ಜಯ ಹೇ ಜಗತೀ ಕೇ ಪ್ರಥಮ ರಾಷ್ಟ್ರ ॥ ಪ ॥ ಓ ಚಿರ ನವೀನ ಓ ಪುರಾಚೀನ ಉಪಮಾ- ವಿಹೀನ ಜಯ ಹೋ ಜಯ ಹೋ ತೇರೆ ಹೀ ಸಮ್ಮುಖ ಸಕಲ ಸೃಷ್ಟಿ ಶಿಶು-ಸೀ ಖೇಲಿ ಫಿರ ಕ್ಯೋಂ ಭಯ ಹೋ ಜಯ ಜಗತ-ಮೌಲಿ-ಮಂಡನ ಜಯ ಜಯ ಪಿತೃತ್ವ ಭಾವ ಕೇ ಪರಮ ರಾಷ್ಟ್ರ ॥ 1 ॥ ತೇರೇ ಹೀ ಪ್ರಾಣೊ ಮೇ ಪಹಲೇ ಕರುಣಾ ಕಾ ಕಲ ಕಲ ಸ್ರೋತ ಬಹಾ ತೇರೇ […]
ಮತ್ತೆ ಮೂಡುತಿದೆ ಕತ್ತಲೆದೆಯಿಂದ ಪೌರುಷಮಯ ಇತಿಹಾಸ ಸತ್ತ ಬೂದಿಯಲು ಕಿಡಿಗಳ ತೆರೆಯುವ ಅನಂತತೆಯ ಚಿರಸಾಹಸ || ಪ || ಮನೆಗೆ ಕವಿದ ಇರುಳನು ತೊಳೆದು ಹಗಲ ಹಚ್ಚಿದುದೆ ಸಾಲದೆ ನೆರೆಜನ ಮೊರೆಯಿಡೆ ಕಾದಿ ಗೆಲಿಸಿದೆವು ಊರುಗೋಲಾಗಿ ಬಳ್ಳಿಗೆ || 1 || ಎಂದಿನಿಂದಲೋ ಹರಿದು ಬಂದಿರುವ ಜೀವನ ಧರ್ಮದ ಶ್ರುತಿಗೆ ಇಂದಿನ ಸ್ವರವನ್ನು ಹೊಂದಿಸಿ ಹಾಡುವ ಆಸೆ ಫಲಿಸುತಿದೆ ಬಾಳಿಗೆ || 2 || ಕಂಠ ಕಂಠದಲು ದನಿಗೊಳ್ಳುತ್ತಿದೆ ಶ್ರೀ ಸಾಮಾನ್ಯನ ಜಯಕಾರ ಮೂಲೆ ಮೂಲೆಯಲು ಮೈ […]
ರಕ್ಷೆಯನು ಕಟ್ಟುತ್ತ ಕರಪಿಡಿದು ನಡೆಯೋಣ ಒಂದಾಗಿ ನಿಲ್ಲೋಣ ರಾಷ್ಟ್ರರಕ್ಷಣೆಗಿಂದು || ಪ || ಸ್ನೇಹದ ಕಂಪನ್ನು ಪಸರಿಸುವ ರಕ್ಷೆ ನೋವ ಮರೆಸುತ ಧೈರ್ಯ ತುಂಬುವಾ ರಕ್ಷೆ ಒಡೆದ ಮನಸುಗಳ ಒಂದುಗೂಡಿಸೆ ರಕ್ಷೆ ಸಂಬಂಧಗಳನುಬಂಧ ಬೆಸೆಯುವುದೀ ರಕ್ಷೆ || 1 || ಇತಿಹಾಸ ನೆನಪಿಸಲು ಕಾಲನೇ ರಕ್ಷೆ ಗುರಿಯೆಡೆಗೆ ನಡೆಯಲು ನಕ್ಷೆಯೇ ರಕ್ಷೆ ಮೇಲುಕೀಳುಗಳ ಅಳಿಸೆ ಆಯುಧವು ರಕ್ಷೆ ಎಲ್ಲರೂ ಒಂದೆಂಬ ಭಾವವೀ ರಕ್ಷೆ || 2 || ತಾಯ ರಕ್ಷಣೆಗೆ ಸಿದ್ಧಕಂಕಣವು ರಕ್ಷೆ ರಾಷ್ಟ್ರರಕ್ಷಣೆಯ ಮನವಕೊದುವಿದಿದೋ ರಕ್ಷೆ […]
