ಬೆಳಕಿನ ಕಡೆ ಮುಖ ಮಾಡೋಣ

ಬೆಳಕಿನ ಕಡೆ ಮುಖ ಮಾಡೋಣ ಕತ್ತಲೊಡನೆ ಸೆಣೆಸಾಡೋಣ || ಪ || ದೂರವಿದ್ದರೆ ಹತ್ತಿರ ಸೆಳೆದು ಸ್ನೇಹದ ಸುಧೆಯನು ಹರಿಸೋಣ ಬದುಕಿನ ಬಯಲಲಿ ಬೀಳುವ ಕಸವನು ಸದಾಕಾಲವೂ ಗುಡಿಸೋಣ || 1 || ಸ್ವಾರ್ಥ ದುರಾಸೆ ಭಾರಿ ಬಲೂನಿಗೆ ಮಾನವತೆಯ ಮೊನೆ ಚುಚ್ಚೋಣ ನಾಳೆಯೇ ಇಲ್ಲದ ಕಣ್ಣುಗಳಲ್ಲಿ ಕನಸಿನ ದೀಪವ ಹಚ್ಚೋಣ || 2 || ಹಸಿದ ಒಡಲಿಗೆ ತುತ್ತು ನೀಡಿ ಸುರಿವ ಕಂಬನಿಯ ಒರೆಸೋಣ ಬೆಳೆವ ಸಸಿಗಳಿಗೆ ನೀರನ್ನೆರೆದು ಶುಭದ ಮಾತಿನಲಿ ಹರಸೋಣ || 3 […]

Read More

ಅಂದು ನೀ ಕಂಡ ಕನಸು

ಅಂದು ನೀ ಕಂಡ ಕನಸು ಇಂದು ಹೆಮ್ಮರವಾಗಿ ಸಂಘರೂಪದಿ ನಿಂದು ಫಲವೀಯುತಿಹುದು ಧರ್ಮದ ನೆಲೆಯಲ್ಲಿ ದೇಶವೆಂಬ ನಿಲುವ ಹೊತ್ತಿದ್ದ ನನ್ನ ಕನಸು ನನಸಾಯಿತಿಂದು || ಪ || ರಾಷ್ಟ್ರದ ಭವಿತವ್ಯ ಯುವಕರ ಕೈಲೆಂದು ಸಾರಿದ ನಿನ್ನ ಊಹೆ ನಿಜವಾಯಿತಿಂದು ಎಂತೆಂಥ ಕಷ್ಟಗಳು ರಾಷ್ಟ್ರಕೇ ಒದಗಿದರೂ ರಾಷ್ಟ್ರೀಯರೇ ನಿಂದು ಪರಿಹರಿಸುತಿಹರು || 1 || ನೀನೊಬ್ಬ ದ್ರಷ್ಟಾರ ಮಾಡಿದೆ ಉದ್ಗಾರ ಭರತಮಾತೆಯ ಸುತರು ರಾಷ್ಟ್ರೀಯರೆಂದು ಒಬ್ಬೊಬ್ಬ ರಾಷ್ಟ್ರೀಯ ಸ್ವಯಂಸೇವಕನೆಂದು ನೀನು ಕೊಟ್ಟ ವ್ರತದೀಕ್ಷೆ ಅಜರಾಮರ || 2 || […]

