ಬಾs ಬಾರೊ ಬಾರೊ ಬಾರೊ ಬಾರೊs ಸಂಘದ ಶಾಖೆಗೆ ತಾಯಿ ಭಾರತಿಯ ಸೇವೆಗೆ || ಪ || ಸಿದ್ಧನಾಗು ದೇಶಿ ಆಟಕೆ ಉಸಿರು ಹಿಡಿದುಕೊ ಕಬ್ಬಡ್ಡಿಗೆ ಗೆಲ್ಲು ಛಲದಿ ಯೋಧನಂತೆ ಗಟ್ಟಿಯಾಗಲಿ ಶರೀರಕೆ ಆಟಗಳದಿ ಉಲ್ಲಾಸವೆದ್ದಿದೆ ಹೊಸ ಚೈತನ್ಯವು ಮೂಡಿದೆ || 1 || ಆತ್ಮರಕ್ಷಣೆಯ ಪ್ರಹಾರವು ದಿನಕರನಿಗೆ ಆಸನ ನಮನವು ಹೆಜ್ಜೆ ಹೆಜ್ಜೆ ಕೂಡಿ ನಡೆವೆವು ಶಿಸ್ತಿನ ಕ್ರಿಯೆ ಮೈತಾಳೆವು ಅಂಕತಾಳ ನಡೆಯು ಒಂದೇ ಗುರಿಯು ಒಂದೇ ನಮಗಿದೆ || 2 ||| ಹತ್ತು ಹಲವು […]
ಉಷೆ ಯಶವ ಗಳಿಸಿಹಳು ನಿಶೆ ಕುಸಿದು ಕುಳಿತಿಹಳು ಮೂಡಣದ ಆಗಸದಿ ಕೆಂಪೇರಿದೆ ಹೊಸ ಕುಸುಮವರಳುತಿರೆ ನಸು ನಗುವ ಬೀರುತಿರೆ ನಸುಕಿನಲೆ ಅಂಗಳದಿ ಕಂಪೇರಿದೆ || ಪ || ಅರಳಿರುವ ಸುಮದಲಿಹ ಅಂದ ಮಕರಂದಗಳು ಸ್ನೇಹದೊಸಗೆಯನಿತ್ತು ಬಳಿ ಕರೆದಿವೆ ಚಿಗುರೆಲೆಯ ಮರೆಯಿಂದ ಕೇಳುತಿಹ ಕೂಜನದಿ ಲೋಕಹಿತದಾಶಯವು ಮರುದನಿಸಿದೆ || 1 || ಚರಿತೆಯೊಡಲಿಗೆ ಸರಿದ ಇರುಳ ಕಗ್ಗತ್ತಲೆಯ ಕಹಿಗನಸು ನೋವುಗಳ ಕೊನೆಯಾಗಿವೆ ಮೇಲೆದ್ದು ಕೊಳೆ ತೊಳೆದು ಮಡಿಯಾದ ಯುವಜನತೆ ಧ್ಯೇಯ ತಿಲಕವ ಧರಿಸಿ ಅಣಿಯಾಗಿದೆ || 2 || […]
ಶಿವ ಸುಂದರ ಭಾರತದ ಪುಣ್ಯನೆಲ ಸಂಜೀವಿನಿ ತೀರ್ಥಗಳೇ ಎಲ್ಲ ಜಲ || ಪ || ಧರ್ಮಘೋಷ ಉಸಿರಾಡುವ ಗಾಳಿಯಾಗಿದೆ ಸಹನೆಮಂತ್ರ ಬಾಳಿನಲ್ಲಿ ಬೆರೆತುಹೋಗಿದೆ ಬೆಟ್ಟ ಬೆಟ್ಟದಲ್ಲೂ ಕರೆವ ಗುಡಿಯ ಗೋಪುರ ಹತ್ತಿ ಇಳಿವ ಭಕ್ತಜನಕೆ ಸಹಜ ಸುಂದರ || 1 || ಉತ್ತರದಲಿ ಹಿಮಾಲಯದ ಗಿರಿಯ ಉನ್ನತಿ ದಕ್ಷಿಣದಲಿ ಅಲೆ ಅಲೆಗಳ ಕಡಲಿನಾಕೃತಿ ನಡುವೆ ಸಾವಿರಾರು ವರುಷ ಬೆಳೆದ ಸಂಸ್ಕೃತಿ ಇದೇ ನಮ್ಮ ಭಾರತಾಂಬೆ ಚೆಲುವಿನಾಕೃತಿ || 2 || ದಿವ್ಯಪುರುಷರಿತ್ತ ಜ್ಞಾನಜ್ಯೋತಿ ಬೆಳಗಿದೆ ಶಾಂತಿ ಸ್ನೇಹ […]
ಭಾವನೆಗೆ ಬಲವೇರಿ ಕಲ್ಪನೆಯು ಗರಿಗೆದರಿ ಮಾತೃದರ್ಶನವಾಯ್ತು ಮಣ್ಣಿನಲ್ಲಿ ನಿನ್ನ ಚರಣದೊಳೆನ್ನ ಹರಣವರ್ಪಣವೆಂಬ ಭಾವದಂಕುರವಾಯ್ತು ಹೃದಯದಲ್ಲಿ || ಪ || ಕಾಯ ಬತ್ತಿಯು ಉರಿದು ಧ್ಯೇಯದಾರತಿ ಬೆಳಗೆ ಲೇಖನಿಯ ಮಸಿಯದಕೆ ತೈಲವಾಯ್ತು ಹಾಳೆಗಳ ಮೇಲುದಿಸಿದೊಂದೊಂದು ಅಕ್ಷರವೂ ಸ್ಥೈರ್ಯದುಪಮೆಯನೀವ ಶೈಲವಾಯ್ತು || 1 || ಕವಿವಾಣಿಯೊಡನಿಂತು ಗಾಯಕನ ದನಿಗೂಡಿ ರಣ ಕಹಳೆ ಎಲ್ಲೆಡೆಯು ಮರುದನಿಸಿತು ಕಲಿತನವು ಎಚ್ಚೆತ್ತು ಯುವಜನತೆ ಘರ್ಜಿಸುತ ಸಮರದುತ್ಸಾಹದಲಿ ಮುನ್ನುಗ್ಗಿತು || 2 || ಯುವ ಜನತೆ ನಿರ್ಮಿಸಿದ ಸ್ವಾತಂತ್ಯ ಸೌಧಕ್ಕೆ ಅಕ್ಷರದ ಪುಂಜಗಳ ಕುಸುರಿ ಕಂಭ […]
ಚಪಲ ಮನವನು ತಣಿಸಿ ಇಂದ್ರಿಯಂಗಳ ಮಣಿಸಿ ಸಂಯಮದ ಸಾಧನೆಯ ಪ್ರಗತಿ ಮಾರ್ಗ ಆತ್ಮ ಸುಖವನು ಬಯಸಿ ಸಂತಸದ ಸೆಲೆಯರಸಿ ಅಂತರಂಗದ ಯಾತ್ರೆಯದುವೆ ಯೋಗ || ಪ || ಸತ್ವಯುತ ಆಹಾರ, ಹಿತ-ವಿಹಿತ ವ್ಯವಹಾರ ಮಿತವಾದ ಉಪಭೋಗ, ವಿಷಯದಾಸಕ್ತಿ ತಿದ್ದಿರುವ ತನುಮನವು ಶುದ್ಧಗೊಳಿಸಿದ ಬುದ್ಧಿ ಆತ್ಮಾನುಸಂಧಾನ ಭಗವದನುರಕ್ತಿ || 1 || ನನ್ನರಿವ ನಾ ಗಳಿಸಿ ಚಿನ್ಮಯನ ಬೆಸಗೊಳುವ ಜನ್ಮ ಸಫಲತೆಯೆಂಬ ದಿವ್ಯ ಯೋಗ ಫಲದ ಬಯಕೆಯು ಇರದ ಕರ್ಮದಲೇ ಸಾರ್ಥಕ್ಯ ಕರ್ಮದಲಿ ಕುಶಲತೆಯ ಕಲೆಯು ಯೋಗ || […]
