ಹರಿಸುತಿರು ಹಸನದೆಡೆ

ಹರಿಸುತಿರು ಹಸನದೆಡೆ ಅಂತರಂಗದ ಶಕ್ತಿ ಬಾಳ ಹಣತೆಯ ಉರಿಸಿ ಒಡೆದು ಕತ್ತಲ ಭಿತ್ತಿ || ಪ || ಮನದ ಕಳೆಯನು ಕಿತ್ತು ಗುಣದ ಮಣ್ಣನು ಉತ್ತು ಸತ್ವಫಲವನು ಕೊಡುವ ತತ್ವ ಬೀಜವ ಬಿತ್ತಿ ಹಿರಿಯರಾಶಯದಾಳಕೆ ಇಳಿಸು ಭಾವದ ಬೇರು ತನುವ ತರುವೀಯಲಿ ಫಲಭರಿತ ಬುತ್ತಿ || 1 || ಪಯಣವಿದು ಕೆಲ ಹೊತ್ತು ಹಂಚು ಬುತ್ತಿಯ ತುತ್ತು ನೀಡು ಹಾಲಾಹಲದ ಮತ್ಸರಕೆ ಮುಕ್ತಿ ಸತ್ಯ ಸರಳತೆಯ ಸೊತ್ತು ಅಳಿಸು ಅಹಮಿನ ಗತ್ತು ಸೋಲದೆಯೆ ಗುರಿಯೆಡೆಗೆ ತೋರುತಿರು ಯುಕ್ತಿ […]

Read More

ಕೇಶವನ ಕಲ್ಪನೆಯನು ಮಾಧವನ ಮಾರ್ಗವನು

ಕೇಶವನ ಕಲ್ಪನೆಯನು ಮಾಧವನ ಮಾರ್ಗವನು ಅನುಸರಿಸುತ ಮುನ್ನಡೆದಿಹ ಕಾರ್ಯಾರ್ಥಿಗಳು ನಾವು ಧ್ಯೇಯಕೇತನದೆದುರು ಶರಣಾರ್ಥಿಗಳು ನಾವು || ಪ || ಮತಜಾತಿಯ ಭೇದವಿರದೆ ನೆಲಭಾಷೆಯ ಜಗಳವಿರದೆ ಸಮರಸತೆಯ ಏಕತೆಯಲಿ ಸಚ್ಚರಿತವ ಸಂಕಲಿಸುತ ಸಂಘಸುಧಾಸಿಂಧುವಲಿಹ ಕಾರ್ಯಾರ್ಥಿಗಳು ನಾವು || 1 || ಹೊನ್ನುಹಣದ ಮೋಹವಿರದೆ ಅಧಿಕಾರದ ದಾಹವಿರದೆ ಕರ್ತವ್ಯದ ಭಾವ ಬೆಳೆಸಿ ಮಾತೃಭೂಮಿ ರಕ್ಷೆಗಾಗಿ ಅನವರತವು ನಿರತರಿರುವ ಕಾರ್ಯಾರ್ಥಿಗಳು ನಾವು || 2 || ವೈಭವೋತ್ತುಂಗದಲಿ ಮತ್ತೆ ಮೆರೆವ ಭಾರತಿಯನು ಇದುವೆ ದೇಹದಕ್ಷಿಯಿಂದ ಕಾಣಲೆಂದು ಹಂಬಲಿಸುತ ಸಂಕಲ್ಪವ ಸ್ವೀಕರಿಸಿಹ ಕಾರ್ಯಾರ್ಥಿಗಳು […]

