ಅಖಂಡ ಹಿಂದು ಭಾರತ

ಅಖಂಡ ಹಿಂದು ಭಾರತ ಸಾಧನೆಗೊಂದುಗೂಡಿ ಬನ್ನಿ
ಹೆಬ್ಬಯಕೆಯ ಸಾಧಿಸುವ ಹಾದಿಯಲಿ ಎಲ್ಲರೊಂದೆ ಎನ್ನಿ || ಪ ||

ಜಗತ್ತಿನೆಲ್ಲೆಡೆ ಸಾಕ್ಷಿಯಾಗಲಿದೆ ಭರತನಾಳಿದ ದೇಶ
ಸಾಸಿರ ದಾಳಿಗೆ ಉತ್ತರವಿತ್ತ ವೀರಧೀರ ಸಂಘರ್ಷ
ಹಿನ್ನಡೆಯಾಗಿದೆ ಸತ್ತಿಲ್ಲ ಮನೆ ಮನದೊಳಡಗಿದೆ ಹಿಂದುತ್ವ
ಭೂಮಿ ಎಲ್ಲೆಡೆ ಪಾಲಿಸಬೇಕಿದೆ ಭಾರತೀಯ ಸತ್ವ
ಮಾನವತೆಯ ತತ್ವ || 1 ||

ಸೋಲಿನ ಶೂಲಕೆ ಸಿಲುಕಿ ನರಳುವ ಹೇಡಿ ಜನಾಂಗವು ನಾವಲ್ಲ
ಮೃತ್ಯುವಿನೆದೆಗೆ ಅಂತ್ಯ ಸಾರುವ ಧೀರ ಹೃದಯಗಳೇ ನಾವೆಲ್ಲ
ಎಮ್ಮ ಪೂರ್ವಜರು ಕೊಡಲಿ ಎತ್ತಿದರೆ ತಲೆಬಾಗಿತ್ತು ಕಡಲು
ಮನೆ ಮನೆಯಲ್ಲೂ ಕಣ್ಣು ಬಿಡಲಿ ಆ ಕ್ಷಾತ್ರ ಮೆರೆಯುವ ಗಂಡುಗಳು
ಧರ್ಮ ಪಾಲಿಸುವ ಹೃದಯಗಳು || 2 ||

ಹಿಂದು ಸನಾತನ ಹುಣ್ಣಿ ಬೆಳಗಲಿ ಕತ್ತಲು ತುಂಬಿದ ಬದುಕಲ್ಲ
ಎಲ್ಲರೂ ಒಂದೇ ಎಂದು ಸಾರುವ ತಾಯಿ ಭಾರತೀಯ ಚರಣದಲಿ
ವಿವಿಧತೆಯಲ್ಲಿ ಏಕತೆ ಮೆರೆಯುವ ರಾಮನ ಪಥವು ನಮ್ಮಲ್ಲಿ
ಸಕಲ ಸಂಕುಲಕೂ ಏಳ್ಗೆಯ ಬಯಸುವ ಧರ್ಮ ಗುಂಡಿಗೆಯ ನಾಡಲ್ಲಿ
ಸತ್ಯ ಪಾಲನೆಯ ಪಥದಲ್ಲಿ || 3 ||

One thought on “ಅಖಂಡ ಹಿಂದು ಭಾರತ

Leave a Reply

Your email address will not be published. Required fields are marked *

*

code