ಭವ್ಯ ಭಾರತದಲ್ಲಿ ಭವಿತವ್ಯಾ ಮಿನುಗುತಿದೆ ಭರವಸೆಯ ಹೊಂಗಿರಣ ಸೊಗವ ತಂದಿದೆ || ಪ || ನವ್ಯ ಸಾಧನೆ ಬೆಳಕು ಇತಿಹಾಸವ ನಿರ್ಮಿಸಿದೆ ಭುವಿಯ ಭಾಗ್ಯವಿದು ಎಂದು ಜಗವೇ ಮೆಚ್ಚಿದೆ || 1 || ಜಡತೆಯ ಕಿತತೊಗೆದು ಎಚ್ಚರಾಯಿತು ಈ ಜನತೆ ದಾಸ್ಯ ಭಾವವನೆಲ್ಲಾ ಕಿತ್ತು ಒಗೆದಿದೆ ವೀರ ಸಂತನ ಪಥದಿ ನಿಷ್ಠೆಯಲಿ ಸಾಗಿದೆ ತಾರತಮ್ಯವ ತೊರೆದು ಧ್ಯೇಯದಾ ಎಡೆಗೆ || 2 || ಪ್ರಗತಿಯ ಪಥದಲ್ಲಿಂದು ದಾಪುಗಾಲಿನ ಈ ನಡಿಗೆ ಸ್ವಾಭಿಮಾನವೆ ನಮಗೆ ವರವೇ ಆಗಿದೆ ಸ್ವಾರ್ಥಹಿತವ […]
ತೋಳೆತ್ತಿ ನಮಿಸುವೆ ಭಗವಾ ಗುಡಿಗೆ ಗುರಿಯಿದೆ ಸನ್ನಿಹಿತ ಅಡಿಗಡಿಗೆ || ಪ || ಹಿಮಗಿರಿ ತಪ್ಪಲ ಮಂಜಿನಲಿ ಸಾಗರ ತಡಿಯ ಮರಳಿನಲಿ ಮುಂಜಾನೆ ಮೂಡುವ ನಸುಕಿನಲಿ ಸಂಜೆಯ ಕೆಂಪಿನ ಮುಸುಕಿನಲಿ || ಹೋಯಾ, ಓಯಾ || ಸಂಘಸ್ಥಾನದ ಮಣ್ಣಿನ ಕಣದಲ್ಲಿ ಉಸಿರಾಡಿ ಹೊರಳಾಡಿ ಕರುಳಾಡಿ ಒಡನಾಡಿ ಬೆಳೆಸಿದ ಕಾರ್ಯದಲಿ || 1 || ಸಂಘರ್ಷ ಹಾದಿಯ ತುಳಿದವರು ಗೀತೆಯ ಸ್ಫೂರ್ತಿಗೆ ಬೆಳೆದವರು ಸೋಲಿನ ಇತಿಹಾಸ ತೊಳೆದವರು ಆಲಸ್ಯ ಕೆಡವಿ ಬೆಳೆದವರು || ಓಯಾ || ಹಿಂದುಸ್ಥಾನದಿ ಕಸುವೆಲ್ಲ […]
ಪ್ರಸಿದ್ಧಿಯ ಬಯಸದ ಕಾರ್ಯವು ನಮ್ಮದು ಬದ್ಧತೆ ಧ್ಯೇಯದ ಕಡೆಗೆ ಸತತ ಪರಿಶ್ರಮ ಸಾಧನೆಯೊಂದಿಗೆ ಶ್ರದ್ಧಾಭಕ್ತಿಯ ಜತೆಗೆ || ಪ || ಸಮಗ್ರ ಸಮಾಜದ ಐಕ್ಯವೆ ಲಕ್ಷ್ಯ ಸಂಘವೇ ಜೀವನಕಾರ್ಯ ನಯಸಾಧನೆ ಜತೆ ವಿನಯದ ಭೂಷಣ ಹನುಮನ ಭುಜಬಲ ಧೈರ್ಯ || 1 || ಕಾಣುವ ವಿವಿಧತೆಯೊಳಗಡೆ ಅಡಗಿದೆ ಕುಸಿಯದ ಐಕ್ಯದ ಬಂಧ ಅನುಶಾಸನ ಆತ್ಮೀಯತೆಗಳೇ ಬಲ ಬದುಕಿನ ರೀತಿಯೆ ಚೆಂದ || 2 || ಅವಿಚಲ ಸದೃಢ ಧ್ಯೇಯಾದರ್ಶಕೆ ಕೇಶವ ಮೂರ್ತ ಸ್ವರೂಪ ಬತ್ತಿಯ ತೆರದಲಿ ದೇಹವ […]
ಸಾಗರದ ಅಲೆಯಂತೆ ದಾಳಿಯದು ನಡೆಯುತ್ತಿದೆ ದೇಶವದು ನಿಂತಿಹುದು ಬಂಡೆಯಂತೆ ಹಿಂದುತ್ವವೀ ನೆಲದ ರಕ್ಷಣೆಗೆ ನಿಂತಿರಲು ಕ್ಷಾತ್ರ ತೇಜದ ವಂಶ ಸೋಲದಂತೆ || ಪ || ಸ್ವಾರ್ಥ ಲಾಭ ಮೋಹದಿಂದ ರಾಷ್ಟ್ರ ಮರೆತ ತರುಣರು ತ್ಯಾಗದೌತಣಕ್ಕೆ ಮಣಿದು ಸಂತರಾಗಿ ಬಂದರು ಭೇದ ಭಾವ ಕ್ರೋಧ ಮದವ ಬಿಡಿಸಿ ಶಾಂತಿ ಸಹನೆ ಜೊತೆಯಾಗಿ ಬೆಳಗುತಿರಲು ಅಮರರೆಲ್ಲ ಪುತ್ರರು || 1 || ರಾಷ್ಟ್ರಕಾಯ ಮೃತ್ಯುಂಜಯ ಪ್ರಗತಿ ಪತನಕಾಣದು ಧರ್ಮ ಪ್ರಾಣವಾಗಿ ನೆಲೆಸೆ ಸೋಲು ಗೆಲ್ಲಲಾರದು ದೇಶ ಭಕ್ತಿ ಶಕ್ತಿಯಾಗಿ ಪಂಕ್ತಿ-ಪಂಕ್ತಿ […]
ನಿನ್ನ ಜೀವನ ಧ್ಯೇಯ ಜೀವನ ನಿನ್ನ ದರ್ಶನ ಹಿಂದು ದರ್ಶನ.. ನಿನ್ನ ಮಾರ್ಗದಿ ನಡೆಸಿ ನಮ್ಮನು, ಮಾಧವನಾಗಿಸು.. || ಪ || ಕೋಟಿ ಸ್ವಭಾವವ ಒಂದೆಡೆ ಬೆಸೆಯುತ ನಿನ್ನಯ ಚಿಂತನೆ ಅತಿಶಯವು, ತರುಣ ಹೃದಯಗಳು ರಾಷ್ಟ್ರಕೆ ಮಿಡಿಯಲು ಋಷಿತಮ ಜೀವನ ಪ್ರೇರಣೆಯು… || 1 || ಜಾತಿ ಭೇದಗಳ ಮೇಲು ಕೀಳುಗಳ ನಾಡಿನೆಲ್ಲೆಡೆ ಸಂಘರ್ಷ, ಹಿಂದು ಭಾವವ ಜಾಗೃತಗೊಳಿಸಿದೆ ಕೇಶವ ನೀನು ಯುಗ ಪುರುಷ… || 2 || ಭವ್ಯ ಪರಂಪರೆ ಸದ್ಗುಣ ಶೀಲವೇ ರಾಷ್ಟ್ರ ವೈಭವಕೆ […]
