ದೀನದಯಾಳ ಗುಣಗಳ ಧಾಮ

ದೀನದಯಾಳ ಗುಣಗಳ ಧಾಮ
ಜೀವನವೆಲ್ಲಾ ಧ್ಯೇಯಕೆ ಹೋಮ
ಸಂಯಮ ಚತುರತೆ ನುಡಿಯಲಿ ಮಮತೆ
ಹೃದಯದಲಿ ಸದಾ ಭಾರತ ಮಾತೆ || ಪ ||

ಏಕಾತ್ಮ ಭಾವದ ವಿಚಾರ ಕಿರಣದಿ
ಬೆಳಗಿದೆ ನಾಡಿನ ಮನ ಮನವ
ತತ್ವವೆ ಜೀವನ ವ್ಯಕ್ತಿಯೆ ಸಾಧನ
ಸರಳತೆಯ ಮೂರ್ತಿಗಿದೋ ನಮನ || 1 ||

ಕಾಲವು ಸರಿದು ಶತಕವೆ ಕಳೆದು
ಇಂದಿಗು ದೀಪವೆ ಆ ಬದುಕು
ನಮಗೆ ದಾರಿ ತೋರುವ ತೆರದಿ
ಕಾಣಲಿ ದಯಾಳನ ಕ್ಷಣ ಕ್ಷಣವೂ || 2 ||

ಯವನ ವಿಜೇತನ ಅಖಂಡ ಕನಸಲಿ
ಶಂಕರರ ಅದ್ವೈತದ ಸೆಲೆಯಲಿ
ಕೃಷ್ಣನ ಧರ್ಮದೆ ದಿಗ್ವಿಜಯದಲಿ
ತೋರಿದ ರಾಷ್ಟ್ರಾತ್ಮವೇ ನಮಗಿರಲಿ || 3 ||

(ಪಂಡಿತ ದೀನದಯಾಳ ಉಪಾಧ್ಯಾಯರ ಬಗ್ಗೆ ಬರೆದಿರುವ ಕವಿತೆ)

Leave a Reply

Your email address will not be published. Required fields are marked *

*

code