ರಕ್ಷೆಯನು ಕಟ್ಟುತ್ತ ಕರಪಿಡಿದು

ರಕ್ಷೆಯನು ಕಟ್ಟುತ್ತ ಕರಪಿಡಿದು ನಡೆಯೋಣ ಒಂದಾಗಿ ನಿಲ್ಲೋಣ ರಾಷ್ಟ್ರರಕ್ಷಣೆಗಿಂದು || ಪ || ಸ್ನೇಹದ ಕಂಪನ್ನು ಪಸರಿಸುವ ರಕ್ಷೆ ನೋವ ಮರೆಸುತ ಧೈರ್ಯ ತುಂಬುವಾ ರಕ್ಷೆ ಒಡೆದ ಮನಸುಗಳ ಒಂದುಗೂಡಿಸೆ ರಕ್ಷೆ ಸಂಬಂಧಗಳನುಬಂಧ ಬೆಸೆಯುವುದೀ ರಕ್ಷೆ || 1 || ಇತಿಹಾಸ ನೆನಪಿಸಲು ಕಾಲನೇ ರಕ್ಷೆ ಗುರಿಯೆಡೆಗೆ ನಡೆಯಲು ನಕ್ಷೆಯೇ ರಕ್ಷೆ ಮೇಲುಕೀಳುಗಳ ಅಳಿಸೆ ಆಯುಧವು ರಕ್ಷೆ ಎಲ್ಲರೂ ಒಂದೆಂಬ ಭಾವವೀ ರಕ್ಷೆ || 2 || ತಾಯ ರಕ್ಷಣೆಗೆ ಸಿದ್ಧಕಂಕಣವು ರಕ್ಷೆ ರಾಷ್ಟ್ರರಕ್ಷಣೆಯ ಮನವಕೊದುವಿದಿದೋ ರಕ್ಷೆ […]

Read More

ಸಿಂಧು ಸಂಸ್ಕೃತಿಯಲ್ಲಿ

ಸಿಂಧು ಸಂಸ್ಕೃತಿಯಲ್ಲಿ ಸಿರಿ ಪರಂಪರೆಯಲ್ಲಿ ಹಿಂದು ಹೆಸರಲಿ ನಾವು ಬಂದೆವಿಳೆಗೆ ಸಂದ ಕಾಲವನೆಳೆದು ಇಂದು ಯಶ ಸಾಧಿಸಲು ಬಂದಿಹುದು ಶುಭ ಸಮಯ ನಮ್ಮ ಬಳಿಗೆ || ಪ || ಒಡೆದು ಶಂಖಧ್ವನಿಯ ಗುಡುಗು ನೂರ್ಮಡಿಗೊಂಡು ಸಿಡಿಸಿಡಿದು ಸೀಳಾಗಿ ಸ್ವೀಕರಿಪ ಮೊದಲೇ ಬಡವ ಅಂತ್ಯಜರೆಂಬ ತಡೆಗೋಡೆಗಳು ಬೆಳೆದು ದುಡುಕಿ ವಿಷನಾಗಗಳು ಫೂತ್ಕರಿಪ ಮೊದಲೇ ಹುಡುಕಿ ಓರೋರ್‍ವರನು ನಿಜವಿಕಾಸಕೆ ತರಲು || 1 || ವಿಸ್ಮೃತಿಯ ಕರಿಮುಗಿಲು ಪ್ರಗತಿಪಥವನು ಕವಿದು ಪಶ್ಚಿಮಕೆ ಸೋತವರ ಅನುಸರಿಸದೇ ಆತ್ಮರತಿಯಲಿ ಮುಳುಗಿ ಆರ್ತರನು ಕಡೆಗಣಿಸಿ […]