ಸಿಂಧು ಸಂಸ್ಕೃತಿಯಲ್ಲಿ ಸಿರಿ ಪರಂಪರೆಯಲ್ಲಿ ಹಿಂದು ಹೆಸರಲಿ ನಾವು ಬಂದೆವಿಳೆಗೆ ಸಂದ ಕಾಲವನೆಳೆದು ಇಂದು ಯಶ ಸಾಧಿಸಲು ಬಂದಿಹುದು ಶುಭ ಸಮಯ ನಮ್ಮ ಬಳಿಗೆ || ಪ || ಒಡೆದು ಶಂಖಧ್ವನಿಯ ಗುಡುಗು ನೂರ್ಮಡಿಗೊಂಡು ಸಿಡಿಸಿಡಿದು ಸೀಳಾಗಿ ಸ್ವೀಕರಿಪ ಮೊದಲೇ ಬಡವ ಅಂತ್ಯಜರೆಂಬ ತಡೆಗೋಡೆಗಳು ಬೆಳೆದು ದುಡುಕಿ ವಿಷನಾಗಗಳು ಫೂತ್ಕರಿಪ ಮೊದಲೇ ಹುಡುಕಿ ಓರೋರ್‍ವರನು ನಿಜವಿಕಾಸಕೆ ತರಲು || 1 || ವಿಸ್ಮೃತಿಯ ಕರಿಮುಗಿಲು ಪ್ರಗತಿಪಥವನು ಕವಿದು ಪಶ್ಚಿಮಕೆ ಸೋತವರ ಅನುಸರಿಸದೇ ಆತ್ಮರತಿಯಲಿ ಮುಳುಗಿ ಆರ್ತರನು ಕಡೆಗಣಿಸಿ […]
ಓಂ ಮಂಗಲ ಮಸ್ತು ಭಾರತ ವಿಷಯೇ | ಭವತು ಸುಖಹಿತಮ್ ಲೋಕಾನಾಮ್ | ನಿರ್ಭಯ ಮಸ್ತು ಸಜ್ಜನಗಣ ಚಿತ್ತಮ್ | ಈಶಭಗವದ್ ಧ್ವಜ ಸತತಮ್ ಲೋಕೇ | ಯಾಂತು ದೇವ ಗಣಾಸರ್ವೇ | ಪೂಜಾ ಮಾದಾಯ ಪಾರ್ಥೀವಿಮ್ | ಇಷ್ಟಕಾಮಸುಸಿದ್ಧರ್ಥಮ್ | ಪುನರಾಗಮನಾ ಯ ಚ | || ಓಂ ||
ಕಿಂ ಸತ್ಯಮ್ ಕಿಂ ನಿತ್ಯಮ್ ಕಿಂ ಮಮ ಧ್ಯೇಯಮ್ ಮೋಕ್ಷಃ ಸತ್ಯ ಸಾ ನಿತ್ಯ ಸಾ ತ್ವಂ ಪ್ರತಿಗಚ್ಛೇಯಮ್ ||
ಹಿಂದು ಸಾಗರವೆ ದೆಸೆಯ ಬದಲಿಸಿದೆ ಏನಿದೆಂಥ ಮೋಡಿ ಉಕ್ಕಿ ಮೊರೆಯುತಿವೆ ಕೋಟಿ ಅಲೆಗಳು ತಾಯಿ ಸ್ತುತಿಯ ಪಾಡಿ ವೀರ ಸಂತತಿಯ ಆವೇಶ ತನುಗಳಲಿ ಪುಡಿ ಪುಡಿಯು ಎಲ್ಲಾ ಬೇಡಿ ಬಿಂದು ಬಿಂದುವೂ ಇಂದು ಒಂದೆನುವ ಒಮ್ಮತವೆ ಜೀವನಾಡಿ || ಪ || ಇರುಳ ಸರಿಸುತಾ ಬಂದ ಬೆಳಗಿಂದು ಒಸಗೆ ತಂದಿಹಳು ಇಳೆಗೆ ವಿಶ್ವ ಮುಕುಟದ ಸರದಿ ಮೀಸಲು ತಾಯಿ ಭಾರತಿಯ ಶಿರಕೆ ಜಡತೆ ಝಾಡಿಸಿ ಛಲದಿಂದ ದುಡಿಯುವ ದಿಟ್ಟ ಹೃದಯಗಳ ಹರಕೆ ದುರುಳರೆದೆಗಳ ಸೀಳಿ ಮಾತೆಗೆ ಜಯಮಾಲೆ […]
