ಅಂತಿಮ ಜಯ ನಮ್ಮದೇ

ಅಂತಿಮ ಜಯ ನಮ್ಮದೇ ಇದೆಮ್ಮ ನಂಬಿಕೆ
ಸಂಘಟನೆಯ ಬಲವಿದೆ ಏಕೆ ಅಂಜಿಕೆ || ಪ ||

ಕಾಶ್ಮೀರದ ಕೂಗಿಗೆ ಈಶಾನ್ಯದ ಸಂಚಿಗೆ
ಭಾರತಾಂಬೆಯ ಕೊರಗಿಗೆ ಕೊನೆಯ ಸಾರಲು
ಯುವಶಕ್ತಿಯು ತೆರಳಿದೆ, ಸ್ವಾಭಿಮಾನ ಕೆರಳಿದೆ
ಬಿಸಿನೆತ್ತರ ಸಾಮರ್ಥ್ಯವ ಜಗಕೆ ತೋರಲು || 1 ||

ಅರಿಯ ದುಷ್ಟ ತಂತ್ರವ ಘೋರ ಷಡ್ಯಂತ್ರವ
ವಿಫಲಗೊಳಿಸಬಲ್ಲೆವು ನಾವು ಖಂಡಿತ
ಬಿಸುಟು ಭೇದ ಭಾವವ, ಮೆಟ್ಟಿ ಉಗ್ರವಾದವ
ಕಟ್ಟಬನ್ನಿ ಗೆಳೆಯರೆ ಸಶಕ್ತ ಭಾರತ || 2 ||

ಹಿಂದುತ್ವದ ಚಂದನ, ಬಂಧುತ್ವದ ಬಂಧನ
ವಿಶ್ವಮಾಂಗಲ್ಯವೇ ನಮ್ಮ ನೀತಿಯು
ಆಲಸ್ಯವನೋಡಿಸಿ ನವ ಜಾಗೃತಿ ಮೂಡಿಸಿ
ದಿವ್ಯಪ್ರಭೆಯ ಬೀರಲಿ ರಾಷ್ಟ್ರಭಕ್ತಿಯು || 3 ||

Leave a Reply

Your email address will not be published. Required fields are marked *

*

code