ಮನೆಯ ಹೊರಗಡೆ ಅಲ್ಲ

ಮನೆಯ ಹೊರಗಡೆ ಅಲ್ಲ,ಮನದ ಹೊರಗೂ ಅಲ್ಲ ಒಳಗಡೆಗೆ ಆಳದೆಡೆ ನಾನಿಳಿಯಬೇಕು ಒಳಗಿಳಿದು ಕೆಳಗಿಳಿದು ಒಳಗಿನರಗಿಳಿ ನುಡಿವ ಒಲುಮೆಯ ಸವಿನುಡಿಯ ಕಿವಿಗಿಳಿಸಬೇಕು || ಪ || ಹಿಂದು ಮುಂದರಿಯದಲೆ ಅಲೆಯುತಿಹ ಇಂದ್ರಿಯವ ತುಡುಗುತನವನು ಬಿಡಿಸಿ ಹಿಂದೆಳೆಯಬೇಕು ಹಿಡಿವಡೆಯಲೆಡೆಗೊಡದೆ ಚಂದವರಸುವ ಮನವ ಚಂದದಲಿ ಅನುನಯಿಸಿ ಕುಳ್ಳಿರಿಸಬೇಕು || 1 || ಕಣ್ಣಾಲಿಗಳ ಮುಚ್ಚಿ ಒಳಗಣ್ಣುಗಳ ತೆರೆದು ಆಂತರಂಗದ ಯಾತ್ರೆ ತೊಡಗಬೇಕು ಸರ್ವಾಂತರ್ಯಾಮಿ ಆ ಅನಂತ ಚೇತನದರಿವು, ಆ ಚಿರಂತನ ಸತ್ಯ ಕಣ್ತುಂಬಬೇಕು || 2 || ಒಳ ಹೊರಗಿನಲೂ ಹರಿವ […]

Read More

ಮಣಿದುದೀ ಜಗ ಹಿಂದು ತೇಜಕೆ

ಮಣಿದುದೀ ಜಗ ಹಿಂದು ತೇಜಕೆ ಜ್ಞಾನ ತಪಸಿಗೆ ತ್ಯಾಗಕೆ ಮರುಳುಗೊಳುವೆಯ ಮಾನಧನ ನೀನಿಂದು ಕ್ಷಣಿಕದ ಭೋಗಕೆ      || ಪ || ಪಾರಿವಾಳದ ಪ್ರಾಣ ಉಳಿಸಲು  ತೊಡೆಯ ಮಾಂಸವ  ಕೂಯ್ದವ ಹುಲಿಯ ಹಾಲನು ಸವಿದು ಸಿಂಹದ ಹಲ್ಲನೆಣಿಸಲು ತುಯ್ದವ ಅರಿಯ ತರಿಯುತ ದೇಹಿ ಎನುವರಿಗೆ ಭಯ ನೀಡಿದೆ ಕರುಣದಿ ನಿಗ್ರಹಾನುಗ್ರಹ ಸಮರ್ಥನು ಶಸ್ತ್ರಶಾಸ್ತ್ರದ ಸ್ಪುರಣದಿ             || 1 || ಮಣ್ಣ ರೂಪಿಗೆ ಕಣ್ಣು ಮೂಡಿಸಿ ಧ್ಯೇಯದೆರಕವನೆರೆವ ಬಾ ಸಂಘಟಿತ […]

Read More

ಬನ್ನಿ ಹಿಂದು ಯೋಧರೆಲ್ಲ ಒಂದುಗೂಡುತ

ಬನ್ನಿ ಹಿಂದು ಯೋಧರೆಲ್ಲ ಒಂದುಗೂಡುತ ಭಾರತಾಂಬೆ ಸೇವೆಗಾಗಿ ಮುಂದೆ ಸಾಗುತ || ಪ || ಆನಗಾದಿ ರಾಜ ಗೌರಿಶಂಕರ ಉನ್ನತುಂಗ ವಿಶ್ವರಿಪು ಭಯಂಕರ ಮಾನನೀಯ ಮಾನಸ ಸರೋವರ ಮರೆಯಲೆಂತು ಮಾತೃ ಭೂ ಮನೋಹರ || 1 || ಕುರಿಗಳಲ್ಲ ನಾವು ಕೇಸರಿಗಳು ಅರಿಯ ಶಿರವ ಮೆಟ್ಟಬಲ್ಲ ಕಲಿಗಳು ವೈರಿ ಕಾಲಿಡುತಿಹನು ಕಣ್ಣಕಾಣದೆ ಸುಮ್ಮನಿರುವೆ ಎಂತು ಅವನ ಮಣ್ಣುಮಾಡದೆ || 2 || ಮಡಿವ ಮುನ್ನ ಮಾಡು ಬಾಳು ಸಾರ್ಥಕ ಭರತಮಾತೆ ಮಡಿಲ ನಿತ್ಯ ಸೇವಕ ಮುಂದೆ ಮುಂದೆ […]

Read More

ಒಂದುಗೂಡಿ ಬಾಳುವಾ ಸನ್ಮಾರ್ಗದಲ್ಲೇ ನಡೆಯುವಾ

ಒಂದುಗೂಡಿ ಬಾಳುವಾ ಸನ್ಮಾರ್ಗದಲ್ಲೇ ನಡೆಯುವಾ ಶಕ್ತಿ ಮೀರಿ ನಾವು ಸತ್ಕಾರ್ಯವನ್ನೇ ಮಾಡುವಾ || ಪ || ಯುಗದ ಜೊತೆಗೆ ಹೆಜ್ಜೆ ಹಾಕಿ ಮುನ್ನುಗ್ಗಲರಿಯುವಾ ಒಂದೇ ಸ್ವರದಲ್ಲಿ ಹಾಡ ಅನುರಣಿಸಲು ಕಲಿಯುವಾ ಮರೆತು ಕೂಡ ಜಾತಿ ಪಂಥ ಎಂಬ ಮಾತನಾಡಬೇಡಿ ಭಾಷೆ ಪ್ರಾಂತಕಾಗಿ ಎಂದೂ ರಕ್ತಪಾತ ಮಾಡಬೇಡಿ ದುಷ್ಟ ಶಕ್ತಿ ಹೆಚ್ಚುತಿದೆ ಬಗ್ಗು ಬಡಿದು ಮುಂದೆ ಸಾಗಿ || ಶಕ್ತಿ ಮೀರಿ || ಹತ್ತು ದಿಕ್ಕಿನಿಂದ ಇಂದು ಕೇಳಿಬರುತ್ತಿರುವ ಕೂಗು ಸಾಟಿಯಿಲ್ಲ ಮಾತೃ ಋಣಕೆ ಇಡಬೇಕು ಬಾಳ ಮುಡಿಪು […]

Read More

ನಿನ್ನರುಣ ಕಿರಣಗಳು

ನಿನ್ನರುಣ ಕಿರಣಗಳು ನಿನ್ನ ಶುಭಕರ ಬೆಳಕು ನನ್ನ ಧೀಯನು ಬಳಸಿ ಬೆಳಗೆ ಬರಲಿ       || ಪ || ನಿನ್ನ ಸರ್ವಾತ್ಮದಲಿ ನನ್ನನರಿವಂದದಲಿ ನನ್ನ ಹೃದಯವ ಹಿರಿದು ಮಾಡೆಬರಲಿ     || 1 || ಭೇದವೇ ನಿನಗಿಲ್ಲ ಶತ್ರು ಮಿತ್ರರು ಮಿಲ್ಲ ಒಳಿತು ಕೆಡುಕನು ದಾಟಿದಿರವು ನಿನದು    || 2 || ನಾನು ನಿನ್ನಂತಾಗಿ ನಿನ್ನೊಳೈಕ್ಯನೇ ಆಗಿ ನಿನ್ನಿರವಲೇ ಜಗವನರಿವುದೆಂದು          || 3 ||

Read More

ಉತ್ಸಾಹ ಚಿಮ್ಮುವ ಹರೆಯದಲಿ

ಉತ್ಸಾಹ ಚಿಮ್ಮುವ ಹರೆಯದಲಿ ಗುರಿಗಾಗಿ ಕಾತುರ ಛಲವಿರಲಿ ಥಳುಕಿನ ಚಂಚಲ ಹರಿವಿನಲಿ ದೃಢ ನಿರ್ಧಾರದ ನೆಲೆಯಿರಲಿ     ||ಪ|| ಯೌವನ ಹೊಮ್ಮುವ ತನುವಿರಲಿ ಅಂಜಿಕೆ ಅಳುಕು ಕಾಡದಿರಲಿ ಪ್ರವಾಹದೆದುರು ಸೆಣಸಿನಲಿ ಅದಮ್ಯ ವಿಶ್ವಾಸ ಹುದುಗಿರಲಿ     || 1 || ತಾರುಣ್ಯ ತೋರುವ ಕನಸಿನಲಿ ಹೊಸ ವಸಂತದ ಚಿಗುರಿರಲಿ ಹೊನ್ನ ಕಿರಣದ ಚೆಲುವಿನಲಿ ಭೂಮಿಯ ಬಳುವಳಿ ನೆನಪಿರಲಿ  || 2 || ತುಡಿಯುವ ತೋಳಿನ ಬೀಸಿನಲಿ ಸಿರಿಯನು ಸೃಜಿಸುವ ಕಸುವಿರಲಿ ಮಿಡಿಯುವ ಹೃದಯದ ಹಾಸಿನಲಿ ಸೇವೆಯ ಆದರ್ಶ […]

