ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವಾ ಧ್ಯೇಯ ಮಹಾಜಲಧಿಯೆಡೆಗೆ ಸಲಿಲವಾಗಿ ಹರಿಯುವಾ ಲೋಕಹಿತದ ಕಾಯಕ ನಾಡಿಗಭಯದಾಯಕ ವ್ಯಕ್ತಿವ್ಯಕ್ತಿಯಾಗಲಿಂದು ನೈಜ ರಾಷ್ಟ್ರಸೇವಕ || ಪ || ಉಚ್ಚನೀಚ ಭೇದವ ಅಳಿಸಿ ದೂರಗೊಳಿಸುವಾ ರೊಚ್ಚು ರೋಷ ನೀಗುತಾ ಬಂಧು ಭಾವ ಬೆಳೆಸುವಾ ಹಚ್ಚಿ ಜ್ಞಾನದೀವಿಗೆ ಸುತ್ತ ಬೆಳಕ ಬೀರುವಾ ಕೆಚ್ಚಿನಿಂದ ಮುಂದೆ ಸಾಗಿ ಭರದಿ ಗುರಿಯ ಸೇರುವಾ || 1 || ಎಲೆಯ ಮರೆಯೊಳರಳಿ ನಗುವ ಸುಮನರಾಶಿಯಂದದಿ ಕಡಲ ಒಡಲೊಳುಕ್ಕಿ ಮೊರೆವ ಕೋಟಿ ಅಲೆಗಳಂದದಿ ವಿಮುಖರಾಗಿ ಖ್ಯಾತಿಗೆ ಪ್ರಚಾರಕೆ ಪ್ರಶಂಸೆಗೆ ಸಹಜಭಾವದಿಂದ […]
ಸೇವೆಯ ಸೇತುವೆ ಕಟ್ಟಲು ಬನ್ನಿ ವ್ಯಕ್ತಿ ಸಮಾಜದ ನಡುವೆ ನಾಡದೇವತೆಗೆ ಅರ್ಪಿಸಬನ್ನಿ ತನುಮನಧನಗಳ ಒಡವೆ || ಪ || ಸೇವೆಯೆ ತತ್ವದ ಸಾರವು ನಿಜದಿ ಸೇವೆಯೆ ಜೀವನ ಧರ್ಮ ಸ್ವಾರ್ಥದುರಾಶೆಯ ನೀಗಿಸಿ ಬಾಳನು ಸಾರ್ಥಕಗೊಳಿಸುವ ಮರ್ಮ ಕಂಗೆಡಿಸುವ ಕಗ್ಗತ್ತಲಕೂಪದಿ ಸೇವೆಯೆ ದಾರಿದೀಪ ದುಃಖಿತ ಜನತೆಯ ಕಂಬನಿಯೊರೆಸುವ ಕರುಣೆಯ ಮಾತೃಸ್ವರೂಪ || 1 || ಅಕ್ಷರವಿದ್ಯೆಯ ಕಲಿಸಿ ನಿರಕ್ಷುರಕುಕ್ಷಿಗಳಿಗೆ ಒಲವಿಂದ ಅಕ್ಷಯ ರಕ್ಷಣೆ ನೀಡುತ ಶೋಷಿತ ಜನತೆಗೆ ಛಲಬಲದಿಂದ ಕಾರ್ಪಣ್ಯದ ಘಟಸರ್ಪದ ದರ್ಪವ ಮುರಿಯಲು ಸೇವೆಯೆ ಮಾರ್ಗ ತ್ಯಾಗ […]
