ನಿನ್ನ ಜೀವನ ಧ್ಯೇಯ ಜೀವನ

ನಿನ್ನ ಜೀವನ ಧ್ಯೇಯ ಜೀವನ
ನಿನ್ನ ದರ್ಶನ ಹಿಂದು ದರ್ಶನ..
ನಿನ್ನ ಮಾರ್ಗದಿ ನಡೆಸಿ ನಮ್ಮನು,
ಮಾಧವನಾಗಿಸು.. || ಪ ||

ಕೋಟಿ ಸ್ವಭಾವವ ಒಂದೆಡೆ ಬೆಸೆಯುತ
ನಿನ್ನಯ ಚಿಂತನೆ ಅತಿಶಯವು,
ತರುಣ ಹೃದಯಗಳು ರಾಷ್ಟ್ರಕೆ ಮಿಡಿಯಲು
ಋಷಿತಮ ಜೀವನ ಪ್ರೇರಣೆಯು… || 1 ||

ಜಾತಿ ಭೇದಗಳ ಮೇಲು ಕೀಳುಗಳ
ನಾಡಿನೆಲ್ಲೆಡೆ ಸಂಘರ್ಷ,
ಹಿಂದು ಭಾವವ ಜಾಗೃತಗೊಳಿಸಿದೆ
ಕೇಶವ ನೀನು ಯುಗ ಪುರುಷ… || 2 ||

ಭವ್ಯ ಪರಂಪರೆ ಸದ್ಗುಣ ಶೀಲವೇ
ರಾಷ್ಟ್ರ ವೈಭವಕೆ ಆಧಾರ,
ಶುದ್ಧ ಸಾತ್ವಿಕ ಪ್ರೇಮದಿಂದಲೇ
ಸಂಘ ಧ್ಯೇಯದ ಸಾಕಾರ… || 3 ||

Leave a Reply

Your email address will not be published. Required fields are marked *

*

code