ಯುಗದ ನಿರೀಕ್ಷೆಯ ಬಸಿರಿಂದ, ಉದಿಸುತ ತಪಸಿನ ಬಲದಿಂದ
ಜಗದಲಿ ಧರ್ಮಧ್ವಜವನು ಮೆರೆಸಿದೆ ಹಿಂದುತ್ವದ ಹುಂಕೃತಿಯಿಂದ
ಯುಗಪುರುಷ ವಿವೇಕಾನಂದ… ಯುಗಪುರುಷ ವಿವೇಕಾನಂದ… ಯುಗಪುರುಷ ವಿವೇಕಾನಂದ || ಪ ||
ಸಂಘಟನೆಯೆ ನಾಡಿನ ಶಕ್ತಿ, ವಿಶ್ವದ ಹಿತದಲೆ ನಿಜಮುಕ್ತಿ
ತೊರೆಯಿರಿ ಭಯವ! ಬಲಮುಪಾಸ್ವ! ಭಾರತಮಾತೆಯೆ ಪರದೈವ
ದರಿದ್ರನಾರಾಯಣೋಭವ !
ಇದೆ ಆಧ್ಯಾತ್ಮದ ತಿರುಳೆಂದ – ಯುಗಪುರುಷ ವಿವೇಕಾನಂದ || 1 ||
ಗಿರಿವನ ಗ್ರಾಮವ ಮುಟ್ಟುತಲಿ, ಮನೆ-ಮನಗಳ ಕದ ತಟ್ಟುತಲಿ
ಭರತಕುಲವ ಬಂಧುತ್ವದಿ ಬೆಸೆಯುತ ಹೊಸನಾಡೊಂದನು ಕಟ್ಟುವೆವು
ಮರಳಿ ಸಿರಿಯ ತಂದೊಟ್ಟುವೆವು !
ಪ್ರೇರಣೆ ಪಡೆವೆವು ನಿನ್ನಿಂದ – ಯುಗಪುರುಷ ವಿವೇಕಾನಂದ || 2 ||
ತರತಮ ಭೇದವ ಹೂಳುವೆವು, ಸಮರಸ ಸೂತ್ರದಿ ಬಾಳುವೆವು
ಅಂಜದ ಎದೆಯಿದೆ ದೈವದ ಒಲವಿದೆ ವಿಘ್ನವಿರೋಧವ ಸೀಳುವೆವು
ನಾಳೆಗಳನು ನಾವಾಳುವೆವು!
ಭರವಸೆ ನಿನ್ನಯ ನುಡಿಯಿಂದ – ಯುಗಪುರುಷ ವಿವೇಕಾನಂದ || 3 ||
ಪರಾನುಕರಣೆಯ ಸೆರೆ ಹರಿದು, ಸ್ವಾಭಿಮಾನ ಸವಿ ಸುಧೆ ಕುಡಿದು
ಪುನರಪಿ ವಿಶ್ವಗುರುತ್ವ ಕಿರೀಟವ ಭಾರತಮಾತೆಗೆ ತೊಡಿಸುವೆವು
ಸಂಘಟನೆಯ ಧೃಡಪಡಿಸುವೆವು!
ಕೃತಸಂಕಲ್ಪವು ಯುವವೃಂದ – ಯುಗಪುರುಷ ವಿವೇಕಾನಂದ || 4 ||
ಇದರ ಸಾಹಿತ್ಯದ ಜೊತೆಗೆ ಧ್ವನಿ ಸುರುಳಿಯನ್ನು ಪ್ರಕಟಿಸಿ.
ನಮಸ್ತೇ,
ಸಾಹಿತ್ಯದ ಧ್ವನಿ ಸುರುಳಿಯನ್ನು ಪ್ರಕಟಿಸುವ ಕೆಲಸ ನಡೆಯುತ್ತಿದೆ. ಸಧ್ಯದಲ್ಲೇ ನಿರೀಕ್ಷಿಸಬಹುದು.