ವಂದಿಪೆ ಮಾಧವ

ವಂದಿಪೆ ಮಾಧವ ಧ್ಯೇಯಭಾಸ್ಕರ
ಸಂಘರೂಪದಿ ನೀ ಅಜರಾಮರ || ಪ ||

ಕಣ ಕಣ ಆಜ್ಯವು ರಾಷ್ಟ್ರಕಾರ್ಯಕೆ
ಕ್ಷಣ ಕ್ಷಣ ಜೀವನ ಶಾಖೆಯ ಬೆಳೆಗೆ
ಸಾಸಿರ ಸಾಸಿರ ತರುಣ ಸಾಧಕರ
ಹೃನ್ಮನ ಬೆಳಗಿದ ವಿಚಾರ ಸಾಗರ || 1 ||

ಅಕ್ಷಯ ಸ್ಫೂರ್ತಿಯ ಕರ್ಮಯೋಗಿಯೇ
ಲಕ್ಷ್ಯವ ಪೂರ್ತಿಪ ಧ್ಯೇಯ ಜೀವಿಯೇ
ನಿನ್ನಯ ಪಥದಿ ನಮ್ಮಯ ಹೆಜ್ಜೆಯು
ಪರಮ ವೈಭವಕೆ ಅದುವೇ ನಾಂದಿಯು || 2 ||

ವಿಘ್ನಕೋಟಿಗಳ ಕ್ರಮಿಸಿದ ಸಾಧಕ
ತರುಣ ಹೃದಯಗಳ ಮೀಟಿದ ವೈಣಿಕ
ಜಗವನೆ ಬೆಳಗಿದ ಅಮೃತ ಚೇತಕ
ನಿನ್ನಯ ನೆನಪಲಿ ಬದುಕಿದು ಸಾರ್ಥಕ || 3 ||

One thought on “ವಂದಿಪೆ ಮಾಧವ

Leave a Reply

Your email address will not be published. Required fields are marked *

*

code