ಮಾಧವನುದಿಸಿದ ಮನೆಮನೆಯಲ್ಲಿಯು ಬಾಲಿಕೆಯಾದಳು ರಾಧೆ ನಿರ್ಮಲ ಪ್ರೇಮದ ವಾತ್ಸಲ್ಯದ ಸುಧೆ ಆದಳು ತಾಯಿ ಯಶೋಧೆ || ಪ || ಗೋವಳನೂದಿದ ಸಂಗಮ ಸ್ವರದಲಿ ಹೊಮ್ಮಿತು ಸಮರಸವೇದ ಕುರುಕುಲದಳಿವಿಗೆ ಮುನ್ನುಡಿ ಬರೆಯಿತು ಮುರಾರಿಯ ಶಂಖದ ನಾದ || 1 || ವೀರ ನರನ ರಥ ಸಾರಥಿಯಾದನು, ಕಾರ್ಯದಿ ಮೇಲ್ಕೀಳಿಲ್ಲ ನಿರ್ಮಮ ಮನದಲಿ ಕರ್ಮದ ಬೋಧನೆ ಫಲದಾಸೆಯು ಎಂದಿಗೂ ಇಲ್ಲ || 2 || ಗೀತೆಯ ಬೋಧನೆ ಪಾರ್ಥ ನಿಮಿತ್ತದಿ ಸಾರ್ಥಕ ಬದುಕಿನ ಪಾಠ ಪಾಂಡವರೈವರೇ ಕೈಯ್ಯಾಯುಧಗಳು ಇಳುಹಿದೆ ಭೂಮಿಯ […]
ಆರತಿ ಭಾರತಿ ಜಯ ಭಾರತಿ ನಿನ್ನಡಿಗೆ ಮುದದಲಿ ಆರತಿ ಬೆಳಗುತ ಬೆಳಗುವೆ ಭಾರತಿಗೆ, ಆರತಿ ಭಾರತಿಗೆ || ಪ || ಮೂಡುತ ರವಿಕಿರಣ, ಭೂತಾಯಿಗೆ ಜೀವಕಣ ರವಿ ಶಶಿ ಭೂಮಿಗೆ ಬಾಗಿ ಆರತಿ ಬೆಳಗುವೆವು. ಮಂಗಳಾರತಿ ಬೆಳಗುವೆವು || 1 || ಋಷಿ ಮುನಿಜನ ಜನನೀ, ಕೃಷಿಜನ ದೇವಿಯು ನೀ ರಸಋಷಿ ಕವಿಗೂ ಮಾತೇ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು || 2 || ಅಮೃತ ಸಮಜಾತೇ, ಕ್ಷೀರಾಮೃತವನು ಕೊಡುವೆ ಗೋಪಬಾಲಗೋಮಾತೆ ನಿನ್ನಯ ಅಡಿಗಳಿಗೆ, ಆರತಿ ಬೆಳಗುವೆವು […]
ಸೇವೆಯೇ ಜೀವನದ ಪರಮಧರ್ಮ ಜೀವಲೋಕದ ಹಿತದ ಆಧಾರಮರ್ಮ || ಪ || ಅದ್ವೈತ ಸಂಬಂಧ ದ್ವೈತದರಿವಿನೊಳಿಂದ ಅದ್ವಿತೀಯಾನಂದ ಸೇವೆಯಿಂದ ಸುದ್ದಿಗಳ ಸುಳಿವಿಲ್ಲ ಶಬ್ದದಾವುಟ ಸಲ್ಲ ಶುದ್ಧ ಸೇವಾಭಾವ ಇದು ಸಹಜ ನಿಜ ಕರ್ಮ || 1 || ಸಾಮಾಜಿಕರ ನಡುವೆ ಸಮರಸವನು