ಯುವಶಕ್ತಿಯು ಮೈಕೊಡುವುತ

ಯುವಶಕ್ತಿಯು ಮೈಕೊಡುವುತ ಮೇಲೆದ್ದರೆ ಇನಿಸು |
ನವರಾಷ್ಟ್ರದ ನಿರ್ಮಾಣದ ಕನಸಾಗದೆ ನನಸು || || ಪ ||

ಹದಿಹರೆಯದ ಭಾವನೆಗಳು ಕೋಮಲತೆಯ ಕಂತೆ
ಬಿಸಿಲಾದರೂ ತಂಪಾದರೂ ಅರಳದ ಮೊಗ್ಗಂತೆ |
ಸರಿದಾರಿಯ ಮೇಲ್ಪಂಕ್ತಿಯ ತೋರಿಸದಿಹ ಕೊರತೆ
ಬರಿದಾಗಿಸಿ ಬಾಳುದ್ದಕೂ ಸೊರಗಿಸುವುದೇ ಚಿಂತೆ || || 1 ||

ಧನ್ಯತೆಯಲಿ ಬಾಳಿದ ಹಿರಿಜೀವದ ಸಂಯೋಗ
ಶೂನ್ಯತೆಯನು ಕಳೆಯುತ ಗುರಿ ಮುಟ್ಟುವ ಸನ್ಮಾರ್ಗ
ಸಾಧನೆಯನು ಗೈಯುತ ಮನ ತುಂಬಲಿ ಉತ್ಸಾಹ
ಈ ಧರೆಯನು ಸಾರ್ಥಕದೆಡೆ ಒಯ್ಯಲಿ ಈ ದೇಹ || || 2 ||

ಹಗಲೆನ್ನದೆ ಇರುಳೆನ್ನದೆ ಮುನ್ನಡೆಯಲಿ ದೇಶ
ಜಗದಗಲಕೂ ಹರಡುತ ಸುಖಶಾಂತಿಯ ಸಂದೇಶ
ಮುನ್ನಡೆಸುವ ಹರಿಕಾರರು ಬಿಸಿರಕ್ತದ ಮಂದಿ
ಇಂದೀಗಲೇ ಒಂದಾಗುತ ಹಾಡಲಿ ಶುಭನಾಂದಿ || 3 ||

Leave a Reply

Your email address will not be published. Required fields are marked *

*

code