ಬೆಳಕಿನ ಕಡೆ ಮುಖ ಮಾಡೋಣ

ಬೆಳಕಿನ ಕಡೆ ಮುಖ ಮಾಡೋಣ
ಕತ್ತಲೊಡನೆ ಸೆಣೆಸಾಡೋಣ || ಪ ||

ದೂರವಿದ್ದರೆ ಹತ್ತಿರ ಸೆಳೆದು ಸ್ನೇಹದ ಸುಧೆಯನು ಹರಿಸೋಣ
ಬದುಕಿನ ಬಯಲಲಿ ಬೀಳುವ ಕಸವನು ಸದಾಕಾಲವೂ ಗುಡಿಸೋಣ || 1 ||

ಸ್ವಾರ್ಥ ದುರಾಸೆ ಭಾರಿ ಬಲೂನಿಗೆ ಮಾನವತೆಯ ಮೊನೆ ಚುಚ್ಚೋಣ
ನಾಳೆಯೇ ಇಲ್ಲದ ಕಣ್ಣುಗಳಲ್ಲಿ ಕನಸಿನ ದೀಪವ ಹಚ್ಚೋಣ || 2 ||

ಹಸಿದ ಒಡಲಿಗೆ ತುತ್ತು ನೀಡಿ ಸುರಿವ ಕಂಬನಿಯ ಒರೆಸೋಣ
ಬೆಳೆವ ಸಸಿಗಳಿಗೆ ನೀರನ್ನೆರೆದು ಶುಭದ ಮಾತಿನಲಿ ಹರಸೋಣ || 3 ||

Leave a Reply

Your email address will not be published. Required fields are marked *

*

code