ಭಗವೆ ನಿನ್ನಯ ಭಾಷೆ ಜಗಕೊಂದು ವಿಸ್ಮಯವು ನಿನ್ನ ಸನ್ನಿಧಿಯಲ್ಲೇ ನನ್ನ ಅಧ್ಯಯನ ತೆಗೆದಷ್ಟು ಮೊಗೆದಷ್ಟು ಹೊಚ್ಚ ಹೊಸ ಹೊಳಹುಗಳು ಬರಹ, ಬಳಪಗಳಿಲ್ಲ ಮೌನ ಸಂವಹನ || ಪ || ಕದನ ಕಲಿಗಳ ಶಕ್ತಿ , ತ್ಯಾಗಗುಣದಭಿವ್ಯಕ್ತಿ ಜ್ಞಾನಗಳಿಕೆಗೆ ಸ್ಫೂರ್ತಿ, ಸಂಘ ಶಕ್ತಿ ಧ್ಯೇಯಯಾತ್ರಿಯ ದೀಪ್ತಿ, ಭಾರತಾಂಬೆಯ ಕೀರ್ತಿ ಏಕತೆಯ ಅನುಭೂತಿ, ರಾಷ್ಟ್ರ ಭಕ್ತಿ || 1 || ಜನನದಿನದರಿವಿಲ್ಲ, ಭಗವೆ ನಿನಗಳಿವಿಲ್ಲ ಮನದಳಲ ಪರಿಹರಿಪ ಆತ್ಮಬಲನೀನು ದೇಶ,ಧರ್ಮದ ಒಲವು, ಸ್ವತ್ವ- ಸತ್ಯದ ಗೆಲುವು ಭಾರತದಿ ಕುಡಿಯೊಡೆದ ಛಲವು […]
ಕೋಟಿ ಸವಾಲಿಗೆ ಉತ್ತರ ಒಂದೇ ಹಿಂದೂ ಭಾವದ ಜಾಗರಣ ನಾಡಿದು ಬಯಸಿದೆ ಸಂಕ್ರಮಣ ಉತ್ತರ ಒಂದೇ ಜಾಗರಣ || ಪ || ಸೋಲಿನ ದಿನಗಳ ಹಿಂದಕೆ ಸರಿಸಿ ನಲಿವಿನ ನಾಳೆಗೆ ಕದ ತೆರೆದು ಗೋಳಿನ ಕಥೆಗಳ ಗೊಂದಲ ಮರೆಸಿ ಗೆಲುವಿನ ಪಥದಲಿ ಮುನ್ನಡೆದು ಏಳಿರಿ ತರುಣರೆ ದನಿಯೊಂದಾಗಿಸಿ ಅರಿಗಳ ದಂಡನು ಸದೆಬಡಿದು || 1 || ಶಾರದೆ ನಾಡಿನ ಶಾಪವಿಮುಕ್ತಿ ದ್ವೇಷದ ಹೊಂಚನು ಪುಡಿ ಮಾಡಿ ರಾಮನ ಕಾರ್ಯದಿ ಮೆರೆದಿದೆ ಭಕ್ತಿ ಅಂಜಿಕೆ ಸಂಚಿಗೆ ಕೊನೆಹಾಡಿ ಹೊರಳಿದೆ […]
ಜಯೋಸ್ತು ತೇ ಜಯೋಸ್ತು ತೇ ಶ್ರೀ ಸ್ವತಂತ್ರ ತೇ || ಪ || ಶ್ರೀ ಮಹನ್ಮಂಗಳೆ ಶುಭಗುಣಸನ್ನು ತಳೆ ಜಯ ನಿನಗೆ ಯಶೋವನಿತೆ ಸ್ವಾತಂತ್ರ್ಯ ಭಗವತಿಯೇ ನಮೋ ನಿನ್ನಡಿಗೆ ನೀತಿಸಂಪನ್ನೆ ರಾಷ್ಟ್ರೀಯ ಚೇತನದ ಮೂರ್ತಿ ಹೇ ಸ್ವಾತಂತ್ರ್ಯ ಭಗವತಿಯೆ ಸನ್ಮತಿಯೆ ಸಾಮ್ರಾಜ್ಞಿ ರೂಪೆ || 1 || ಅವುದಾವುದುತ್ತಮ ಉದಾತ್ತ ಮಹನ್ಮಧುರವೋ ಸ್ವಾತಂತ್ರ ಭಗವತಿಯೆ ನಿನ್ನದಹುದದು ಪರಿವಾರವು ಯೋಗಿಜನ ಘೋಷಿಸುವ ಮೋಕ್ಷ ಮುಕ್ತಿಗಳೆಲ್ಲವು ಸ್ವಾತಂತ್ರ ಭಗವತಿಯೆ ನೀನೆ, ನೀ ಪರಬ್ರಹ್ಮವು || 2 || ಹೇ ಶತ್ರುರಕ್ತರಂಜಿತೆ, […]
ವಂದಿಪೆ ಮಾಧವ ಧ್ಯೇಯಭಾಸ್ಕರ ಸಂಘರೂಪದಿ ನೀ ಅಜರಾಮರ || ಪ || ಕಣ ಕಣ ಆಜ್ಯವು ರಾಷ್ಟ್ರಕಾರ್ಯಕೆ ಕ್ಷಣ ಕ್ಷಣ ಜೀವನ ಶಾಖೆಯ ಬೆಳೆಗೆ ಸಾಸಿರ ಸಾಸಿರ ತರುಣ ಸಾಧಕರ ಹೃನ್ಮನ ಬೆಳಗಿದ ವಿಚಾರ ಸಾಗರ || 1 || ಅಕ್ಷಯ ಸ್ಫೂರ್ತಿಯ ಕರ್ಮಯೋಗಿಯೇ ಲಕ್ಷ್ಯವ ಪೂರ್ತಿಪ ಧ್ಯೇಯ ಜೀವಿಯೇ ನಿನ್ನಯ ಪಥದಿ ನಮ್ಮಯ ಹೆಜ್ಜೆಯು ಪರಮ ವೈಭವಕೆ ಅದುವೇ ನಾಂದಿಯು || 2 || ವಿಘ್ನಕೋಟಿಗಳ ಕ್ರಮಿಸಿದ ಸಾಧಕ ತರುಣ ಹೃದಯಗಳ ಮೀಟಿದ ವೈಣಿಕ ಜಗವನೆ […]
ಒಟ್ಟುಗೂಡಿ ಜನತೆಯೆಲ್ಲ ಗಟ್ಟಿ ಮನದಿ ಹುಟ್ಟಿದೂರ ದಿಟ್ಟತನದಿ ಮತ್ತೆ ಮೇಲಕ್ಕೆತ್ತುವ ಬನ್ನಿ ಕೆಟ್ಟ ಚಟದ ಮೂಲವಳಿಸಿ ಮತ್ತೆ ಹುಟ್ಟದಂತೆ ಅದನು ಮೆಟ್ಟಿ ತುಳಿದು ನಾವು ಸುಟ್ಟು ಹಾಕೋಣ ಬನ್ನಿ || ಹೊಯ್ || ತಿತ್ತಿತ್ತಾರಾ ತಿತ್ತಿತೈ ತಿತ್ತೈ ತಗಧಿನ್ನತ್ತೋಂ ನಷ್ಟವೆಂದೂ ಬಾರದಂತೆ ಇಷ್ಟದೇವನೊಲಿದು ಕೊಡುವ ಕಷ್ಟಪಟ್ಟು ದುಡಿದು ನಾವು ಗಳಿಸೋಣ ಬನ್ನಿ ಅಷ್ಟೋ ಇಷ್ಟೋ ಗಳಿಸಿದುದನು ಒಟ್ಟು ಮಾಡಿ ಇಟ್ಟುಕೊಂಡು ಸ್ವಾವಲಂಬಿ ಜೀವನವ ನಡೆಸೋಣ ಬನ್ನಿ || ಹೊಯ್ || ತಿತ್ತಿತ್ತಾರಾ ತಿತ್ತಿತೈ ತಿತ್ತೈ ತಗಧಿನ್ನತ್ತೋಂ ಸುಮ್ಮನಿರದೆ […]