Read More

ಗತ ಇತಿಹಾಸದ ಗಡಿಗಳ ಮೀರಿದ

ಗತ ಇತಿಹಾಸದ ಗಡಿಗಳ ಮೀರಿದ ವೀರನು ಗುಣಶೇಖರನು ಹಿಂದವಿ ಶಕ್ತಿಯ ಮಾತೆಯ ಮಡಿಲಿನ ಪುರುಷಸಿಂಹನು ಅಗ್ರಜನು || ಪ || ಎಳೆಯ ಮನವದು ಪರರನು ಒಪ್ಪದೆ ತನ್ನದೆ ಹೆಜ್ಜೆಯ ಮೆಟ್ಟುವನು ಮಾವಳ ಮನದಲಿ ದೇಶಭಕ್ತಿಯ ತುಂಬುತ ಕೋಟೆಯ ಗೆದ್ದವನು ಕತ್ತಲೆ ತುಂಬಿಹ ಭರತ ಕುಲದಲಿ ಧ್ಯೇಯದ ದೀಪವೆ ಆದವನು ಸಮರ ಚತುರನು ಪ್ರಜಾಪ್ರಿಯನು ಪ್ರಚಂಡ ಶಿವನಿವನು || 1 || ಜೀಜಾಬಾಯಿಯ ಖಡ್ಗವವನು ಕನಸಿಗೆ ನನಸಾದವನು ಮೊಗಲ ಪಾಪಿಯ ಸೊಕ್ಕ ಮುರಿದ ಧೀರ ಕುಲ ತಿಲಕನು ರಾಷ್ಟ್ರದೇವನ […]

Read More

ದೀನದಯಾಳ ಗುಣಗಳ ಧಾಮ

ದೀನದಯಾಳ ಗುಣಗಳ ಧಾಮ ಜೀವನವೆಲ್ಲಾ ಧ್ಯೇಯಕೆ ಹೋಮ ಸಂಯಮ ಚತುರತೆ ನುಡಿಯಲಿ ಮಮತೆ ಹೃದಯದಲಿ ಸದಾ ಭಾರತ ಮಾತೆ || ಪ || ಏಕಾತ್ಮ ಭಾವದ ವಿಚಾರ ಕಿರಣದಿ ಬೆಳಗಿದೆ ನಾಡಿನ ಮನ ಮನವ ತತ್ವವೆ ಜೀವನ ವ್ಯಕ್ತಿಯೆ ಸಾಧನ ಸರಳತೆಯ ಮೂರ್ತಿಗಿದೋ ನಮನ || 1 || ಕಾಲವು ಸರಿದು ಶತಕವೆ ಕಳೆದು ಇಂದಿಗು ದೀಪವೆ ಆ ಬದುಕು ನಮಗೆ ದಾರಿ ತೋರುವ ತೆರದಿ ಕಾಣಲಿ ದಯಾಳನ ಕ್ಷಣ ಕ್ಷಣವೂ || 2 || ಯವನ […]

Read More

ತಾಯಿ ಕರೆಯುತಲಿಹಳು ಕಣ್ತೆರೆದು ನೋಡು

ತಾಯಿ ಕರೆಯುತಲಿಹಳು ಕಣ್ತೆರೆದು ನೋಡು ತನ್ನ ಸಂತತಿಯ ತಾ ಹರಸಲೆಂದು || ಪ || ಅಣ್ಣಂದಿರಿರುವಲ್ಲಿ ಅನುಜನಾಗುತ ಬಾಳು ಎಳೆಯ ಮನಗಳಿಗೆ ನೀ ಹಿರಿಯನಾಗು ನಭವ ಸೇರಿದ ಮೇಘ ಮಳೆಯಾಗುವಾ ತೆರದಿ ನಾನೆಂಬ ಭಾವವನು ಕಳಚಿ ಹೋಗು || 1 || ಅದು ಏಕೆ? ಇದು ಏಕೆ? ಸಂದೇಹವನು ತೊರೆದು ಶುದ್ಧ ಭಾವವ ಮನದಿ ತಳೆದು ಸಾಗು ನೀರ ಸ್ಪರ್ಶದಿ ಭೂಮಿ ಹಸಿರುಡುಗೆ ತೊಡುವಂತೆ ಸಂಸ್ಕೃತಿಯ ಸಿಂಚನದಿ ಧ್ಯೇಯಿಯಾಗು || 2 || ಮನದ ದೌರ್ಬಲ್ಯವನು ಹರಿದೊಗೆದು […]