ಯುವಕರೆಲ್ಲ ಬನ್ನಿರಿ ವೀರಗಾನ ಮೊಳಗುವಾ ಎಚ್ಚರಾಗಿ ಬನ್ನಿರಿ ಜನ್ಮಭೂಮಿ ಉಳಿಸುವಾ || ಪ || ವೇದಮಂತ್ರ ತುಂಬಿಬಂದ ರಾಷ್ಟ್ರವನ್ನು ಪಡೆಯುವಾ ನಾಡಿನ ಶಾಂತಿಗಾಗಿ ಸೇವೆಗೈದು ಬದುಕುವಾ ಸತ್ಯವಂತ ಹರಿಶ್ಚಂದ್ರ ಜನಿಸಿದ ಭೂಮಿಯಲಿ ಧ್ಯೇಯದಾ ದಾರಿಹಿಡಿದು ರಾಮರಾಜ್ಯ ಕಟ್ಟುವಾ || 1 || ಮರಳಿ ಜ್ಞಾನಪಡೆದು ಮುಂದೆ ವೀರರಾಗಿ ಸಾಗುವಾ ಹರಿದು ರಕ್ತ ತುಂಬಿಬರಲಿ ದೇಶಕಾಗಿ ಬದುಕುವಾ ಬಂಧುಭಾವದಿಂದ ಮೆರೆದು ತಾಯಿನಾಡ ಉಳಿಸುವಾ ಹಿಂದುಕುಲದ ಯುಗಯುಗದ ನೆನಪಿಗಾಗಿ ಬಾಳುವಾ|| 2 || ಹೆಮ್ಮೆಯಿಂದ ಎದೆಯನೆತ್ತಿ ಹಿಂದು ಎಂದು ನಡೆಯುವಾ […]
ಕೋಟಿ ಹೃದಯ ಧಮನಿಗಳಲಿ ಹರಿಯಲಿ ಬಿಸಿನೆತ್ತರು ರಾಷ್ಟ್ರರಕ್ಷೆಗಾಗಿ ದೀಕ್ಷೆ ತೊಟ್ಟು ದುಡಿಯಿರೆಲ್ಲರು ಕೋಟಿ ಹೃದಯ – ‘ಭಾವ-ರಾಗ’ ಮೇಳೈಸಲಿ ತಾಳಕೆ ಹನಿಗೂಡಿಸಿ, ದನಿಗೂಡಿಸಿ ಒಕ್ಕೊರಲಿನ ಗಾನಕೆ | ಅಸುರೆದೆಗಳು ಬಿರಿಯಲಿ | ಸುರಭಾವಗಳರಳಲಿ | ಎದ್ದೇಳಿರಿ, ಸಜ್ಜಾಗಿರಿ ! ಧರ್ಮಕೆ ಗೆಲುವಾಗಲಿ | ನವಿರೇಳಲಿ, ನಲಿವಾಗಲಿ ಭರತಾಂಬೆಯ ಉಸಿರಲಿ || ಋಷಿ-ಮಹರ್ಷಿ-ಸಾಧು-ಸಂತರುದಿಸಿ ಬಾಳಲಿಲ್ಲವೆ ? ಜ್ಞಾನ-ಭಕ್ತಿ-ಧರ್ಮ-ಕರ್ಮದೀಪ್ತಿ ಬೆಳಗಲಿಲ್ಲವೆ ? ಕಾವ್ಯ-ಗೀತ-ನೃತ್ಯಕಲೆಯ ತೈಲವೆರೆದರಲ್ಲವೆ ? ‘ವಿಶ್ವಭಾರತಿ’ಯನು ಬೆಳಗೆ ದೀಪ್ತವಾಯ್ತು ವಿಶ್ವವೆ | ಉಜ್ವಲ ಗತಸಿರಿಯಿದೆ | ಶೌರ್ಯದ ಸ್ಮೃತಿಯೆಮಗಿದೆ […]
ಮೊರೆಯಲಿ ಭೋರ್ಗರೆಯಲಿ ಹಿಂದುಶಕ್ತಿಯ ಸಾಗರ ನಡೆಯಲಿ ಮುನ್ನಡೆಯಲಿ ಯುವಸಮೂಹದ ಆಗರ || ಪ || ಕಡಿದು ಕಳಚುತ ಸುತ್ತ ಬಿಗಿದಿಹ ದುಷ್ಟ ದುರುಳರ ಸೇಡನು ಬಿಡದೆ ಪೊರೆವುತ ಹೊತ್ತು ಸಲಹುವ ಸ್ವರ್ಗದಾ ಸಿರಿಬೀಡನು ಕ್ಷಾತ್ರಭಾವದಿ ವೀರಸುಧೆಯನು ಕುಡಿದು ಜಯಿಸುವ ನಾಡನು || 1 || ಕರುಳಬಳ್ಳಿಯ ತುಳಿವುದೇತಕೆ ತರತಮದ ಪರಿ ಏತಕೆ ಸರಿಸಮಾನರು ಧ್ಯೇಯಪಥದಲಿ ಸುಡಲಿ ಅಂಜಿಕೆ ನಾಚಿಕೆ ಒಂದೆ ತಾಯಿಯ ಮಕ್ಕಳೆಲ್ಲರು ಒಂದುಗೂಡುತ ರಾಷ್ಟ್ರಕೆ || 2 || ವೀರಪುರುಷರ ವಿಜಯಗಾಥೆಯ ಕ್ರಾಂತಿಗೀತೆಯ ಹಾಡುತ ಯುವಸಮಾಜಕೆ […]
ಒಂದುಗೂಡಿ ಬೆರೆತುಕೊಂಡು ಬಂಧುಭಾವ ಬೆಳೆಸಿಕೊಂಡು ಒಕ್ಕೊರಳಲಿ ಕೂಗುವಾ… ತಾಯಿಗೆ ಜಯಘೋಷವ ತಾಯಿ ಭಾರತಿ… ನಿನಗೆ ಆರತಿ || ಪ || ವಿಶ್ವಕೆ ತಂಪೆಲರನಿತ್ತ ಸುಂದರ ವಟವೃಕ್ಷವು ಜ್ಞಾನದ ಸುಪ್ರಭೆಯನಿತ್ತು ಪ್ರಜ್ವಲಿಸುವ ಜ್ಯೋತಿಯು ಸಂಸ್ಕಾರದ ಸುಧೆಯ ಧಾರೆ ಹರಿವ ಮಹಾಸಲಿಲವು ವಿಶ್ವ ಪ್ರೇಮದಪ್ಪುಗೆಯಲಿ ಮಮತೆಯೀವ ನಾಕವು || 1 || ಬಾನೆತ್ತರವೇರಲಿ ಈ ಮಣ್ಣಿನ ಕೀರ್ತಿಯು ಭೂಮಂಡಲದಾಚೆಗೂ ಹಬ್ಬಲಿ ಜಯಗೀತೆಯು ಜನರೆದೆಯಲಿ ಅನುರಣಿಸಲಿ ದೇಶಭಕ್ತಿ ಗಾನವು ಮನದಲಿ ಮನೆ ಮಾಡಲಿ ಸ್ವಾಭಿಮಾನ ಮಂತ್ರವು ತಾಯಿ ಭಾರತಿ… ನಿನಗೆ ಆರತಿ […]
ಕರುಣಾಳು ದೇವನವ ನರಜನುಮ ಕೊಟ್ಟಿರಲು ಪರಹಿತವ ಬಯಸುತ್ತಾ ಮನುಜರಾಗೋಣ || ಪ || ಪರಮಾತ್ಮ ಸೃಷ್ಟಿಸಿಹ ಎಲ್ಲಾ ಜೀವಿಗಳನ್ನು ಎಲ್ಲೆಲ್ಲೂ ಎಲ್ಲರೊಳು ಆ ದೇವನಿರಲು ದೂರ ಸರಿಯುವ ಕ್ರೌರ್ಯ ಸರಿಯೇನು ಹೇಳಿ ? ತರತಮದ ಭಾವವಿದು ಬಲು ಕೆಟ್ಟ ಚಾಳಿ || 1 || ಬೆರಳತುದಿ ಹೊರಳಿಸಿಯೇ ವಿಶ್ವವನೇ ಕಂಡರೂ ಕೀಳುಭಾವನೆ ಹುಳುಕು ಬಿಡಲಾರವೇಕೆ ? ಅಂತರ್ಜಾಲವನರಿತು ಅಂತರಾಳವೆ ಬರಿದು ನೊಂದ ಮನಗಳ ಅಳಲ ತಿಳಿಯವೇಕೆ ? || 2 || ಕೆಟ್ಟ ಕಟ್ಟಳೆಯೆಲ್ಲಾ ಸುಟ್ಟು ಹೋಗಲಿ […]