ಹೆಜ್ಜೆ ಹೆಜ್ಜೆ ಕೂಡಿಸುತ್ತ ವೈರಿಗಣವ ಭೇದಿಸುತ್ತ
ಅಸುರತನದ ದಮನಕಾಗಿ ನುಗ್ಗು ಮುಂದಕೆ
ನುಗ್ಗು ಮುಂದಕೆ ನೀ ರಾಷ್ಟ್ರಕಾರ್ಯಕೆ
ಸಾವು ಕೂಡ ಸೋಲಲಿಹುದು ಏಕೆ ಅಂಜಿಕೆ || ಪ ||
ದೇಶ ದ್ರೋಹಿ ಪಡೆಗಳೆಲ್ಲ ಮುಂದೆ ಬಾರದೆ
ಹಿಂದೆ ಹಿಂದೆ ಸರಿಯುತಿರಲಿ ನಿನ್ನ ವೇಗಕೆ
ನಿನ್ನ ಸುತ್ತಮುತ್ತಲಿರುವ ಸಣ್ಣ ಸಣ್ಣ ಅಣುಗಳಲ್ಲೂ
ಭಾರತಾಂಬೆ ಹರಸುತಿರಲು ಚಿಂತೆ ಏತಕೆ || 1 ||
ಛಿದ್ರ ಛಿದ್ರವಾಗಿ ಎಲ್ಲ ಬೇರೆಯಾಗದೆ
ಸೃಷ್ಟಿಯಾಗಬೇಕು ಸಾಮರಸ್ಯವೇದಿಕೆ
ಸೃಷ್ಟಿಯಾದ ಶಕ್ತಿಯೆಲ್ಲ ಮುಷ್ಠಿಯಾಗಿ ಹೂಂಕರಿಸೆ
ಶತ್ರು ಸೇನೆ ಮೇಲೆ ನಮ್ಮ ವಿಜಯ ಪತಾಕೆ || 2 ||
ಸ್ವಾರ್ಥ ತುಂಬಿದಾಸೆಯಿಂದ ಸೋಲನೊಲ್ಲದೆ
ವಿಜಯ ನಮ್ಮದೆಂದು ಚಲಿಸು ಕದನ ಕ್ಷೇತ್ರಕೆ
ಕೋಟಿ ದುಷ್ಟ ಶಕ್ತಿಯೆಲ್ಲ ಧಾವಿಸುತ್ತ ಎದರು ಬರಲು
ರುದ್ರನಾಗು ನೀನು ನಿನ್ನ ವೈರಿ ಪ್ರಾಣಕೆ || 3 ||