Read More

ಹಿಂದು ಸಾಗರವೆ ದೆಸೆಯ ಬದಲಿಸಿದೆ

ಹಿಂದು ಸಾಗರವೆ ದೆಸೆಯ ಬದಲಿಸಿದೆ ಏನಿದೆಂಥ ಮೋಡಿ ಉಕ್ಕಿ ಮೊರೆಯುತಿವೆ ಕೋಟಿ ಅಲೆಗಳು ತಾಯಿ ಸ್ತುತಿಯ ಪಾಡಿ ವೀರ ಸಂತತಿಯ ಆವೇಶ ತನುಗಳಲಿ ಪುಡಿ ಪುಡಿಯು ಎಲ್ಲಾ ಬೇಡಿ ಬಿಂದು ಬಿಂದುವೂ ಇಂದು ಒಂದೆನುವ ಒಮ್ಮತವೆ ಜೀವನಾಡಿ || ಪ || ಇರುಳ ಸರಿಸುತಾ ಬಂದ ಬೆಳಗಿಂದು ಒಸಗೆ ತಂದಿಹಳು ಇಳೆಗೆ ವಿಶ್ವ ಮುಕುಟದ ಸರದಿ ಮೀಸಲು ತಾಯಿ ಭಾರತಿಯ ಶಿರಕೆ ಜಡತೆ ಝಾಡಿಸಿ ಛಲದಿಂದ ದುಡಿಯುವ ದಿಟ್ಟ ಹೃದಯಗಳ ಹರಕೆ ದುರುಳರೆದೆಗಳ ಸೀಳಿ ಮಾತೆಗೆ ಜಯಮಾಲೆ […]

Read More

ಬಡತನದ ಬೇಗೆಯಲಿ

ಬಡತನದ ಬೇಗೆಯಲಿ ಬೇಯುತಿಹ ಬಂಧುಗಳ ಬಾಳಿನಲಿ ಬೆಳದಿಂಗಳೆನಿಸಬೇಕು ಭಾರತೀಯರ ಭಾವ ಭಿನ್ನತೆಯ ಬದಿಸರಿಸಿ ಬಂಧು ಭಾವದೊಳವರ ಬೆಸೆಯಬೇಕು || ಪ || ಬವಣೆ,ಬೇಗುದಿಯಳಿಸಿ, ಬೇನೆ, ಬೇಸರವಳಿಸಿ ಬಧಿರತನದುರುಳಿಂದ ಬೇರ್ಪಡಿಸಬೇಕು ಬಡಿವಾರ ಬದಿಗಿರಿಸಿ ಬಂಧುಗಳ ಬರಸಳೆದು ಬಿಗಿದಪ್ಪಿ ಭಾವಗಳ ಬೆಸೆಯಬೇಕು || 1 || ಬೆಳಕಿನೆಡೆ ಬರಮಾಡಿ ಬಲದೊಲವನೀಯುತ್ತ ಭರವಸೆಯ ಬೀಜವನು ಬಿತ್ತಬೇಕು ಬಡವ ಬಲ್ಲಿದರೆಂಬ ಭೇದ ಬದನಿಕೆಯಳಿಸಿ ಭಾರತದ ಬೇರುಗಳ ಬೆಳೆಸಬೇಕು || 2 || ಬವರದಲಿ ಬಲಿದಾನವಾಂತವರ ಬಯಕೆಯೊಲು ಭವ್ಯ ಭಾರತವನ್ನು ಬಲಿಯಬೇಕು ಭೂಮಾತೆಯಣುಗರಲಿ ಭೂಮಿ […]

Read More

ಉರಿಸೋ ಧ್ಯೇಯದೀಪ

ಉರಿಸೋ ಧ್ಯೇಯದೀಪ, ಜನಮನದ ಆಳದಲ್ಲಿ ಹರಿಸೋ ಅಮೃತಧಾರಾ, ವಿಷಮಯ ಪಾತಾಳದಲ್ಲಿ || ಪ || ದೀನ ದಲಿತ ಜನರ ಜೊತೆಗೂಡಿ ಸಾಗು ಮುಂದೆ ಒಂದೇ ತಾಯಿ ನೆಲವು ನಮ್ಮೆಲ್ಲ ಗುರಿಯು ಒಂದೆ ತೆರೆಸೋ ಹೃದಯದ್ವಾರ ವಿಭ್ರಾಂತ ಜನಗಳಲ್ಲಿ ಹರಿಸೋ ಸ್ನೇಹಪೂರ ಭ್ರಮೆಯಾಂತ ಮನಗಳಲ್ಲಿ || 1 || ಶಿಲೆಯು ಕಲೆಯಧರಿಸಿ ಇತಿಹಾಸ ಒರೆಯುತಿಹುದು ಹಿಂದೂ ಜನತೆಯಿಂದು ನಾಡನ್ನೆ ಮರೆಯುತಿಹುದು ಮೆರೆಸೋ ರಾಷ್ಟ್ರಧ್ವಜವ ಉನ್ನತಿಯ ಬಾನಿನಲ್ಲಿ ಸ್ಮರಿಸೋ ನಾಡ ಹಿರಿಮೆ ಅನುದಿನವೂ ಬಾಳಿನಲ್ಲಿ || 2 || ಬಲವ […]