Read More

ತುಂಬು ತುಂಬು ತುಂಬಿಕೊ

ತುಂಬು ತುಂಬು ತುಂಬಿಕೊ | ಜ್ಞಾನ ಕುಂಭ ತುಂಬಿಕೋ || ಪ || ನಗುವ ಹೂವೆ ನಿನ್ನ ಗುರು | ಹೊಳೆವ ತಾರೆ ನಿನಗೆ ಗುರು | ಉಲಿವ ಖಗವೆ ನಿನ್ನ ಗುರು | ಕಡಲ ಕುಣಿತ ನಿನಗೆ ಗುರು | ತೆರೆದ ಕಣ್ಣಿನಿಂದ ನೀನು ತುಂಬು ತುಂಬಿಕೋ || 1 || ಜ್ಞಾನ ನಿಧಿಯೇ ನಿನ್ನ ಗುರು | ತ್ಯಾಗ ಜೀವಿ ನಿನಗೆ ಗುರು | ತಿಳಿವ ಹಸಿವೆ ನಿನ್ನ ಗುರು | ದುಡಿವ ಹುಚ್ಚೆ […]

Read More

ತರುಣರೆಲ್ಲ ಒಂದು ಗೂಡಿ

ತರುಣರೆಲ್ಲ ಒಂದು ಗೂಡಿ ತಂಡ ಕಟ್ಟೋಣ ಗ್ರಾಮದಲ್ಲಿ ರಾಮರಾಜ್ಯ ಕನಸು ಬಿತ್ತೋಣ ತಂಡ ಕಟ್ಟೋಣ ನಾವು ಕನಸು ಬಿತ್ತೋಣ ಸ್ವಾಭಿಮಾನ ಪೂರ್ಣ ಭವ್ಯ ರಾಷ್ಟ್ರ ಕಟ್ಟೋಣ || ಪ || ಜಲಮೂಲವ ನದಿಕೆರೆಗಳ ಕಲುಷಗೊಳಿಸದೆ ನೆಲದೊಡತಿಗೆ ಹಸಿರು ಬಣ್ಣ ದುಡುಗೆ ನೀಡೋಣ ರಸಗೊಬ್ಬರ ಹೆಸರಿನಲ್ಲಿ ವಿಷವನುಣಿಸದೆ ಸಾವಯವದ ಸ್ವಾವಲಂಬಿ ಕೃಷಿಯ ಮಾಡೋಣ || 1 || ಎಳೆಮನದಲಿ ನೆಲದೊಲವಿನ ಬೀಜಬಿತ್ತೋಣ ಯುವಜನರಲಿ ಛಲತುಂಬುತ ಗೆಲುವ ಗಳಿಸೋಣ ಜಾತಿ ದ್ವೇಷ ಭೇದಭಾವ ದೂರ ಗೊಳಿಸುತ ಬಂಧುತ್ವದ ಸವಿ ಅಮೃತ […]

Read More

ಹೆಜ್ಜೆ ಹೆಜ್ಜೆ ಕೂಡಿಸುತ್ತ

ಹೆಜ್ಜೆ ಹೆಜ್ಜೆ ಕೂಡಿಸುತ್ತ ವೈರಿಗಣವ ಭೇದಿಸುತ್ತ ಅಸುರತನದ ದಮನಕಾಗಿ ನುಗ್ಗು ಮುಂದಕೆ ನುಗ್ಗು ಮುಂದಕೆ ನೀ ರಾಷ್ಟ್ರಕಾರ್ಯಕೆ ಸಾವು ಕೂಡ ಸೋಲಲಿಹುದು ಏಕೆ ಅಂಜಿಕೆ || ಪ || ದೇಶ ದ್ರೋಹಿ ಪಡೆಗಳೆಲ್ಲ ಮುಂದೆ ಬಾರದೆ ಹಿಂದೆ ಹಿಂದೆ ಸರಿಯುತಿರಲಿ ನಿನ್ನ ವೇಗಕೆ ನಿನ್ನ ಸುತ್ತಮುತ್ತಲಿರುವ ಸಣ್ಣ ಸಣ್ಣ ಅಣುಗಳಲ್ಲೂ ಭಾರತಾಂಬೆ ಹರಸುತಿರಲು ಚಿಂತೆ ಏತಕೆ || 1 || ಛಿದ್ರ ಛಿದ್ರವಾಗಿ ಎಲ್ಲ ಬೇರೆಯಾಗದೆ ಸೃಷ್ಟಿಯಾಗಬೇಕು ಸಾಮರಸ್ಯವೇದಿಕೆ ಸೃಷ್ಟಿಯಾದ ಶಕ್ತಿಯೆಲ್ಲ ಮುಷ್ಠಿಯಾಗಿ ಹೂಂಕರಿಸೆ ಶತ್ರು ಸೇನೆ […]

