ಬೆಳಗಲೀ ಬೆಳಗಲೀ ಸನಾತನಾರ್ಯಭಾರತ ಕಳೆಯಲೀ ಕಳೆಯಲೀ ಕವಿದ ಕತ್ತಲೆಯ ಮೆರೆತ || ಪ || ಬಾಳಿನಲ್ಲಿ ಬೆಳಕು ಕಂಡು ಬಾಳಿದವರ ಭಾರತ ತೋಳಿನಲ್ಲಿ ಕ್ಷಾತ್ರತೇಜ ತುಂಬಿದವರ ಭಾರತ ಕೇಳಿದವರ ಜ್ಞಾನತೃಷೆಗೆ ಅಮೃತವಿತ್ತ ಭಾರತ ಮೌಳಿಯಲ್ಲಿ ಚಂದ್ರಕಲೆಯನಾಂತ ಶಿವನ ಭಾರತ || 1 || ಬ್ರಹ್ಮಲೋಕದಿಂದ ಬಂದ ಗಂಗೆ ಹರಿದ ಭಾರತ ಬ್ರಹ್ಮಭಾವ ತುಂಬಿ ನಿಂತ ಸದ್ಗುರುಗಳ ಭಾರತ ಧರ್ಮದಿಂದ ರಾಜ್ಯವಾಳ್ದ ರಾಮ ಮೆರೆದ ಭಾರತ ಧರ್ಮವನ್ನು ಎತ್ತಿ ಹಿಡಿದ ಕೃಷ್ಣ ಬೆಳೆದ ಭಾರತ || 2 || […]
ನವ ಭಾರತ ಶಿಲ್ಪಿಗಳಾಗೋಣ ಹೊಸ ಬಾಳಿನ ಭಾಗ್ಯವ ಬರೆಯೋಣ || ಪ || ಗಂಗೆಯ ತಂದ ಭಗೀರಥನಂತೆ ವಿಷವನು ಉಂಡ ನಂಜುಂಡನಂತೆ ತಪವನು ಗೈದು ವಿಷವನ್ನು ಕುಡಿದು ಸಮಾಜ ದೇವಗೆ ಪ್ರಾಣವ ಎರೆದು || 1 || ಕಾಣುವ ಅರಿಗಳ ಅಟ್ಟುತ ಯೋಧರು ಕಾಣದ ವೈರಿಯ ಮೆಟ್ಟುತ ವೈದ್ಯರು ಕಾಯಕ ಯೋಗಿಯ ತರದಲಿ ರೈತರು ತಾಯಿಯ ಕಷ್ಟವ ತೊಳೆಯುತಲಿಹರು. || 2 || ನವ ಚೈತನ್ಯದ ನವ ಕುಸುಮಗಳು ಕಾಣುತ ಹೊರಟಿವೆ ನವ ಕನಸುಗಳು ಭಾರತ ಮಾತೆಯು […]
ಅವತರಿಸು ಶ್ರೀರಾಮ ಈ ಭರತ ಭುವಿಗೆ| ಉದ್ಧರಿಸಲೀ ಜಗವ ಬಾರಯ್ಯ ಧರೆಗೆ| ಆಗಮಿಸು ಓಗೊಡುತ ಭಾರತದ ಕರೆಗೆ| ಸ್ಪಂದಿಸುತ ಶತಕೋಟಿ ಭಕ್ತರಾ ಮೊರೆಗೆ || ಪ || ಶ್ರೀರಾಮ ಜಯರಾಮ ಕೋದಂಡರಾಮ| ಶ್ರೀರಾಮ ಜಯರಾಮ ಪಟ್ಟಾಭಿರಾಮ|| ತವ ಜನ್ಮಭೂಮಿಯನು ಮುಕ್ತಗೊಳಿಸುವ ಕಾರ್ಯ| ಶತಕಗಳ ಹೋರಾಟ ಆಯಿತನಿವಾರ್ಯ| ಮರೆಯಲಾಪುದೆ ಕಾರಸೇವಕರ ಕೈಂಕರ್ಯ ಸಫಲವಾಯಿತು ಸಂತ ಭೀಷ್ಮ ಸಾರಥ್ಯ || 1 || ಬೆವರು ನೆತ್ತರ ಹರಿಸಿ ಪ್ರಾಣವನೆ ಪಣವಿಟ್ಟು| ಅಸುನೀಗಿದಗ್ರಜರೇ ಎಮಗೆ ಮೇಲ್ಪಂಕ್ತಿ| ದುಷ್ಟಕುಲ ಮರ್ದನಕೆ ರಾಷ್ಟ್ರಸಂರಕ್ಷಣೆಗೆ| ಕೋದಂಡಧರ […]
ಆತ್ಮನಿರ್ಭರ ಭಾರತ ಸ್ವಾಭಿಮಾನವ ಸಾರುತ ಜ್ಞಾನ ಭಿಕ್ಷೆಯ ಜಗಕೆ ನೀಡುತ ನಗುತಲಿರಲಿ ಸಂತತ || ಪ || ಎಡರು ತೊಡರು ಗಳಿಹುದು ಬಹಳ ಸುಲಭವಲ್ಲವು ಆತ್ಮನಿರ್ಭರ ದಿಟ್ಟ ಆತ್ಮ ಬಲದಿ ನಡೆಯುತ ಸಾರುವ ನವ ಕ್ರಾಂತಿ ಸಮರ ಬನ್ನಿರೆಲ್ಲರು ಒಂದಾಗುವ ಗೆಲ್ಲುವ ಈ ಶಾಂತ ಸಮರವ ಸ್ವಾರ್ಥ ಮರೆತು ರಾಷ್ಟ್ರಕಾಗಿಯೆ ದಿಟದಿ ಜೀವನ ಸವೆಸುವ || 1 || ನಮ್ಮ ಏಳ್ಗೆಗೆ ನಾವೇ ಶಿಲ್ಪಿಯು ಎಂದು ತಿಳಿದು ನಡೆಯುವ ಸತ್ವ ಶಕ್ತಿ ಯುಕ್ತಿಯಿಂದಲಿ ರಾಷ್ಟ್ರದ ಸೇವೆಯ ಮಾಡುವ […]
ಭರತ ಮಾತೆ ಭವ್ಯ ಮಂದಿರ ದ್ವಾರ ಬಳಿ ನಾ ನಿಂತಿಹೆ ಉದಿಸಿದ ನೇಸರನ ಜೊತೆಯಲಿ ಮಾತೃ ಚರಣಕೆ ನಮಿಸುವೆ || ಪ || ವಿಶ್ವದೆಲ್ಲೆಡೆ ಶಾಂತಿ ನೆಲೆಸಿದೆ ತಾಯಿ ಮಕ್ಕಳ ನಡುವಲಿ ಹಿಂದು ಸಂಸ್ಕೃತಿ ಬೆಳಕ ಹರಡಿದೆ ಜ್ಞಾನವನು ಪ್ರಜ್ವಲಿಸುತಲಿ || 1 || ಗೋವಿನ ಗುಣಗಾನ ಮಾಡುತ ಗ್ರಾಮ ನೃತ್ಯವು ನಡೆದಿದೆ ಸಮರಸತೆಯ ಸಹಜ ಭಾವವು ಎಲ್ಲ ಮನದಲಿ ನೆಲೆಸಿದೆ || 2 || ಭೇದಭಾವದ ಖಡ್ಗ ಮುರಿದಿದೆ ಒಂದೆ ಭಾವವು ಧ್ವನಿಸಿದೆ ಸೇವೆಯ ತ್ಯಾಗಜೀವನ […]
