ಕಲ್ಪನೆಯ ಹಕ್ಕಿ ಗರಿಬಿಚ್ಚಿ ಆಗಸದಿ ಕೊರಳೆತ್ತಿ ಸಾರುತಿದೆ ಕೇಳಿ ಸ್ವಾಗತಕೆ ಕಾದಿಹೆವು ಪರಿವರ್ತನೆಯ ಕಾಲ ಸಾಕಿನ್ನು ಜಡತೆ ಎದ್ದೇಳಿ ಮೇಲೆದ್ದು ನಿಲಲಿ ಪೌರುಷವೇ ಮೈದಾಳಿ || ಪ || ನಾಡಸೇವೆಯ ಪಥದಿ ನೆರಳು ನಿಲುಗಡೆಯಿಲ್ಲ ಪಾಂಚಜನ್ಯವು ಮೊಳಗೆ ಕ್ಲೈಬ್ಯ ಸಲ್ಲ ಸಾಮರಸ್ಯದ ಸುಧೆಯ ಹರಿಸುವ ಭಗೀರಥರು ಪೂರ್ಣತೆಯ ಪಡೆವನಕ ನಿಲುವರಲ್ಲ || 1 || ಡಂಭರವು ಧನಭವನ ಸೌಖ್ಯ ತಂತ್ರಜ್ಞಾನ ಅರ್ಥ ಕಾಮವೇ ವಿಕಾಸವಲ್ಲ ಅಂಬರವನಾಳುವೆವು ಅಂಗಳದ ನೆಲೆಬಿಡದೆ ಧರ್ಮ ಸಂಸ್ಕೃತಿಗೆ ಪರ್ಯಾಯವಿಲ್ಲ || 2 || […]
ಬಿಂದು ಬಿಂದು ಒಂದುಗೂಡಿ ಸಿಂಧು ಎನಿಪುವಂತೆ ನೂರು ಕೋಟಿ ಭಾರತೀಯರೊಂದುಗೂಡುವಂತೆ || ಪ || ಭಾಷೆ ವೇಷ ಕಲೆಯ ಬಲವು ಎದ್ದು ನಿಲ್ಲುವಂತೆ ಮಾನವತೆಯ ಹೃದಯದೊಲವ ಜಗಕೆ ಸಾರುವಂತೆ || 1 || ಧುಮ್ಮಿಕ್ಕುತ ಭೋರ್ಗರೆದಿದೆ ಭರತವರ್ಷ ಸಾಗರ ಎದೆ ಎದೆಯಲಿ ಝೇಂಕರಿಸಿದೆ ಭ್ರಾತೃತ್ವದ ಬಂಧುರ || 2 || ಕಣ ಕಣದಲಿ ಮಿಡಿಯುತಲಿದೆ ಶಾಂತಿಮಂತ್ರದಿಂಚರ ಭಾರತೀಯ ಮನುಜ ಮನವು ವಿಶ್ವಪ್ರೇಮದಾಗರ || 3 || ಆಗಸದಿಂದನವರತವು ಸುರಿವುದಿಲ್ಲಿ ಹೂಮಳೆ ಬೆಂದ ಹೃದಯದಾಳದಲ್ಲಿ ಬಂಧ ಬೆಸೆವುದೀ ಇಳೆ […]
ಬಾಗಿಲನು ತೆರೆದಿರಿಸಿ ಸ್ವಾಗತಕೆ ಕಾದಿಹೆವು ಸದ್ವಿಚಾರದ ಧಾರೆ ಹರಿದು ಬರಲಿ ಶುದ್ಧ ಸಾತ್ವಿಕ ಪ್ರೇಮಸುಧೆಯುಂಡ ಹೃದಯಗಳು ಜತೆಗೂಡಿ ಭಾರತಕೆ ಕೀರ್ತಿ ತರಲಿ || ಪ || ಭೂರಮೆಯ ಭವನಕಿದೆ ಆಧ್ಯಾತ್ಮ ತಳಹದಿಯು ಸಂಗೀತ ನೃತ್ಯಾದಿ ಕಲೆಯ ದ್ವಾರ ‘ಶಾಸ್ತ್ರ’ ಬೆಳಗುವ ದೀಪ್ತಿ ‘ಕ್ಷಾತ್ರ’ ರಕ್ಷಿಪ ಭಿತ್ತಿ ಸ್ನೇಹ ಬಯಸುವ ಮನಕೆ ತೆರೆದ ದ್ವಾರ || 1 || ಶಿಲೆ ಶಿಲೆಯು ಹೊಮ್ಮಿಸುವ ಸಮರಸದ ಸುರನಾದ ಜನ ಮನವ ಬೆಸೆಯುತಿಹ ನವ್ಯ ವೇದ ಧ್ಯೇಯ ಪ್ರಣತಿಯ ಪ್ರಭೆಯ ಪ್ರತಿಫಲಿಸುತಿದೆ […]
ಏಳಿ ಎದ್ದೇಳಿ, ಹಿಂದುತ್ವ ಮೈತಾಳಿ, ಏಳಿ ಎದ್ದೇಳಿ ಸತ್ಯರತ ಸರ್ವಹಿತ ಹಿಂದುತ್ವದಮರ ಪಥ || ಪ || ತಮ್ಮದೇ ದಿಟವೆಂಬ ವಿವಿಧ ವಾದವಿವಾದ ಕಪಟ ವಂಚನೆ ಕ್ರೌರ್ಯ ದಾಸ್ಯ ದಮನದ ಪರ್ವ ದ್ವೇಷ ಸಂಘರ್ಷಗಳ ಹಾಲಾಹಲವ ಕುಡಿದು ಸಹಿಸಿ ಸಾವನು ಗೆದ್ದ ನೀಲಕಂಠನ ತೆರದಿ ಮತ್ತೆ ಮೇಲೆದ್ದಿಹುದು ಅಮರ ಹಿಂದುತ್ವ || 1 || ಸುಖದಾಸೆ ಮಿತಿಮೀರಿ ಭುವಿಯೊಡಲ ಬಿಸಿಯೇರಿ ಪರಿಸರವು ಹದಗೆಡಲು ಜೀವಕುಲ ನಲುಗಿರಲು ತ್ಯಾಗತಪಗಳ ಸರಳ ಸಹಜ ಜೀವನ ನಡೆಸಿ ನಾಕವನು ಮೀರಿಸುವ ಧರೆಯನಾಗಿಸಲೆಂದು […]
ತಾಯಿ ಕಾದಿಹಳಿಂದು ಆ ನರೇಂದ್ರನಿಗಾಗಿ ಸಿಂಹಸದೃಶನಿಗಾಗಿ ಓ ಧೀರರೇ ಸ್ವಾರ್ಥವನು ಕಿತ್ತೊಗೆದು ಸರ್ವಸ್ವವನು ಸುರಿದು ನಿಲ್ಲಬಲ್ಲಿರೇ ಭರತದೇಶಾತ್ಮರೇ || ಪ || ಜನಿಸಿ ಕಲಕತ್ತೆಯಲಿ ರಾಮಕೃಷ್ಣರ ಶಿಷ್ಯ ಸುತ್ತಿದನು ಭಾರತವ ಬರಿಗಾಲಲಿ ರಾಷ್ಟ್ರ ಪರಪದತಳದಿ ನರಳುವುದ ತಾ ಕಂಡು ಹರಿಕಾರನಾದನಾ ಸಂಕ್ರಾಂತಿಗೆ || 1 || ಹಿಂದು ಸತ್ವೋನ್ನತಿಯ ವಕ್ತಾರ ತಾನಾಗಿ ಮಿತ್ರನಾದನು ವಿಶ್ವವೇದಿಕೆಯಲಿ ಸಂದ ಗೌರವ ಸಿದ್ಧಿಯಾಪದವಿಯೆಲ್ಲವನು ಅರ್ಪಿಸಿದ ಭಾರತಿಯ ಪಾದಾಬ್ಜಕೆ || 2 || ಆ ಮಹಾತ್ಮನ ತನುವು ಮನ ಧನ ದಗ್ಧವಾಯಿತು ದೇಶದುದ್ಧಾರಕೆ […]
ನಿಗ್ರಹಿಸೋ ಮನವ ನೀ ಯೋಗಿ ನಿಗ್ರಹಿಸೋ ವಿಷಯವ ನೀ ಮಾಗಿ || ಪ || ಚಿತ್ತವೃತ್ತಿಯಲಿ ಇರುವುದು ಮೂರು ಮನೋಬುದ್ಧಿ ಅಹಂಕಾರವೆನ್ನುವುದು ಅನುಪಮ ವೈರಾಗ್ಯ ಸಹಜ ಅಭ್ಯಾಸದ ನಿಗ್ರಹ ಸಾಧನೆ ಸಾಧ್ಯ ಸಂಯೋಗ || 1 || ಯೋಗವು ತರುವುದು ಶಾಂತಿಯ ಮನಸಿಗೆ ಕ್ಲೇಶ ಕಳುಚುವುದು ಯೋಗ ಸಾಧಕಗೆ ಪ್ರಾಣ ಪ್ರವಾಹವ ಧಾರಣ ಮಾಡಿ ಕ್ರಮಗೊಳಿಸುವ ಅಷ್ಟಾಂಗದ ಹಾದಿ || 2 || ಅಂತರಾತ್ಮನ ಕಾಣಲು ಧ್ಯಾನ ಆತ್ಮಸಾಕ್ಷಾತ್ಕಾರಕೆ ಸಾಧನ ಧ್ಯಾನ ಯಮ ನಿಯಮಗಳೇ ಸಮರಸ ತಂತ್ರ […]
ಭರತಮಾತೆಯ ಮಮತೆಯುಡುಗೊರೆ ಯೋಗವೆಂಬೀ ವಿಸ್ಮಯ ಅರಿತು ಜಗವು ಅಪ್ಪಿಕೊಂಡಿದೆ ಫಲವು ಅದ್ಭುತ ಅಕ್ಷಯ || ಪ || ಇರದು ಇತಿಮಿತಿ ಗುರು ಪತಂಜಲಿ ತೋರಿಕೊಟ್ಟರು ಹಾದಿಯ ಭರದಿ ಕಾಡಿಗೆ ಜನತೆಯೆಲ್ಲೆಡೆ ವಿಶ್ವ ಯೋಗದ ಸುದಿನವ || ಅ.ಪ || ಬರಿಯ ತನುವನು ಮಣಿಪ ಪರಿಣಿತಿ ಅಷ್ಟೆ ಅಲ್ಲವು ಯೋಗವು ಹರಹು ಶರಧಿಯು ಮುಗಿಲ ಪರಿಧಿ ಉತ್ತುಂಗ ಮೇರು ಶಿಖರವು ಉಸಿರು ಉಸಿರಲಿ ಬಸಿರಿನಲ್ಲೂ ಜೀವ ಚೇತನ ವೃದ್ಧಿಯು ನೂರು ಜಂಜಡ ದೇಹಕೆಲ್ಲ ಇಂದು ಬೇಕಿದೆ ಧ್ಯಾನವು || […]
ಯೋಗದ ಬೆಳಕಲಿ ಸಾಗೋಣ ಸುಯೋಗಿಗಳಾಗಿ ಬದುಕೋಣ ಯೋಗಾಚಾರ್ಯರ ಸ್ತುತಿಸೋಣ ಪತಂಜಲಿ ಮುನಿಗಳ ನಮಿಸೋಣ || ಪ || ಅಷ್ಟಾಂಗ ಯೋಗದ ಆಲದ ಮರದಡಿ ಅಷ್ಟಮದಗಳ ತ್ಯಜಿಸುತಲಿ ಅನುದಿನ ಯಮ-ನಿಯಮಗಳೊಡಗೂಡಿ ರಾಷ್ಟ್ರದ ಧ್ಯಾನವ ಮಾಡೋಣ || 1 || ನರನಾಡಿಗಳೆಲ್ಲವ ತುಂಬಿಹ ಉಸಿರಿಗೆ ನವ ಚೈತನ್ಯವ ನೀಡುತಲೀ ತನು-ಮನ-ಪ್ರಾಣಗಳೆಲ್ಲವ ನಾವು ಭಾರತ ಮಾತೆಗೆ ನೀಡೋಣ || 2 || ಯೋಗದ ದಿನವಿದು ಸಂಕೇತ ಎನ್ನುತ ಜಗದಗಲವು ಹಣತೆಯ ಹಚ್ಚೋಣ ಅರಿವಿನ ಪ್ರತ್ಯಾಹಾರದ ಜೊತೆಯಲಿ ನಾಡಿನ ಕೀರ್ತಿಯ ಮೆರೆಸೋಣ || […]
ವ್ಯಾಯಾಮ ಯೋಗದಾ ಸರಳ ಕ್ರಮ ತಿಳಿಯುವಾ ಅಣ್ಣಾ ತಮ್ಮಾ ಎಲ್ಲಾ ಬನ್ನಿ || ಪ || ಮೇಲೆತ್ತಿರಿ ಹಿಮ್ಮಡಿಯ ಕಾಲಿಂ ಮಿತಕಾಲ್ ನಿಂತಲ್ಲಿಯೆ ಓಟ ಕಾಲ್ಬೆರಳಿನ ಸ್ಪರ್ಷ || 1 || ಹೆಜ್ಜೆಯ ಕೆಳಗೂರಿ ಮೇಲೆತ್ತಿರಿ ನಂತರವೆ ಬಾಗಿಸಿ ಮಂಡಿಯನು ತೂಗಿಸಿ ದೇಹವನು || 2 || ಪೂರ್ಣ ಬೈಠಕ್ ಹೊಡೆದು ಬಾಗಿಸಿ ಸೊಂಟವನು ಅರಳಿಸಿ ಬಾಹುವನು ಮಡಿಸಿ ಮೊಣಕೈಗಳನು || 3 || ಕೊರಳನು ಬಾಗಿಸಿ ನೆಲದೊಳು ಕೈಯಿಟ್ಟು ಮಾಡಿರಿ ಶ್ವಸನವ ನೆನಪಿಟ್ಟು ನೆನಪಿಟ್ಟು || […]
ಮನದ ದಮನವಿದಲ್ಲ ಪ್ರಶಮನದ ಸದುಪಾಯ ಚಿತ್ತಚಾಂಚಲ್ಯವನು ತಡೆವ ಭಿತ್ತಿ ಸ್ವಸ್ಥತನು ಮನದಲ್ಲಿ ಶಕ್ತ ರಾಷ್ಟ್ರೀಯತೆಯು ಏಕಾತ್ಮಭಾರತದ ದಿವ್ಯ ದೃಷ್ಟಿ || ಪ || ಯಮ ನಿಯಮ ಆಸನವೇ ಗುರಿಯಲ್ಲ ಮಾರ್ಗವಿದು ಮನಸುಗಳ ಸಮನಿಸುವ ಸಮಾಜಯೋಗ ಧ್ಯಾನ ಜಪಗಳ ಆಚೆ ಶ್ವಾಸ ಸಾಧನೆಯಾಚೆ ವಿಶ್ವವನೆ ಜೋಡಿಸುವ ವಿಶ್ವಾಸ ಯೋಗ || 1 || ಶೂನ್ಯತೆಯ ಚಿಹ್ನೆಯದು ಪೂರ್ಣತೆಯ ಪ್ರತಿರೂಪ ತ್ಯಾಗಮಾರ್ಗದಿ ಪೂರ್ಣದೆಡೆಗೆ ಪಯಣ ಉನ್ನತದ ಚಿಂತನೆಯ ಸರಳ ಸುಂದರ ಬದುಕು ವಿಶ್ವದೇಕಾತ್ಮತೆಯ ಭಾವಯಾನ || 2 ||