ನಮ್ಮ ಮನೆ ಇದು ನಮ್ಮ ಮನೆ ನಲಿವಿನ ಅರಿವಿನ ನಮ್ಮ ಮನೆ | ರೀತಿಯ ನೀತಿಯ ಭದ್ರ ಬುನಾದಿಯ ಮೇಲೆ ನಿಂತಿದೆ ನಮ್ಮ ಮನೆ || ಪ || ತಾಯಿಯ ಮಮತೆಯ ತಂದೆಯ ಪ್ರೀತಿಯ ಸೆಲೆಯಲಿ ತೆರೆದಿದೆ ನಮ್ಮ ಮನೆ ಅಜ್ಜಿಯ ಕಥೆಯ ಅಜ್ಜನ ಶಿಸ್ತಿನ ನಿಲುವಲಿ ನಿಂತಿದೆ ನಮ್ಮ ಮನೆ || 1 || ಹಕ್ಕಿಗಳುಲಿವಿಗೆ ನೇಸರನುದಯಕೆ ಏಳುವರೆಲ್ಲರು ಮುದದಿಂದ ಮೀಯುತ ಮಡಿಯಲಿ ನೆನೆಯುತ ದೇವಗೆ ಭಕುತಿಯ ನಮನ ಕರದಿಂದ || 2 || ಅಕ್ಕತಂಗಿಯರ […]
ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು || ಪ || ತುಹಿನ ಗಿರಿಯ ಸಿರಿಯ ಮುಡಿಯ ಹಿರಿಯ ಕಡಲು ತೊಳೆಯುವಡಿಯ ಪೈರು ಪಚ್ಚೆ ಪಸುರಿನುಡೆಯ || ಅ.ಪ || ಸಿಂಧು ಯಮುನೆ ದೇವ ಗಂಗೆ ತಪತಿ ಕೃಷ್ಣೆ ಭದ್ರೆ ತುಂಗೆ ಸಲಿಲ ತೀರ್ಥ ಪುಣ್ಯ ರಂಗೆ || 1 || ಮತದ ಬಿರುಕುಗಳನು ತೊರೆವೆ ನುಡಿಗಳೊಡಕುಗಳನು ಮರೆವೆ ತೊತ್ತ ತೊಡಕುಗಳನು ಬಿರಿವೆ ಸ್ವಾತಂತ್ರ್ಯದ ಸ್ವರ್ಗಕೇರೆ ಪುಣ್ಯದೇಣಿ ಮೆಟ್ಟಿಲು […]
ಎಲೆಗಳು ನೂರಾರು ಭಾವದ ಎಲೆಗಳು ನೂರಾರು ಎಲೆಗಳ ಬಣ್ಣ ಒಂದೇ ಹಸಿರು ಜಾತಿ ಭಾಷೆ ಪಂಥ ಹಲವು ಅವುಗಳ ಹಿಂದೆ ಒಂದೇ ಒಲವು ಸಾಗೋಣ ಒಟ್ಟಿಗೆ ಸಾಗೋಣ ನಾವು ನೀವು ಸೇರಿ ಒಂದಾಗಿ ನೀಗೋಣ ಭಿನ್ನತೆ ನೀಗೋಣ ಸಾವಿರ ಹೆಜ್ಜೆ ಒಂದೇ ಗುರಿಗಾಗಿ || 1 || ಕಿಡಿಗಳು ನೂರಾರು ಬೆಳಕಿನ ಕಿಡಿಗಳು ನೂರಾರು ಬೆಳಕಿನ ಪರಿಗೆ ಒಂದೇ ಹೆಸರು ಸೂರ್ಯ ಚಂದ್ರ ಲಾಂದ್ರ ಹಣತೆ ಅವುಗಳ ಹಿಂದೆ ಒಂದೇ ಘನತೆ ತೆರೆಯೋಣ ಹೃದಯ ತೆರೆಯೋಣ ನಾವು […]
ಹೊಸ ಹರೆಯದ ಛಲ ಉತ್ಸಾಹ ಕೃತಿ ರೂಪದಿ ಪರಿವರ್ತಿಸಲಿ ಭಾರತ ಮಾತೆಯ ಕೀರ್ತಿಧ್ವಜ ಬಾನೆತ್ತರದಿ ನರ್ತಿಸಲಿ || ಪ || ಕೀಳರಿಮೆಯ ಕಿತ್ತೆಸೆಯೋಣ ಹೃದಯ ಹೃದಯಗಳ ಬೆಸೆಯೋಣ ನಾರೀ ಶಕ್ತಿಯ ಸಂಘಟಿಸಿ ನಾಡಿನ ಸೇವೆಯ ಗೈಯೋಣ || 1 || ತಾಯ್ನೆಲದೇಕತೆ ಏಳಿಗೆಗೆ ವೀರಪ್ರತಿಜ್ಞೆಯ ಸ್ವೀಕರಿಸಿ ಪರಮ ವೈಭವದ ಸಾಧನೆಗೆ ಜೀವನವನು ಮುಡಿಪಾಗಿರಿಸಿ || 2 ||
ಧರ್ಮದೇವತೆ ವಿಶ್ವವಂದಿತೆ ಮಾತೆ ಹೇ ಮಹಿಮಾನ್ವಿತೆ ಚರಣತಲದಲಿ ಜಲಧಿಸೇವಿತೆ ಓ ಹಿಮಾಲಯ ಶೋಭಿತೆ || ಪ || ಸಸ್ಯ ಶ್ಯಾಮಲ ಸುಜಲಕೋಮಲ ರೂಪು ತ್ಯಜಿಸುತೆ ಕೆರಳುತೆ ಏಳು ಭಾರತಿ ಸ್ವೀಕರಿಸಿದೋ ವೈರಿಪ್ರಾಣಗಳಾಹುತಿ ಪೂರ್ವ ಪಶ್ಚಿಮ ದಕ್ಷಿಣೋತ್ತರದತಿ ಪುನೀತ ರಜಾಂಕಿತೆ ದಿವಿಜ ಪೂಜಿತೆ ದುರುಳ ದಮನಕೆ ಏಳು ದುರ್ಗಾದೇವತೆ || 1 || ದಿಗ್ವಿಜಯಾನಂದ ಕಾರ್ಯಕೆ ಸ್ಥೈರ್ಯ ಸ್ಫೂರ್ತಿಯ ಕರುಣಿಸಿ ಧೈರ್ಯ ಸಾಹಸವೆರೆದು ಹೃದಯದಿ ದಿವ್ಯ ಭಾವವನರಳಿಸಿ ಸಂಸ್ಕೃತಿಯ ಸೌರಭದ ಮೃದುಸುಮಕಗ್ನಿಕಾಂತಿಯ ಲೇಪಿಸಿ ಏಳು ಓ ಸಿಡಿದೇಳು ನಮ್ಮೊಳು […]
ಈ ನಮ್ಮ ತಾಯಿನಾಡು ನಿರುಪಮ ಲಾವಣ್ಯದ ಬೀಡು ಈ ವನದಲಿ ನಲಿದುಲಿವ ಕೋಗಿಲೆಗಳು ನಾವು || ಪ || ಪರ್ವತಗಳಲ್ಲೆ ಹಿರಿಯ ಆಗಸದ ನೆರೆಯ ಗೆಳೆಯ ರಕ್ಷೆಯವನೆ ನಮಗೆ, ಅವನೇ ಮಾರ್ಗದರ್ಶಿ ಗುರಿಗೆ || 1 || ಈ ತಾಯ ಮಡಿಲಿನಲ್ಲಿ-ಸಾವಿರ ನದಿಗಳೆ ಹರಿಯುವುವು ಈ ಸುಂದರ ನಂದನಕೆ ಆ ಸ್ವರ್ಗವೆ ಕರುಬುವುದು || 2 || ಈ ನೆಲವ ಧರ್ಮವೊಂದೂ ಕಲಿಸದು ದ್ವೇಷವನೆಂದೂ ಭಾರತೀಯರು ನಾವು-ನಮ್ಮೀ ದೇಶ ಭರತನಾಡು || 3 ||
ಅಹನಿ ನಮನ ಅಮರ ಜನನಿ ಸಕಲಭುವನ ಮೋಹಿನಿ ಭವ್ಯಮೂರ್ತಿ ದಿವ್ಯಕೀರ್ತಿ ನಿನಗೆ ನಿತ್ಯ ಆರತಿ || ಪ || ವಿವಿಧ ವೇಷ ವಿವಿಧ ಭಾಷೆ ಭಂಗಿಗಿರುವ ರಕ್ಷೆಯು ಒಂದೆ ಸತ್ವ ಒಂದೆ ಭಾವ ತುಂಬಿದೊಂದೆ ತತ್ವವು || 1 || ವೇದವಾಣಿ ವೀರವಾಣಿ ಏನು ದಿವ್ಯ ವಾಙ್ಮಯ ಏಕರಾಗ ಏಕತಾಳ ಏಕತಾನ ತನ್ಮಯ || 2 || ಸತ್ಯಶಾಂತಿ ಸಹನೆ ಪ್ರೀತಿ ನಿನ್ನ ಅಮರ ನೀತಿಯು ಮೌನ ಧ್ಯಾನ ಭಕ್ತಿಗಾನ ಕಲಿಸಿ ಯಾವ ಭೀತಿಯು || 3 […]
ಪುಟ್ಟ ಶ್ಯಾಮ ಪುಟ್ಟ ಶ್ಯಾಮ ಬೆಟ್ಟವನ್ನೇ ಎತ್ತಿದಂಥ ಪುಟ್ಟ ಶ್ಯಾಮ ಜಟ್ಟಿಗಿಂತ ಗಟ್ಟಿ ನಮ್ಮ ದಿಟ್ಟ ಶ್ಯಾಮ || ಪ || ಹುಟ್ಟಿ ಬಂದ ದೇವಕಿಯ ಗರ್ಭದಲ್ಲಿ ಗುಟ್ಟಿನಿಂದ ಸಾಗಿಬಂದ ಬುಟ್ಟಿಯಲ್ಲಿ ಕೆಟ್ಟ ಮಾವ ಕಂಸನ ಕಣ್ಣು ತಪ್ಪಿಸಿ ಬಿಟ್ಟ ಬೀಡು ಗೋಕುಲದ ತೊಟ್ಟಿಲಲ್ಲಿ || 1 || ಹಟ್ಟಿಯಿಂದ ಗೋವುಗಳ ಅಟ್ಟಿ ಬಿಡುವ ಕಟ್ಟ ಬಿಚ್ಚಿ ಕರುಗಳೊಟ್ಟಿಗಾಟವಾಡುವ ಸಿಟ್ಟಿನಿಂದ ಪೆಟ್ಟು ಕೊಡುವೆನೆಂದು ಬಂದರೆ ಕಿಟ್ಟ ತಾನು ಅಟ್ಟದಲ್ಲಿ ಅಡಗಿಕೊಳ್ಳುವ || 2 || ಬಿಚ್ಚಿಟ್ಟ ಬಟ್ಟೆಗಳ […]
ಹೇ ಹಂಸವಾಹಿನಿ, ಜ್ಞಾನದಾಯಿನಿ | ಅಮ್ಮಾ ದಾರಿತೋರು ಅಮ್ಮಾ ಕರುಣೆ ಬೀರು | ವಸುಧೆಯ ಮುಕುಟದಿ ಮೆರೆಯಲು ಭಾರತ | ಬಹುಬಲ ವಿಕ್ರಮ ನೀಡು || ಪ || ಶೀಲ ಶೌರ್ಯಗಳು ಹೃದಯದಿ ಚಿಮ್ಮಲಿ | ಜೀವನ ತ್ಯಾಗ ತಪೋಮಯವಾಗಲಿ | ಸಂಯಮ ಶಿಸ್ತು ಸ್ನೇಹಗಳುದಿಸಲಿ | ಸ್ವಾಭಿಮಾನ ಬರಲಿ || 1 || ಆಗುವ ಲವಕುಶ ಧ್ರುವ ನಚಿಕೇತ | ಜನತೆಯ ಸಂಕಟ ನೀಗುವ ಸತತ | ಸಾವಿತ್ರೀ ಸತಿ ಜಾನಕಿ ದುರ್ಗೆ | ಮನೆ […]
ಆವಿನದು ನೊರೆಹಾಲನೊಲ್ಲೆನು ದೇವಲೋಕದ ಸುಧೆಯನೊಲ್ಲೆನು ದೇವಿ ನಿನ್ನಯ ನಾಮದದ್ಭುತ ರುಚಿಯನರಿತಿಹೆನು | ಪಾವನಳೆ ನಿನ್ನಂಘ್ರಿಕಮಲದ ಸೇವೆಯದು ದೊರೆತಿಹುದು ತಾಯೇ ಶ್ರೀವರನ ಕೃಪೆಯಿಂದ ಮತ್ತಿನ್ನೇನು ಬೇಡೆನಗೆ || 1 || ಬರಲಿ ಸಿರಿವಂತಿಕೆಯ ಜನ್ಮವು ಬರಲಿ ಕಡುಬಡತನದಿ ಇಲ್ಲವೆ ಇರದು ಚಿಂತೆಯು ತಾಯೇ ನಿನ್ನುದರದಲಿ ಜನಿಸುವುದೇ | ಪರಮ ಭಾಗ್ಯವು ಎಂಬುದರಿಯನೆ ಮರೆಯದಲೆ ಪ್ರತಿ ಜನ್ಮದಲಿ ಶ್ರೀ – ಧರನು ದಯೆಯಿಂದೆನಗೆ ನೀಡಲಿ ನಿನ್ನ ಸೇವೆಯನು || 2 || ಇರಲೆನಗೆ ಕರಕನ್ನವುಣ್ಣಲು ಬರಿಯ ನೆಲವಿರಲೆನಗೆ ಮಲಗಲು ಹರಕು […]