Read More

ಸೇವಾ ಗಂಗೆಯಲಿ ಮಿಂದೆದ್ದು

ಸೇವಾ ಗಂಗೆಯಲಿ ಮಿಂದೆದ್ದು ಸೇವಾ ತುಂಗಾ ಪಾನವ ಗೈದು ಸೇವಾವ್ರತವನು ಪಿಡಿಯೋಣ ಸೇವಾಕಾರ್ಯದಿ ಧುಮುಕೋಣ ಸೇವಾ ಹಿ ಪರಮೋಧರ್ಮಃ || ಪ || ವಿಶ್ವವನಾವರಿಸಿಹ ಕಗ್ಗತ್ತಲ ಒಮ್ಮನದಲಿ ಬದಿಗೊತ್ತೋಣ ಧೈರ್ಯವ ತುಂಬುತ ಪ್ರತಿ ಮನದಲ್ಲೂ ಆತ್ಮವಿಶ್ವಾಸವ ಭರಿಸೋಣ ಧೈರ್ಯಂ ಸರ್ವತ್ರ ಸಾಧನಂ || 1 || ವೈದ್ಯರಂತೆ ಕಾಯಕ ಮಾಡಿ ಕಾಯಕ ಕೈಲಾಸವೆನ್ನೋಣ ದಾದಿಯರಂತೆ ಸೇವಾಕಾರ್ಯದಿ ಅನುದಿನ ಅನುಕ್ಷಣ ತೊಡಗೋಣ ವೈದ್ಯೋ ನಾರಾಯಣೋ ಹರಿಃ || 2 || ತೋರಿಕೆ ಬೇಡ ಸಮರ್ಪಣೆ ಇರಲಿ ಅಂತ:ಚಕ್ಷುವು ತೆರೆದಿರಲಿ […]

Read More

ಭರತ ಭೂಮಿಯ ವರಗುವರನಾ

ಭರತ ಭೂಮಿಯ ವರಗುವರನಾ ಗುರುವೆ ನಿನ್ನಯ ಚರಣಕೆರಗಿದೆ ಹರಸು ಪ್ರೇಮವ ಎನ್ನೊಳಿರಿಸುತ ನೀನು ಮುದದಿಂದ ವರವಿಶಾಲವು ಭರತ ಖಂಡವು ಧರಣಿಯಗಲದಿ ಖ್ಯಾತಿ ಪಡೆದಿದೆ ಪರಮ ತ್ಯಾಗಕೆ ಜ್ಞಾನ ಸಾಹಸ ಘನ ಪರಂಪರೆಗೆ ಮನುಕುಲೋನ್ನತಿಯನ್ನು ಬಯಸುತ ವನದಿ ತ್ಯಾಗದ ಬದುಕ ನಡೆಸಿದ ಮುನಿಕುಲದ ವಾರಿಧಿಗೆ ನೀನೇ ಮೌನ ಪ್ರತಿನಿಧಿಯು ಮಣಿದೆ ಶಿರವನು ನಿನ್ನಡಿಗೆ ನಾ ಮನದ ಕೊಳೆಯನು ತೊಳೆವ ಶ್ರೀಗುರು ನನಗೆ ಗೆಲುವಿನ ಪಥವ ತೋರಿದ ಜ್ಞಾನ ದ್ಯೋತಕವೇ ನೀನು ತೋರಿದ ವೀರ ಪಥದಲಿ ರಾಣ ಶಿವಭೂಪಾಲರಾದ್ಯರು ಏನು […]