Read More

ನನ್ನೊಳಗೆ ನಾನಿಳಿದು

ನನ್ನೊಳಗೆ ನಾನಿಳಿದು ನನ್ನಿರವ ನಾ ತಿಳಿದು ನನ್ನಿಯಾ ತಿಳಿಗೊಳದಿ ನಾನೀಸಬೇಕು ನನ್ನ ಹೃದಯದ ಪುರದಿ ನೆಲೆಸಿರುವ ಚಿನ್ಮಯನ ಕಣ್ಣೆದುರು ಕಾಣುವರೆ ಮನ ತೊಳೆಯಬೇಕು ||1|| ಸ್ವಾಂತರಂಜನೆಯೊಂದೇ ಏಕಾಂತದನುಭೂತಿ ಪರ ಹಿತ ಪಥವಹುದು ಪರಮಪದಕೆ ಸಮರಸದ ಸಂಹಿತೆಯು ಸಮನಿಸುವ ಸುಮ ಮನವು ಸ್ವಾರ್ಥ ನಿಯಮನವೆಂಬ ವ್ರತವು ಬೇಕದಕೆ ||2|| ನಾ ನಿಮಿತ್ತನು ಮಾತ್ರ ನಿಯಾಮಕನು ಬೇರಿಹನು ಪೂರ್ವ ನಿಗದಿತ ಕಾರ್ಯ; ಕರಣ ನಾನು ಎಲ್ಲರೊಳಗಿನ “ನಾನು” ಒಂದೆಂಬ ಅನುಭಾವ ಸಿದ್ದಿಸಿದ ಜೀವನವು ಮಧುರ ಜೇನು ||3|| ದೃಶ್ಯದನುಭವಕಿಹುದು ಪರಿಮಿತಿಯ […]

Read More

ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ

ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ      || ಪ || ತೋಟದಲ್ಲಿ ಹಲವು ಬಣ್ಣ ಬಣ್ಣ ಹೂಗಳು ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು ಹೂಗಳಂತೆ ಮತಗಳೆಲ್ಲ ಕಂಪು ಸೂಸಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ       || 1 || ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೇ ? ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೇ ಜಗದ ಸೃಷ್ಟಿಯಲ್ಲಿ ಜೀವ ಸುಖದಿ ಬಾಳಲಿ ನಮ್ಮೆಲ್ಲ ಭೇದಭಾವಗಳು ದೂರವಾಗಲಿ      || 2 || ಮಣ್ಣಿನಿಂದ ಆದ ಮಡಿಕೆ ಮಣ್ಣಿಗನ್ಯವೇ ? ಚಿನ್ನದಿಂದ […]

Read More

ಪುಣ್ಯಭೂಮಿಯಲಿ ಧ್ಯೇಯದ ಗುಡಿಯು

ಪುಣ್ಯಭೂಮಿಯಲಿ ಧ್ಯೇಯದ ಗುಡಿಯು ಗುಡಿಯಲಿ ಅರಳಿವೆ ಅಸಂಖ್ಯ ಸುಮವು ನಡೆದಿದೆ ರಾಷ್ಟ್ರದ ಅರ್ಚನೆಯು               || ಪ ||   ಈಶನ ಕಾರ್ಯಕೆ ಜನಿಸಿದ ಕಾಯ ತುಂಬಿದೆ ಸೋಲರಿಯದ ಬಲ ಧೈರ್ಯ ಧಮನಿ ಧಮನಿಯಲಿ ಹರಿದಿದೆ ಶೌರ್ಯ ನಾಡ ರಕ್ಷಣೆಗೆ ಅನುದಿನವು                    || 1 ||   ಜಗ ತಲೆಬಾಗುವ ಶೀಲದ ನಡತೆ ಜನಮನ ಬೆಳಗುವ ಜ್ಞಾನದ ಹಣತೆ ಸಂಚಯ ನವನೇತೃತ್ವದ ಕ್ಷಮತೆ ಅಮಿತೋತ್ಸಾಹದಿ ಕ್ಷಣಕ್ಷಣವು                || 2 ||   ಅಂಜದೆ ಸವಾಲುಗಳ ಸ್ವೀಕರಿಸಿ ಗೆಲ್ಲುವ ಛಲ […]

Read More

ಆಶ್ವಯುಜ ಶುದ್ಧ ಮಹಾನವಮಿ ಬರಲೆಂದು (ದಸರಾ ಹಾಡು)

ಆಶ್ವಯುಜ ಶುದ್ಧ ಮಹಾನವಮಿ ಬರಲೆಂದು ಲೇಸಾಗಿ ಹರಸಿದೆವು ಬಾಲಕರು ಬಂದು       || ಪ || ಗಣಪತಿಯ ಪದತಲಕೆ ಶರಣು ಶರಣೆಂದು ನವದುರ್ಗೆ ಜಗಕೆಲ್ಲ ಶುಭವ ತರಲೆಂದು ಈಶ ನಿಮಗತ್ಯಧಿಕ ಫಲವ ಕೊಡಲೆಂದು ವಿಜಯ ದಶಮಿಯು ನಮಗೆ ಜಯವ ತರಲೆಂದು  || 1 || ಮಳೆ ಹೊಯ್ದು ಬೆಳೆ ಬೆಳೆದು ಇಳೆ ತಣಿಯಲೆಂದು (ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು) ಧನಕನಕ ಗೋಭಾಗ್ಯ ನಿಮಗೊದಗಲೆಂದು ಸಾವಯವದಿಂದನ್ನ ನಮಗೊದಗಲೆಂದು ಹೂ ಕೋಲ ದರುಶನದಿ ಶುಭವು ನಿಮಗೆಂದು || 2 || […]

Read More