Read More

ಜೀಜಾ ಮಾತೆಯ ಪುಣ್ಯಗರ್ಭದಲಿ

ಜೀಜಾ ಮಾತೆಯ ಪುಣ್ಯಗರ್ಭದಲಿ ಅವತರಿಸಿದನೀ ಶಿವರಾಯ ತುಳಜಾಮಾತೆಯ ಖಡ್ಗ ಕರದಲ್ಲಿ ಅರಿಗಳಿಗಿವನೇ ಜವರಾಯ || ಪ || ಮಾವಳಿ ಪೋರರ ಸೈನ್ಯ ರಚಿಸಿದ ಹದಿನಾಲ್ಕು ವರುಷದ ಜಗಜಟ್ಟಿ ಮೊಗಲ ಕೋಟೆಗೆ ಮುತ್ತಿಗೆ ಹಾಕಿದ ಹಿಂದು ಸ್ವರಾಜ್ಯಕೆ ತೋರಣ ಕಟ್ಟಿ || 1 || ಮದಿಸಿದರಸರ ಸೊಲ್ಲಡಗಿಸುತ ಮಾನಿನಿ-ಮಂದಿರ ರಕ್ಷಿಸಿದ ಧರ್ಮದ್ರೋಹಿಗಳ ಸಂಹರಿಸುತ ಗೋ ಹಂತಕರನು ಶಿಕ್ಷಿಸಿದ || 2 || ವಾಮನ ರೂಪದ ಮಹಾವೀರನು ಕಪಟ ಅಫ್ಜಲನ ಸಂಹಾರಿ ಮೃತ್ಯು ಕೂಪದಿ ಈಸಿ ಜೈಸಿದನು ಸಿಂಹ ನಡಿಗೆಯ […]

Read More

ಭರತ ಮಾತೆ ಭವ್ಯ ಮಂದಿರ

ಭರತ ಮಾತೆ ಭವ್ಯ ಮಂದಿರ ದ್ವಾರ ಬಳಿ ನಾ ನಿಂತಿಹೆ ಉದಿಸಿದ ನೇಸರನ ಜೊತೆಯಲಿ ಮಾತೃ ಚರಣಕೆ ನಮಿಸುವೆ || ಪ || ವಿಶ್ವದೆಲ್ಲೆಡೆ ಶಾಂತಿ ನೆಲೆಸಿದೆ ತಾಯಿ ಮಕ್ಕಳ ನಡುವಲಿ ಹಿಂದು ಸಂಸ್ಕೃತಿ ಬೆಳಕ ಹರಡಿದೆ ಜ್ಞಾನವನು ಪ್ರಜ್ವಲಿಸುತಲಿ || 1 || ಗೋವಿನ ಗುಣಗಾನ ಮಾಡುತ ಗ್ರಾಮ ನೃತ್ಯವು ನಡೆದಿದೆ ಸಮರಸತೆಯ ಸಹಜ ಭಾವವು ಎಲ್ಲ ಮನದಲಿ ನೆಲೆಸಿದೆ || 2 || ಭೇದಭಾವದ ಖಡ್ಗ ಮುರಿದಿದೆ ಒಂದೆ ಭಾವವು ಧ್ವನಿಸಿದೆ ಸೇವೆಯ ತ್ಯಾಗಜೀವನ […]