Read More

ಅಂತಿಮ ಜಯ ನಮ್ಮದೇ

ಅಂತಿಮ ಜಯ ನಮ್ಮದೇ ಇದೆಮ್ಮ ನಂಬಿಕೆ ಸಂಘಟನೆಯ ಬಲವಿದೆ ಏಕೆ ಅಂಜಿಕೆ || ಪ || ಕಾಶ್ಮೀರದ ಕೂಗಿಗೆ ಈಶಾನ್ಯದ ಸಂಚಿಗೆ ಭಾರತಾಂಬೆಯ ಕೊರಗಿಗೆ ಕೊನೆಯ ಸಾರಲು ಯುವಶಕ್ತಿಯು ತೆರಳಿದೆ, ಸ್ವಾಭಿಮಾನ ಕೆರಳಿದೆ ಬಿಸಿನೆತ್ತರ ಸಾಮರ್ಥ್ಯವ ಜಗಕೆ ತೋರಲು || 1 || ಅರಿಯ ದುಷ್ಟ ತಂತ್ರವ ಘೋರ ಷಡ್ಯಂತ್ರವ ವಿಫಲಗೊಳಿಸಬಲ್ಲೆವು ನಾವು ಖಂಡಿತ ಬಿಸುಟು ಭೇದ ಭಾವವ, ಮೆಟ್ಟಿ ಉಗ್ರವಾದವ ಕಟ್ಟಬನ್ನಿ ಗೆಳೆಯರೆ ಸಶಕ್ತ ಭಾರತ || 2 || ಹಿಂದುತ್ವದ ಚಂದನ, ಬಂಧುತ್ವದ ಬಂಧನ […]

Read More

ಭಾರತ ಇದು ಭಾರತ

ಭಾರತ ಇದು ಭಾರತ ನಮ್ಮ ನಾಡಿದು ಭಾರತ ವಿಶ್ವ ಮೋಹಿನಿಯಾಗಿ ಮೆರೆದ ಶಾಂತಿಸದನವು ಭಾರತ || ಪ || ಹಿಮಶಿಖರ ಮಣಿಮುಕುಟದಿಂದ ಎದೆಯ ದೋಣಿಯ ನದಿಗಳಿಂದ ಬೆಟ್ಟತೋಳಿಗೆ ಕಡಲಕಂಕಣ ಪುಟ್ಟ ಹಸುರುಡೆ ಕಾನನ ಸತ್ಯಸುಂದರ ಶಿವನ ಮುಡಿದು ನಿತ್ಯಮಂಗಲವಾಗಿ ಮೆರೆದು ಮೆರೆದ ನಾಡಿದು ಸುಂದರ ರತ್ನಗರ್ಭ ವಸುಂಧರಾ || 1 || ನೂರು ದಶಕವ ದಾಟಿ ಹೋದರೂ ತನ್ನತನವನು ಬಿಡದಿದು ಸ್ವಾಭಿಮಾನದ ಸ್ವಾವಲಂಬನ ಶ್ರೇಷ್ಠ ಸಂಸ್ಕೃತಿ ಮೆರೆವುದು ನಾಡು ಬೆಳೆಯಲಿ ಗುಡಿಯನೆತ್ತಲಿ ಮನಕೆ ಮಂಗಲವೀಯಲಿ ಕೆಚ್ಚುಹಚ್ಚಿದ ಕಿಚ್ಚು […]

Read More

ಬೆಳಗಲೀ ಬೆಳಗಲೀ ಸನಾತನಾರ್ಯಭಾರತ

ಬೆಳಗಲೀ ಬೆಳಗಲೀ ಸನಾತನಾರ್ಯಭಾರತ ಕಳೆಯಲೀ ಕಳೆಯಲೀ ಕವಿದ ಕತ್ತಲೆಯ ಮೆರೆತ || ಪ || ಬಾಳಿನಲ್ಲಿ ಬೆಳಕು ಕಂಡು ಬಾಳಿದವರ ಭಾರತ ತೋಳಿನಲ್ಲಿ ಕ್ಷಾತ್ರತೇಜ ತುಂಬಿದವರ ಭಾರತ ಕೇಳಿದವರ ಜ್ಞಾನತೃಷೆಗೆ ಅಮೃತವಿತ್ತ ಭಾರತ ಮೌಳಿಯಲ್ಲಿ ಚಂದ್ರಕಲೆಯನಾಂತ ಶಿವನ ಭಾರತ || 1 || ಬ್ರಹ್ಮಲೋಕದಿಂದ ಬಂದ ಗಂಗೆ ಹರಿದ ಭಾರತ ಬ್ರಹ್ಮಭಾವ ತುಂಬಿ ನಿಂತ ಸದ್ಗುರುಗಳ ಭಾರತ ಧರ್ಮದಿಂದ ರಾಜ್ಯವಾಳ್ದ ರಾಮ ಮೆರೆದ ಭಾರತ ಧರ್ಮವನ್ನು ಎತ್ತಿ ಹಿಡಿದ ಕೃಷ್ಣ ಬೆಳೆದ ಭಾರತ || 2 || […]

Read More