೆಯುತ್ತಿದೆ
ಸಹಸ್ರ ಶೀರ್ಷನ ಅವತಾರ || 3 ||

Leave a Reply

Your email address will not be published. Required fields are marked *

*

code