Read More

ಹಿಂದು ರಾಷ್ಟ್ರದ ಸಂತಾನರು ನಾವು

ಹಿಂದು ರಾಷ್ಟ್ರದ ಸಂತಾನರು ನಾವು ಹಿಂದು ವೀರರು ನಾವು ಜೀವನ ನಮ್ಮದು ನಂದಾ ದೀಪವು ಸಕಲವು ತಾಯಿಗೆ ಅರ್ಪಿತವು || ಪ || ಋಷಿಗಳ ವಾಣಿ ಮನ ಮನದಲ್ಲಿ ತ್ಯಾಗ ಬಲಿದಾನದ ಬದುಕಲ್ಲಿ ಸಾಹಸ ಶೌರ್ಯದ ಸಂಕಲ್ಪದ ಪಥ ಸಾಗಿದೆ ಕ್ಷಾತ್ರತೇಜದ ಕರ್ಮರಥ || 1 || ಭಾರತ ಮಾತೆಯ ಭರತರು ನಾವು ಸಿಂಹದ ಜೊತೆ ಒಡನಾಟ ಗಂಗಾಮಾತೆಯ ಗಾಂಗೇಯರು ನಾವು ಮುಷ್ಠಿಯಲೀ ವಿಶ್ವಪಟ || 2 || ಸ್ವಾಭಿಮಾನ ಸಂಪನ್ನ ರಾಷ್ಟ್ರವೇ ಕ್ಷಣ ಕ್ಷಣ ಜೀವನದ […]

Read More

ಸಂಘ ಸಂಜೀವಿನಿಯ ಜನಕಿತ್ತ ಕೇಶವನೇ

ಸಂಘ ಸಂಜೀವಿನಿಯ ಜನಕಿತ್ತ ಕೇಶವನೇ ನಿನಗಿದೋ ನಮ್ಮಯ ಶತಕೋಟಿ ನಮನ || ಪ || ಪರದಾಸ್ಯ ಪರತತ್ವ ಯುವ ಮನವ ತುಂಬಿರಲು ರಾಷ್ಟ್ರಭಕ್ತಿಯ ಭಾವ ಅರಳಿಸಿದೆ ನೀನು ಜಾತಿ ಮತದ ನೆವದಿ ದೇಶ ಚೂರಾಗಿರಲು ಹಿಂದು ಎನ್ನುವ ಭಾವ ಮರಳಿಸಿದೆ ನೀನು || 1 || ಬಾಳ ಬೇವನು ಉಂಡು ನಮಗೆ ಬೆಲ್ಲವನಿತ್ತು ಭಾರತದ ವೈಭವದ ಕನಸು ಕಂಡೆ ವಾದ ಭೇದವ ಬಿಟ್ಟು ಪ್ರೇಮಸೌಧವ ಕಟ್ಟಿ ಬರಿಗೈಲಿ ಬಹುಜನರ ಬರಸೆಳೆದುಕೊಂಡೆ || 2 || ಅಂದು ನೀನಿಟ್ಟ […]

Read More

ಮಾತೆ ಶ್ರೀ ಭಾರತೀಯ ಸಂಸ್ಕೃತಿ

ಮಾತೆ ಶ್ರೀ ಭಾರತೀಯ ಸಂಸ್ಕೃತಿ ಅರಿವಿನಲಿ ಎದೆ ತುಂಬುವಾ ತಾಯಿನಾಡಿನ ಐಕ್ಯ ದರ್ಶನ ಪಡೆದು ಮಾತೆಗೆ ನಮಿಸುವಾ || ಪ || ಯಾವ ಜಾತಿಯದಾದರೇನೈ ಎಲ್ಲ ಪೂಜೆಯು ಮುಕ್ತಿಗೆ ಯಾವ ಗರಡಿಯದಾದರೇನೈ ಎಲ್ಲ ಸಾಧನೆ ಶಕ್ತಿಗೆ || 1 || ಯಾವ ಪ್ರಾಂತ್ಯದ ಭಾಗವೇನ ಎಲ್ಲ ಮಣ್ಣು ಭಾರತ ಯಾವ ಬಾಯಿಯ ಹೇಗೆ ನುಡಿಯಲಿ ಅರ್ಥ ಮುಖ್ಯವು ಅವಿರತ || 2 || ದೇಶಭಕ್ತಿಯ ದೈವಶಕ್ತಿಯ ತುಂಬಿ ಎದೆಎದೆ ಉಕ್ಕಲಿ ಮಾನವೀ ಸಮರಸದ ಬಾಳುವೆ ಭಾಗ್ಯ ಭಾರತಿ […]

Read More