ಬಡತನದ ಬೇಗೆಯಲಿ ಬೇಯುತಿಹ ಬಂಧುಗಳ ಬಾಳಿನಲಿ ಬೆಳದಿಂಗಳೆನಿಸಬೇಕು ಭಾರತೀಯರ ಭಾವ ಭಿನ್ನತೆಯ ಬದಿಸರಿಸಿ ಬಂಧು ಭಾವದೊಳವರ ಬೆಸೆಯಬೇಕು || ಪ || ಬವಣೆ,ಬೇಗುದಿಯಳಿಸಿ, ಬೇನೆ, ಬೇಸರವಳಿಸಿ ಬಧಿರತನದುರುಳಿಂದ ಬೇರ್ಪಡಿಸಬೇಕು ಬಡಿವಾರ ಬದಿಗಿರಿಸಿ ಬಂಧುಗಳ ಬರಸಳೆದು ಬಿಗಿದಪ್ಪಿ ಭಾವಗಳ ಬೆಸೆಯಬೇಕು || 1 || ಬೆಳಕಿನೆಡೆ ಬರಮಾಡಿ ಬಲದೊಲವನೀಯುತ್ತ ಭರವಸೆಯ ಬೀಜವನು ಬಿತ್ತಬೇಕು ಬಡವ ಬಲ್ಲಿದರೆಂಬ ಭೇದ ಬದನಿಕೆಯಳಿಸಿ ಭಾರತದ ಬೇರುಗಳ ಬೆಳೆಸಬೇಕು || 2 || ಬವರದಲಿ ಬಲಿದಾನವಾಂತವರ ಬಯಕೆಯೊಲು ಭವ್ಯ ಭಾರತವನ್ನು ಬಲಿಯಬೇಕು ಭೂಮಾತೆಯಣುಗರಲಿ ಭೂಮಿ […]
ಉರಿಸೋ ಧ್ಯೇಯದೀಪ, ಜನಮನದ ಆಳದಲ್ಲಿ ಹರಿಸೋ ಅಮೃತಧಾರಾ, ವಿಷಮಯ ಪಾತಾಳದಲ್ಲಿ || ಪ || ದೀನ ದಲಿತ ಜನರ ಜೊತೆಗೂಡಿ ಸಾಗು ಮುಂದೆ ಒಂದೇ ತಾಯಿ ನೆಲವು ನಮ್ಮೆಲ್ಲ ಗುರಿಯು ಒಂದೆ ತೆರೆಸೋ ಹೃದಯದ್ವಾರ ವಿಭ್ರಾಂತ ಜನಗಳಲ್ಲಿ ಹರಿಸೋ ಸ್ನೇಹಪೂರ ಭ್ರಮೆಯಾಂತ ಮನಗಳಲ್ಲಿ || 1 || ಶಿಲೆಯು ಕಲೆಯಧರಿಸಿ ಇತಿಹಾಸ ಒರೆಯುತಿಹುದು ಹಿಂದೂ ಜನತೆಯಿಂದು ನಾಡನ್ನೆ ಮರೆಯುತಿಹುದು ಮೆರೆಸೋ ರಾಷ್ಟ್ರಧ್ವಜವ ಉನ್ನತಿಯ ಬಾನಿನಲ್ಲಿ ಸ್ಮರಿಸೋ ನಾಡ ಹಿರಿಮೆ ಅನುದಿನವೂ ಬಾಳಿನಲ್ಲಿ || 2 || ಬಲವ […]