ವಂದನಂ ಸಮರ್ಪಯಾಮಿ ಭಾರತ ಜನನೀ ತವ ಚರಣ ಜನ ಶರಣೇ ಲೋಕ ಪಾವನೀ || ಪ || ಕಲರವೇಣ ವಿಹಗಮಂಡಲಂ ಪ್ರಕಾಶತೇ ಶಾಂತಿ ಸಖಂ ಸರ್ವಸುಖಂ ಜಗತಿ ರಾಜತೇ ವರಮುನೀಂದ್ರ ದೇವಸಂಘ ಶುಭನಿಕೇತನಂ ವಪುರಿವತವ ಮಧುಕಲಯತಿ ಸಾಧುಚೇತನಮ್ || 1 || ನದನದಿ ಸಮೇತ ರಮ್ಯ ಬಂಧುರಾದರಾ ಚಾರುವಿದಾ ಗಾನ ಸುಧಾ ಮಧುರ ಸುಸ್ವರ ಸ್ಫುರದನೇಕ ವಿಧಿವಿಧಾನ ರುಚಿರವಾಹಿನೀ ಹಿತಗುಣಮಪಿ ತವತನುರಭಿಮಾನ ದಾಯಿನೀ || 2 || ಹೃದಯ ಸುಭಗ ಲಲಿತಲಾಸ್ಯ ಮೋದ ಸಂಯುತಾ ವಿದ್ಯರಮಾ ಭವ್ಯಹಿಮಾಲಯ […]
ಅಖಂಡ ಹಿಂದು ಭಾರತ ಸಾಧನೆಗೊಂದುಗೂಡಿ ಬನ್ನಿ ಹೆಬ್ಬಯಕೆಯ ಸಾಧಿಸುವ ಹಾದಿಯಲಿ ಎಲ್ಲರೊಂದೆ ಎನ್ನಿ || ಪ || ಜಗತ್ತಿನೆಲ್ಲೆಡೆ ಸಾಕ್ಷಿಯಾಗಲಿದೆ ಭರತನಾಳಿದ ದೇಶ ಸಾಸಿರ ದಾಳಿಗೆ ಉತ್ತರವಿತ್ತ ವೀರಧೀರ ಸಂಘರ್ಷ ಹಿನ್ನಡೆಯಾಗಿದೆ ಸತ್ತಿಲ್ಲ ಮನೆ ಮನದೊಳಡಗಿದೆ ಹಿಂದುತ್ವ ಭೂಮಿ ಎಲ್ಲೆಡೆ ಪಾಲಿಸಬೇಕಿದೆ ಭಾರತೀಯ ಸತ್ವ ಮಾನವತೆಯ ತತ್ವ || 1 || ಸೋಲಿನ ಶೂಲಕೆ ಸಿಲುಕಿ ನರಳುವ ಹೇಡಿ ಜನಾಂಗವು ನಾವಲ್ಲ ಮೃತ್ಯುವಿನೆದೆಗೆ ಅಂತ್ಯ ಸಾರುವ ಧೀರ ಹೃದಯಗಳೇ ನಾವೆಲ್ಲ ಎಮ್ಮ ಪೂರ್ವಜರು ಕೊಡಲಿ ಎತ್ತಿದರೆ ತಲೆಬಾಗಿತ್ತು […]
ಜನ ಜಾಗೃತ ನವ ಭಾರತ ಮಹೋದಯಂ ಈ ಕನುಲತೋನೇ ಕಾಂಚುದಾಂ ಈ ಜೀವತಮುನ ಸಾಧಿಂಚುದಾಂ || ಪ || ಪ್ರತಿ ಹೃದಿಲೋ ದೇಶಭಕ್ತಿ ಮೋಸುಲೆತ್ತ ನರನರಾನ ನವ ಚೇತನ ವೆಲ್ಲಿ ವಿರಿಯ ಸಮತಾ ಭಾವನ ಪೆಂಚಿ ಪ್ರತಿ ಹೃದಿಲೋ ಮಮತ ನಿಂಪಿ ಜಾತಿನಿ ಸೇವಿಂಚುದಾಂ ಮನ ಭಾರತಿನೇ ಪೂಜಿಂಚುದಾಂ || 1 || ಮನ ಪೂರ್ವಲ ಮಹನೀಯುಲ ಸ್ಮರಿಯಿಂಚಿ ಮನ ಸಂಸ್ಕೃತಿ ಮಹೋನ್ನತಿನ ಗುರ್ತೆರಿಗಿ ಪರಿಹರಮು ಶ್ರಮಿಯಿಂಚಿ ಜಗತಿನ ಶಿರಮೆತ್ತಿ ನಿಲಚಿ ಜಾತಿನಿ ಸೇವಿಂಚುದಾಂ ಮನ ಭಾರತಿನೇ ಪೂಜಿಂಚುದಾಂ || 2 […]
ಭಾರತ ವರ್ಷದ ಭವ್ಯ ನವೋದಯ ಬಯಸಿದೆ ಶಕ್ತಿಯ ಸಂಗಮವ ದಾರಿಯ ತೋರಿದ ಧೀರ ಪರಂಪರೆ ಜಡತೆಯ ನೀಗಿದ ಜಂಗಮವ || ಪ || ಶ್ರದ್ಧೆಯ ಬದಲಿಪ ಬುದ್ಧಿ ಭೇದಗಳ ಸದ್ದಿಲ್ಲದ ಹುನ್ನಾರವಿದೆ ಇದ್ದುದನೆಲ್ಲವ ಅಲ್ಲಗಳೆವ ಹಸಿ ಸಿದ್ಧಾಂತದ ಸಂಘರ್ಷವಿದೆ || 1 || ಗಡಿಗಳ ಗುಡಿಗಳ ಒಡೆವಾಯುಧಗಳ ಮುರಿದಿಕ್ಕುವ ಛಲ ಮೂಡುತಿದೆ ಕಡಲಿನ ತಡಿ ಹಿಮಶಿಖರದ ನಡುವಿನ ಧರೆಯೊಡೆತನ ದೃಢವಾಗುತಿದೆ || 2 || ಸಾವಿರ ಕೈಗಳು ಒಗ್ಗೂಡಿಹ ಬಲ ಭಾವೈಕ್ಯದ ನೆಲೆಯಾಗಲಿದೆ […]
ವಿರಸವ ಮರೆತು ಸರಸದಿ ಬೆರೆತು ಅಭಿನವ ಭಾರತ ಕಟ್ಟೋಣ | ತರತಮವಿಲ್ಲದ ಸಮರಸ ಭಾವದಿ ಸ್ವರ್ಗವನಿಲ್ಲೆ ರಚಿಸೋಣ || || ಪ || ಮೇಲುಕೀಳುಗಳ ಕಿತ್ತೊಗೆದು ಸರ್ವಸಮಾನತೆ ಸಾಧಿಸುವ | ಏಳುಬೀಳುಗಳ ಹಾದಿಯಲಿ ಏಳುಬೀಳುಗಳ ಹಾದಿಯಲಿ || || 1 || ಎದೆಗುಂದದೆ ನಾವ್ ಮುನ್ನಡೆವ ಮಾನವ ನಿರ್ಮಿತ ಭೇದಗಳು ಧರ್ಮದ ಅನುಮತಿ ಅದಕಿಲ್ಲ | ನಾಡಿನ ನೈಜ ಸುಧಾರಣೆಗೆ ಅನ್ಯರ ಆಶ್ರಯ ಬೇಕಿಲ್ಲ || || 2 || ಜಾತೀಯತೆಯನು ಬದಿಗಿರಿಸಿ ರಾಷ್ಟ್ರೀಯತೆಯನು ಬಲಪಡಿಸಿ ಹಿಂದುತ್ವದ ಹೊಂಬೆಳಕಿನಲಿ […]