ಸುತ್ತಮುತ್ತಲು ಅಂಧಕಾರ ಉರಿಯುತಿತ್ತು ಹಣತೆಯೊಂದು ಬೆಳಕು ಹೊಮ್ಮಿತು ತಮವು ಅಳಿಯಿತು ಪುಳಕಗೊಂಡನು ಹಿಂದು ಹಿಂದು || ಪ || ಬರದ ಬೇಗೆಗೆ ಭುವಿಯ ಬೆಂದಿರೆ ಚಿಮ್ಮುತಿತ್ತು ಚಿಲುಮೆಯೊಂದು ದಾಹ ನೀಗಿತು ಧಾರೆ ಹರಿಯಿತು ಆಯಿತದುವೇ ಶಕ್ತಿಸಿಂಧು || 1 || ದೈತ್ಯ ಶಕ್ತಿಯ ಚಂಡಮಾರುತ ಬೀಸುತಿತ್ತು ಭರದೊಳಂದು ತತ್ತರಿಸದೆಯೆ ಎತ್ತರಿಸಿ ತಲೆ ಸಸಿಯು ಹೆಮ್ಮರವಾಯಿತಿಂದು || 2 || ದೈನ್ಯದಾಸ್ಯದ ವಿಕಟಹಾಸ್ಯಕೆ ನಡುಗುತಿತ್ತು ದೇಶವಂದು ಸ್ವಾಭಿಮಾನದ ಐಕ್ಯಬಲದಿಂ ಎದ್ದು ನಿಂತಿದೆ ರಾಷ್ಟ್ರವಿಂದು || 3 || ಘನ […]
ಸಾಮರಸ್ಯದ ನವ್ಯಯುಗಕೆ ನಿಮಗಿದೋ ಆಮಂತ್ರಣ | ಕಣ್ಣತೆರೆದು ಭ್ರಮೆಯ ತೊರೆದು ನೀಡಿ ಹಾರ್ದಿಕ ಸ್ಪಂದನ ಮಾಡಿ ಸೀಮೋಲ್ಲಂಘನ || ಪ || ಭರತ ಭೂಮಿಯ ಚರಿತೆಯೊಡಲಲಿ ಅಡಗಿದೆ ಕಥೆ ಸಾವಿರ ಮಡಿಲ ಮಕ್ಕಳ ಸೋಲುಗೆಲುವಿನ ನೋವು ನಲಿವಿನ ಹಂದರ ಪ್ರಗತಿ ಪತನದ ಕಥನ ಮಥನದಿ ಸತ್ಯವಾಗಲಿ ಗೋಚರ ಮತ್ತೆ ಮೂಡಲಿ ಭಾಸ್ಕರ || 1 || ಖಡ್ಗಬಲದಿಂ ಕುಟಿಲತನದಿಂ ನಡೆಯಿತಿಲ್ಲಿ ಮತಾಂತರ ಒಂದೆ ನೆತ್ತರ ಬಂಧುಗಳಲಿ ಹಗೆಯ ವಿಷಬೀಜಾಂಕುರ ಒಡೆದು ಆಳುವ ಕಪಟ ನೀತಿಯು ತಂದಿತೋ ಗಂಡಾಂತರ […]
ಸದಾ ಮೊಳಗುತಿರಲಿ ದುಂದುಭಿಯ ಘೋಷ ಪ್ರತಿನಿಧಿಸಿ ಪ್ರತಿಧ್ವನಿಸಿ ದಿಗ್ವಿಜಯದಾಶಾ || ಪ || ಪಾಂಡುರಂಗನಖಂಡ ಪಾಂಚಜನ್ಯದ ಧ್ವನಿಗೆ ಪಾಂಡವರ ಗುಂಡಿಗೆಯು ಗರಿಗೆದರಿದಂತೆ ಚಂಡಿ ಚಾಮುಂಡಿಯರ ಅಟ್ಟಹಾಸವ ಕಂಡು ಭಂಡ ರುಂಡಗಳಂದು ಧರೆಗುರುಳಿದಂತೆ || 1 || ಪ್ರಳಯರುದ್ರನ ಡಮರು ವಾದನದ ಸ್ಪಂದನದಿ ತಾಂಡವದ ತಾಳಲಯ ರೂಪುಗೊಂಡಂತೆ ಸ್ವರ್ಗದಿಂ ಧುಮ್ಮಿಕ್ಕಿ ಭೋರ್ಗರೆವ ಜಲಧಾರೆ ಜಗದಗಲ ಸಂಭ್ರಮದಿ ಹರಿದಾಡಿದಂತೆ || 2 || ಭರತಖಂಡ ಪ್ರಚಂಡ ಗಂಡುಗಲಿಗಳ ತಂಡ ಚಂಡಮಾರುತದಂತೆ ಅಪ್ಪಳಿಸಿದಾಗ ಅಖಿಲ ಭೂಮಂಡಲವೆ ಥರಥರನೆ ಕಂಪಿಸುತ ವೈರಿಕುಲ ಉದ್ದಂಡ […]