Read More

ಶೌರ್ಯ ಬಿತ್ತಿ ಬೆಳೆದ

ಶೌರ್ಯ ಬಿತ್ತಿ ಬೆಳೆದ ಧನ್ಯ ವಿಶ್ವವಂದ್ಯೆ ಭಾರತಮಾತೆ ಕಾರ್ಯಶೀಲರಾಗುವಂತೆ ಹರಸು ನಮ್ಮನು ಅರಿಗಳಿಗೆ ದುರ್ಗೆಯಾಗಿ ಆರ್ತರಳಲ ತೊಡೆದ ತಾಯಿ ಧ್ಯೇಯ ಪಥದಿ ಸಾಗುವಂತೆ ಹರಸು ನಮ್ಮನು || ಪ || ವರ್ತಮಾನವಳಿಸಿಕೊಂಡು ಶೈತ್ಯ ಧಗೆಗೆ ಒಗ್ಗಿಕೊಂಡು ಹೊರಗೂ ಒಳಗೂ ಕಾಯುತಿರುವ ವೀರ ಯೋಧರು ಪೊರೆದು ಕಾಯ್ವ ವೀರರನ್ನು ಹೆಮ್ಮೆಯಿಂದ ವಿರತ ಸ್ಮರಿಸಿ ಹೃದಯವಂತರಾಗುವಂತೆ ಹರಸು ನಮ್ಮನು || 1 || ಒಡಕಿನಿಂದ ತೊಡಕು ಸಹಜ ಐಕ್ಯಮತ್ಯದಿಂದ ವಿಜಯ ಕೂಡಿ ಬಾಳ್ವ ಪರಿಯ ಕಲಿಸಿ ಹರಸು ನಮ್ಮನು ಸಗ್ಗ […]

Read More

ಅಖಂಡ ಹಿಂದು ಭಾರತ

ಅಖಂಡ ಹಿಂದು ಭಾರತ ಸಾಧನೆಗೊಂದುಗೂಡಿ ಬನ್ನಿ ಹೆಬ್ಬಯಕೆಯ ಸಾಧಿಸುವ ಹಾದಿಯಲಿ ಎಲ್ಲರೊಂದೆ ಎನ್ನಿ || ಪ || ಜಗತ್ತಿನೆಲ್ಲೆಡೆ ಸಾಕ್ಷಿಯಾಗಲಿದೆ ಭರತನಾಳಿದ ದೇಶ ಸಾಸಿರ ದಾಳಿಗೆ ಉತ್ತರವಿತ್ತ ವೀರಧೀರ ಸಂಘರ್ಷ ಹಿನ್ನಡೆಯಾಗಿದೆ ಸತ್ತಿಲ್ಲ ಮನೆ ಮನದೊಳಡಗಿದೆ ಹಿಂದುತ್ವ ಭೂಮಿ ಎಲ್ಲೆಡೆ ಪಾಲಿಸಬೇಕಿದೆ ಭಾರತೀಯ ಸತ್ವ ಮಾನವತೆಯ ತತ್ವ || 1 || ಸೋಲಿನ ಶೂಲಕೆ ಸಿಲುಕಿ ನರಳುವ ಹೇಡಿ ಜನಾಂಗವು ನಾವಲ್ಲ ಮೃತ್ಯುವಿನೆದೆಗೆ ಅಂತ್ಯ ಸಾರುವ ಧೀರ ಹೃದಯಗಳೇ ನಾವೆಲ್ಲ ಎಮ್ಮ ಪೂರ್ವಜರು ಕೊಡಲಿ ಎತ್ತಿದರೆ ತಲೆಬಾಗಿತ್ತು […]

