ಬನ್ನಿ ಹಿಂದು ಯೋಧರೆಲ್ಲ ಒಂದುಗೂಡುತ
ಭಾರತಾಂಬೆ ಸೇವೆಗಾಗಿ ಮುಂದೆ ಸಾಗುತ || ಪ ||
ಆನಗಾದಿ ರಾಜ ಗೌರಿಶಂಕರ
ಉನ್ನತುಂಗ ವಿಶ್ವರಿಪು ಭಯಂಕರ
ಮಾನನೀಯ ಮಾನಸ ಸರೋವರ
ಮರೆಯಲೆಂತು ಮಾತೃ ಭೂ ಮನೋಹರ || 1 ||
ಕುರಿಗಳಲ್ಲ ನಾವು ಕೇಸರಿಗಳು
ಅರಿಯ ಶಿರವ ಮೆಟ್ಟಬಲ್ಲ ಕಲಿಗಳು
ವೈರಿ ಕಾಲಿಡುತಿಹನು ಕಣ್ಣಕಾಣದೆ
ಸುಮ್ಮನಿರುವೆ ಎಂತು ಅವನ ಮಣ್ಣುಮಾಡದೆ || 2 ||
ಮಡಿವ ಮುನ್ನ ಮಾಡು ಬಾಳು ಸಾರ್ಥಕ
ಭರತಮಾತೆ ಮಡಿಲ ನಿತ್ಯ ಸೇವಕ
ಮುಂದೆ ಮುಂದೆ ಸಾಗುತ ಒಂದುಗೂಡುತ
ಭಾರತಾಂಬೆ ಸೇವೆಗಾಗಿ ಸಾವ ಗೆಲ್ಲುತ || 3 ||
ಶೂನ್ಯದಲ್ಲಿ ಸ್ವರ್ಗ ದ್ವಾರ ತೆರೆಯಲಿ
ಭರತಮಾತೆ ವಿಶ್ವಮಾತೆ ಜಗದಿ ಮೆರೆಯಲಿ || 4 ||