ಎರೆದು ಸಾಂಮನಸ್ಯದ ಚಿಗುರು ಹೂವು ಪಡೆದು ಈ ಮಹಾ ಹಿಂದೂ ಜೀವನ ತರುವು ನಳನಳಿಸೆ ಸೇವಾವ್ರತವೆ ಪಥವು ಸಾರ್ಥಕವು ಜನ್ಮ || 2 || ನೀಗುವೆವು ಲೋಕಗಳ ಶ್ಲೋಕಗಳ ಸಂಕುಲವ ನೀಡುವೆವು ಜನಮನಕೆ ಚೈತನ್ಯವ […]
ಅಳಿಸಿ ದೋಷವನುಳಿಸಿ ದೇಶವ ಗಳಿಸಿ ಪೌರುಷ ತೇಜವ ಬೆಳೆಸುವೆವು ಹಿಂದುತ್ವದೋಜವ ಕಳಚಿಕೊಳ್ಳುತ ಜಾಡ್ಯವ… ಕಳಚಿಕೊಳ್ಳುತ ಜಾಡ್ಯವ || ಪ || ಒತ್ತಿಬರುತಿಹ ದಾಸ್ಯತೆಯ ಕಾರ್ ಗತ್ತಲನು ಶಿವಭೂಪರು ಸುತ್ತಮುತ್ತಿಹ ಮೊಗಲ ಛಾಯೆಯ ಕತ್ತರಿಸುತಲಿ ರಾಣರು ಹೆತ್ತಸುತರಾತ್ಮಾರ್ಪಣೆಗೆ ತಾ ನಿತ್ತ ಗುರುಗೋವಿಂದರು ಎತ್ತರಿಸಿ ಗರ್ಜಿಸುತಲಿರುವರು ಕಿತ್ತುಬಿಸುಡಿರಿ ಜಾಡ್ಯವ ಕಿತ್ತು ಬಿಸುಡಿರಿ ಜಾಡ್ಯವ ….|| 1 || ವ್ಯಾಸಭಾಸರ ಕಾಳಿದಾಸರ ನಾಸೆಯಿಂದಲಿಓದುತ.. ವಾಸುದೇವರ ತಿಲಕ ಲಾಲರ ಬೋಸದಾಸರನರಿಯುತ ಏಸು ಜನಮವನೆತ್ತಿ ಬಂದರು ಮಾಸದಿರುವೆಮಚರಿತೆಯ ಮೋಸದಿಂದಲಿ ತಿರುಚಿ ರಚಿಸಿಹ ದೋಷಿಗಳ ನೀ […]
ಕರುಳಿನ ಕರೆ ಕೇಳಿಸದೆ? ಮರಳಿ ಬನ್ನಿ ಮನೆಗೆ ತೆರಳದಿರಿ ಮೋಹಕದ ನಗರಿಯೆಡೆಗೆ ನಿಶಿದಿನದ ನರಳಿಕೆಯ, ಕನವರಿಕೆ ಜೋಂಪುಗಳ ತೊರೆದು ಮಾಯಾ ನಗರಿ, ಬನ್ನಿ ಮನೆಗೆ || ಪ || ಬರಿದೆ ಬವಣೆಯ ಬದುಕು ಬನ್ನ ಬಳಲಿಕೆಯಿಂದ ಹೊರಳ ಸಹಜತೆಯೆಡೆಗೆ- ನಮ್ಮ ಮನೆಗೆ ಪ್ರೀತಿ, ಪ್ರೇಮದ ಹೊನಲು, ಅನುಭವದ ಹೊಂಬಿಸಿಲು ನೆಮ್ಮದಿಯ ಹೊಸ ಚಿಗುರು ಒಡೆವ ಕಡೆಗೆ || 1 || ಭ್ರಮೆಯ ಮಾಯಾಂಗನೆಯ ಬಡಿವಾರದುರುಳಿಂದ ಮುಕ್ತರಾಗುತ ತಾಯ ಮಡಿಲಿನೆಡೆಗೆ. ಭೂರಮೆಯು ಹಸಿರುಡುಗೆ ಸೆರಗಿನೊಳಗಡೆ ಸೆಳೆದು ಸ್ತನ್ಯ ಸುಧೆಯನು […]