Read More

ಅರಿತು ಬಂದೆವು ಸಂಘದ ಶಕ್ತಿಯ

ಅರಿತು ಬಂದೆವು ಸಂಘದ ಶಕ್ತಿಯ ಕಾರ್ಯ ದಿಶೆಯನ್ನು ಬೆರೆತು ಬಾಳುವ ಮಾತೆಯ ಸೇವೆಗೆ ಸವೆಸುತ ತನುವನ್ನು || ಪ || ಪುಣ್ಯದ ಮಣ್ಣಿನ ಕಣ ಕಣ ಕಾಯುವ ಕಾಯಕವನು ತೊಟ್ಟು ಸಂಘದ ಕಾರ್ಯವೇ ಈಶ್ವರೀ ಕಾರ್ಯವು ಎನ್ನುವ ಪಣತೊಟ್ಟು ಪಾವನ ಭೂಮಿಯ ಪರಮ ವೈಭವದ ಗುರಿಯನು ಮುಂದಿಟ್ಟು || 1 || ಮದ ಮಾತ್ಸರ್ಯದ ಪದರವ ಸೀಳುತ ಪದವನು ಮುಂದಿಡುತ ತರ ತಮ ಭಾವವ ಮನದಿಂ ತ್ಯಜಿಸುತ ಸರಿ ಸಮ ನಾವೆನುತ ರಾಷ್ಟ್ರದ ಕೀರ್ತಿಯ ವಿಶ್ವಕೆ ಹಬ್ಬಲು […]

Read More

ಬಾಳ ನೌಕೆ ಏರಿ ನಮ್ಮ

ಬಾಳ ನೌಕೆ ಏರಿ ನಮ್ಮ ಬಾಳ ಪಯಣ ಸಾಗಿದೆ ಶೀಲ ವಸನ ಹಾಯಿ ಬಿಗಿದು ಧೈರ್ಯ ಪಥಿಕನಾಗಿದೆ || ಪ || ವೀರ ವ್ರತದ ಸ್ತಂಭವೇರಿ ಧ್ಯೇಯ ಧ್ವಜವು ಹಾರಿದೆ ಜ್ಞಾನ ಶೌರ್ಯ ತ್ಯಾಗ ಐಕ್ಯ ಸಂದೇಶವ ಸಾರಿದೆ || 1 || ಮರುತನೊದೆತ ಕಡಲ ಮೊರೆತ ಸೆಳೆತ, ಸುಳಿಗಳಗಣಿತ ಚಪಲ ಮನವ ಶಮನಗೊಳಿಪ ಚತುರಮತಿಯೇ ನಾವಿಕ || 2 || ಚಿತ್ತ ವೃತ್ತಿ ತಡೆವ ಭಿತ್ತಿ ಉತ್ತರಮುಖಿ ಹಿರಿಯರು ಸತ್ಪಥವನು ತೋರಿ ಗತಿಯ ಸುಸ್ಥಿತಿಯಲಿ ಇಡುವರು […]

Read More

ಚಂದದ ಮನೆ ಆನಂದದರಮನೆ

ಚಂದದ ಮನೆ ಆನಂದದರಮನೆ ಆ ನಂದಕಂದನುದಿಸಿ ಬಂದಿಹ ಮನೆ || ಪ || ಸದ್ದನಕೆ ಅಧಿಪತಿ ಗುಣಸುಂದರಿ ಸತಿ ಕುಂದುಕೊರತೆಯೊಂದು ಇರದ ಹಿಂದು ಸಂಸ್ಕೃತಿ || 1 || ಧರ್ಮದ ನಡೆ ನಿತ್ಯ ಸತ್ಯದ ನುಡಿ ನೇಮ-ನಿಷ್ಠೆ, ಪ್ರೇಮ-ಸ್ನೇಹ ನಮ್ಮ ಕೈಪಿಡಿ || 2 || ಭಜನ ಕೀರ್ತನ ನಿತ್ಯ ದೇವ ಪೂಜನ ಅತಿಧಿ ಅಭ್ಯಾಗತರೊಡಗೂಡಿ ಭೋಜನ || 3 || ಮೋಕ್ಷ ಕಾಮನೆ ಲೋಕಹಿತದ ಸಾಧನೆ ಸಾಧು ಸಂತ ಸಜ್ಜನರಿಗೆ ತೆರೆದಿಹ ಮನೆ || 4 […]

Read More