ಕೇಶವನ ಕಲ್ಪನೆಯನು ಮಾಧವನ ಮಾರ್ಗವನು

ಕೇಶವನ ಕಲ್ಪನೆಯನು ಮಾಧವನ ಮಾರ್ಗವನು
ಅನುಸರಿಸುತ ಮುನ್ನಡೆದಿಹ ಕಾರ್ಯಾರ್ಥಿಗಳು ನಾವು
ಧ್ಯೇಯಕೇತನದೆದುರು ಶರಣಾರ್ಥಿಗಳು ನಾವು || ಪ ||

ಮತಜಾತಿಯ ಭೇದವಿರದೆ ನೆಲಭಾಷೆಯ ಜಗಳವಿರದೆ
ಸಮರಸತೆಯ ಏಕತೆಯಲಿ ಸಚ್ಚರಿತವ ಸಂಕಲಿಸುತ
ಸಂಘಸುಧಾಸಿಂಧುವಲಿಹ ಕಾರ್ಯಾರ್ಥಿಗಳು ನಾವು || 1 ||

ಹೊನ್ನುಹಣದ ಮೋಹವಿರದೆ ಅಧಿಕಾರದ ದಾಹವಿರದೆ
ಕರ್ತವ್ಯದ ಭಾವ ಬೆಳೆಸಿ ಮಾತೃಭೂಮಿ ರಕ್ಷೆಗಾಗಿ
ಅನವರತವು ನಿರತರಿರುವ ಕಾರ್ಯಾರ್ಥಿಗಳು ನಾವು || 2 ||

ವೈಭವೋತ್ತುಂಗದಲಿ ಮತ್ತೆ ಮೆರೆವ ಭಾರತಿಯನು
ಇದುವೆ ದೇಹದಕ್ಷಿಯಿಂದ ಕಾಣಲೆಂದು ಹಂಬಲಿಸುತ
ಸಂಕಲ್ಪವ ಸ್ವೀಕರಿಸಿಹ ಕಾರ್ಯಾರ್ಥಿಗಳು ನಾವು || 3 ||

Leave a Reply

Your email address will not be published. Required fields are marked *

*

code