ವರವ ಬೇಡುವೆ ಹರಸು ನಮ್ಮ| ಭಾರತೀ ಕೊಡು ಕೋಟಿ ಜನುಮ || ಪ || ಶಸ್ತ್ರಕೊಡು ತೋಳಲ್ಲಿ ಬಲವಿಡು| ವೈರಿಕುಲ ಮರ್ದನಕೆ ಛಲಕೊಡು| ವರದೆ ಪಾರ್ವತಿ ತಾಯೆ ನೀಡು| ನಿನ್ನ ಬಸಿರೊಳಸಂಖ್ಯ ಜನುಮ || 1 || ಅನ್ನದಾಯಿನಿ ಜಗನ್ಮಾತೆ| ಜ್ಞಾನದಾಯಿನಿ ದಿವಿಜ ಪೂಜಿತೆ| ಆದಿಶಕ್ತಿ ಸುಧೀರಮಾತೆ| ಮುಕ್ತಿಮಂತ್ರವೆ ನಿನ್ನ ನಾಮ || 2 || ಮಾತೃಭಕ್ತಿ ಪುನೀತಭಾವನ| ದೀಪ್ತಗೊಳ್ಳಲಿ ಸುಪ್ತಚೇತನ| ಚಿರಸಮರ್ಪಿತವೆಮ್ಮ ತನುಮನ| ಚಿರಸಮರ್ಪಿತ ಪೂರ್ಣ ಜೀವನ || 3 ||
ಮನೆಯ ಹೊರಗಡೆ ಅಲ್ಲ,ಮನದ ಹೊರಗೂ ಅಲ್ಲ ಒಳಗಡೆಗೆ ಆಳದೆಡೆ ನಾನಿಳಿಯಬೇಕು ಒಳಗಿಳಿದು ಕೆಳಗಿಳಿದು ಒಳಗಿನರಗಿಳಿ ನುಡಿವ ಒಲುಮೆಯ ಸವಿನುಡಿಯ ಕಿವಿಗಿಳಿಸಬೇಕು || ಪ || ಹಿಂದು ಮುಂದರಿಯದಲೆ ಅಲೆಯುತಿಹ ಇಂದ್ರಿಯವ ತುಡುಗುತನವನು ಬಿಡಿಸಿ ಹಿಂದೆಳೆಯಬೇಕು ಹಿಡಿವಡೆಯಲೆಡೆಗೊಡದೆ ಚಂದವರಸುವ ಮನವ ಚಂದದಲಿ ಅನುನಯಿಸಿ ಕುಳ್ಳಿರಿಸಬೇಕು || 1 || ಕಣ್ಣಾಲಿಗಳ ಮುಚ್ಚಿ ಒಳಗಣ್ಣುಗಳ ತೆರೆದು ಆಂತರಂಗದ ಯಾತ್ರೆ ತೊಡಗಬೇಕು ಸರ್ವಾಂತರ್ಯಾಮಿ ಆ ಅನಂತ ಚೇತನದರಿವು, ಆ ಚಿರಂತನ ಸತ್ಯ ಕಣ್ತುಂಬಬೇಕು || 2 || ಒಳ ಹೊರಗಿನಲೂ ಹರಿವ […]