ಸಂಘದ ಸಸಿಯಿದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ ಟೊಂಗೆ ಟೊಂಗೆಯಲು ಕಂಗೊಳಿಸುತಲಿಹ ಅಮೃತ ಫಲಗಳ ನೀಡಲು ಬಾ || ಪ || ಮೋಹಿತೆವಾಡದ ಅಂಗಳದಲ್ಲಿ ನೀನೇ ನೆಟ್ಟಿಹ ಸಸಿಯಂದು ಬೆಳೆಯಿತು ಭರದಲಿ ಬೆಳೆಯತಲಿಹುದು ಅಗಣಿತ ಶಾಖೆಗಳೈತಂದು ಬೆಂಗಾಡನು ರಂಗೇರಿಸಿ ಬೀಸಿತು ನವಚೈತನ್ಯದ ತಂಗಾಳಿ ದೈನ್ಯ ನಿರಾಶೆಯ ಕಾಲವು ಕಳೆಯಿತು, ಮೈಮರೆವಿನ ಪೊರೆಯನು ಸೀಳಿ || 1 […]
ಸಂಘಜನಕ ಕೇಶವಾ ಜನ್ಮತಳೆದು ಬಾರೋ ಧ್ಯೇಯಮಾರ್ಗದಲ್ಲಿ ನಮಗೆ ದಾರಿ ತೋರೋ || ಪ || ಕೆಸರ ಒಡಲಿನಿಂದ ಕಮಲ ಅರಳಿದಂತೆ ಮರಳುಗಾಡಿನಲ್ಲಿ ಹಸಿರು ಮೂಡಿದಂತೆ ನಿಶೆಯನಳಿಸಿ ಉಷೆಯು ಉದಿಸಿದಂತೆ ಸಂಘ ಜನಿಸಿತು ಬೇಗೆಯಿಂದ ಬೆಂದ ನೆಲಕೆ ಮುದದಿ ತಂಪನುಣಿಸಿತು || 1 || ನಾಡಸ್ವಾಭಿಮಾನವ ಪ್ರಶ್ನಿಸಿರಲು ದೈನ್ಯತೆ ಬಾಡಿಹೋದ ಮನಗಳ ಕಾಡುತಿರಲು ಶೂನ್ಯತೆ ಅರುಣನಂತೆ ತರುಣಜನಕೆ ತೋರಿ ಬಾಳ ಧನ್ಯತೆ ಭರತಭೂಮಿಗಭಯವಿತ್ತೆ ಸಾರಿ ಶೌರ್ಯ ಸಂಹಿತೆ || 2 || ವಿಸ್ಮೃತಿಯ ವಿಷವನು ಸ್ವಾರ್ಥದಾಮಿಷವನು ಭ್ರಷ್ಟತೆಯ ಕಸವನು […]
ಸಂಘಗಂಗೆಯ ಪಾನ ಇದು ಸಾಧಕಗೆ ವರದಾನ ಧ್ಯೇಯ ಮಾರ್ಗದಲಿ ದಾರಿ ತೋರಿಸುವ ದಿವ್ಯಧಾರೆ ಅಸಮಾನ || ಪ || ನಭದಂಥ ಉನ್ನತಿಯ ಧ್ಯೇಯ ಮೈವೆತ್ತ ಪೂಜ್ಯ ಮಹನೀಯ ವರಕೇಶವನ ಕನಸು ಆಗುತಿದೆ ನನಸು ಹೊಮ್ಮುತಿಹುದು ಜಯಗಾನ || 1 || ಯೋಗದಂಡ ವ್ಯಾಯಾಮ ಬಾಳಿಗಿದೆ ಹೊಸತು ಆಯಾಮ ಗೀತೆವಚನಗಳ ವೀರಚರಿತೆಗಳ ಸ್ನೇಹಸುಧೆಯ ಸವಿತಾಣ || 2 || ನಡೆನುಡಿಯಗೊಳಿಸುವೆವು ಶುದ್ಧ ಕಾಯವಿದು ಕಾಯಕಕೆ ಬದ್ಧ ಸ್ಪಷ್ಟ ಗುರಿಇಹುದು ದಿಟ್ಟನಿಲುವಿಹುದು ಇಹುದು ದೇಶದಭಿಮಾನ || 3 || ಬಲು […]
ವಂದಿಪೆನು ಈ ಭೂಮಿಗೆ ನಮನ ಭಾರತ ಮಾತೆಗೆ || ಪ || ಹರನ ಹೊತ್ತಿಹ ಹಿರಿಯ ಗಿರಿಯಿದು ಹಿಮದ ಹೂವಿನ ಹಂದರ ಮೂರುಸಾಗರ ಮಿಲನಗೊಂಡಿಹ ಮಹಿಮೆಯಾಂತಿಹ ಮಂದಿರ ತೊದಲುನುಡಿಗಳ ತಪ್ಪುತಿದ್ದುತ ತತ್ವತೋರಿದ ತಾಯಿಗೆ ಮಡಿಲ ಮಕ್ಕಳಿಗೆಲ್ಲ ಮಮತೆಯ ಮಧುವನುಣಿಸಿದ ಮಾತೆಗೆ || 1 || ತರಳರೆಲ್ಲರ ತಮವ ತೊಳೆಯುವ ತೀರ್ಥತೊರೆಗಳ ತಾಣವು ಉನ್ನತಿಯ ಉತ್ತುಂಗಕೇರಿದ ಉತ್ತಮರ ಉದ್ಯಾನವು ಸಪ್ತಸಾಗರ ಸುತ್ತಿಸುಳಿದಿಹ ಸಂಸ್ಕೃತಿಯ ಸಿರಿಸೌರಭ ಧರೆಗೆ ದಾರಿಯ ದೀಪದಂತಿಹ ದಿವ್ಯದರ್ಶನ ದುರ್ಲಭ || 2 || ಶಮನಗೊಳ್ಳದು ಶೌರ್ಯದಾರ್ಭಟ […]
ರಾಷ್ಟ್ರಭಕ್ತಿ ಅರಳುತಿಹುದು ಸ್ವಾಭಿಮಾನ ಕೆರಳುತಿಹುದು ಶತ್ರುಗಳೇ ಮೇರೆ ಮೀರಿ ಬಂದರೆಚ್ಚರ ! ನೀಡುವೆವು ಶತಕಗಳ ದಾಳಿಗುತ್ತರ || ಪ || ಒಡೆವ ನೀತಿ ಬಡಿವ ಭೀತಿಗೆಂದೂ ತಲೆಯ ಬಾಗೆವು ತಡೆದು ಅರಿಯ ಪಡೆಯ ಹಡೆಯ ಮೆಟ್ಟಿ ಮುಂದೆ ಸಾಗ್ವೆವು ನಡೆಯು ನಮದು ನೇರ, ನುಡಿಯು ಗಂಭೀರ || 1 || ನಮ್ಮ ಗಡಿಯ ಕಡಲ ತಡಿಯ ಗುಡಿಯ ನುಡಿಯ ರಕ್ಷಣೆ ಅದುವೆ ನಮ್ಮ ಬಾಳಗುರಿಯು ಇಲ್ಲ ಪರಾಕರ್ಷಣೆ ಹಿಂದು ಪರಮ ವೀರ ಅವನ ಬಲ ಅಪಾರ || […]