ಮಣಿದುದೀ ಜಗ ಹಿಂದು ತೇಜಕೆ ಜ್ಞಾನ ತಪಸಿಗೆ ತ್ಯಾಗಕೆ ಮರುಳುಗೊಳುವೆಯ ಮಾನಧನ ನೀನಿಂದು ಕ್ಷಣಿಕದ ಭೋಗಕೆ || ಪ || ಪಾರಿವಾಳದ ಪ್ರಾಣ ಉಳಿಸಲು ತೊಡೆಯ ಮಾಂಸವ ಕೂಯ್ದವ ಹುಲಿಯ ಹಾಲನು ಸವಿದು ಸಿಂಹದ ಹಲ್ಲನೆಣಿಸಲು ತುಯ್ದವ ಅರಿಯ ತರಿಯುತ ದೇಹಿ ಎನುವರಿಗೆ ಭಯ ನೀಡಿದೆ ಕರುಣದಿ ನಿಗ್ರಹಾನುಗ್ರಹ ಸಮರ್ಥನು ಶಸ್ತ್ರಶಾಸ್ತ್ರದ ಸ್ಪುರಣದಿ || 1 || ಮಣ್ಣ ರೂಪಿಗೆ ಕಣ್ಣು ಮೂಡಿಸಿ ಧ್ಯೇಯದೆರಕವನೆರೆವ ಬಾ ಸಂಘಟಿತ […]
ಬನ್ನಿ ಹಿಂದು ಯೋಧರೆಲ್ಲ ಒಂದುಗೂಡುತ ಭಾರತಾಂಬೆ ಸೇವೆಗಾಗಿ ಮುಂದೆ ಸಾಗುತ || ಪ || ಆನಗಾದಿ ರಾಜ ಗೌರಿಶಂಕರ ಉನ್ನತುಂಗ ವಿಶ್ವರಿಪು ಭಯಂಕರ ಮಾನನೀಯ ಮಾನಸ ಸರೋವರ ಮರೆಯಲೆಂತು ಮಾತೃ ಭೂ ಮನೋಹರ || 1 || ಕುರಿಗಳಲ್ಲ ನಾವು ಕೇಸರಿಗಳು ಅರಿಯ ಶಿರವ ಮೆಟ್ಟಬಲ್ಲ ಕಲಿಗಳು ವೈರಿ ಕಾಲಿಡುತಿಹನು ಕಣ್ಣಕಾಣದೆ ಸುಮ್ಮನಿರುವೆ ಎಂತು ಅವನ ಮಣ್ಣುಮಾಡದೆ || 2 || ಮಡಿವ ಮುನ್ನ ಮಾಡು ಬಾಳು ಸಾರ್ಥಕ ಭರತಮಾತೆ ಮಡಿಲ ನಿತ್ಯ ಸೇವಕ ಮುಂದೆ ಮುಂದೆ […]
ಒಂದುಗೂಡಿ ಬಾಳುವಾ ಸನ್ಮಾರ್ಗದಲ್ಲೇ ನಡೆಯುವಾ ಶಕ್ತಿ ಮೀರಿ ನಾವು ಸತ್ಕಾರ್ಯವನ್ನೇ ಮಾಡುವಾ || ಪ || ಯುಗದ ಜೊತೆಗೆ ಹೆಜ್ಜೆ ಹಾಕಿ ಮುನ್ನುಗ್ಗಲರಿಯುವಾ ಒಂದೇ ಸ್ವರದಲ್ಲಿ ಹಾಡ ಅನುರಣಿಸಲು ಕಲಿಯುವಾ ಮರೆತು ಕೂಡ ಜಾತಿ ಪಂಥ ಎಂಬ ಮಾತನಾಡಬೇಡಿ ಭಾಷೆ ಪ್ರಾಂತಕಾಗಿ ಎಂದೂ ರಕ್ತಪಾತ ಮಾಡಬೇಡಿ ದುಷ್ಟ ಶಕ್ತಿ ಹೆಚ್ಚುತಿದೆ ಬಗ್ಗು ಬಡಿದು ಮುಂದೆ ಸಾಗಿ || ಶಕ್ತಿ ಮೀರಿ || ಹತ್ತು ದಿಕ್ಕಿನಿಂದ ಇಂದು ಕೇಳಿಬರುತ್ತಿರುವ ಕೂಗು ಸಾಟಿಯಿಲ್ಲ ಮಾತೃ ಋಣಕೆ ಇಡಬೇಕು ಬಾಳ ಮುಡಿಪು […]