ಯುಗದ ನಿರೀಕ್ಷೆಯ ಬಸಿರಿಂದ

ಯುಗದ ನಿರೀಕ್ಷೆಯ ಬಸಿರಿಂದ, ಉದಿಸುತ ತಪಸಿನ ಬಲದಿಂದ
ಜಗದಲಿ ಧರ್ಮಧ್ವಜವನು ಮೆರೆಸಿದೆ ಹಿಂದುತ್ವದ ಹುಂಕೃತಿಯಿಂದ
ಯುಗಪುರುಷ ವಿವೇಕಾನಂದ… ಯುಗಪುರುಷ ವಿವೇಕಾನಂದ… ಯುಗಪುರುಷ ವಿವೇಕಾನಂದ    || ಪ ||

ಸಂಘಟನೆಯೆ ನಾಡಿನ ಶಕ್ತಿ, ವಿಶ್ವದ ಹಿತದಲೆ ನಿಜಮುಕ್ತಿ
ತೊರೆಯಿರಿ ಭಯವ! ಬಲಮುಪಾಸ್ವ! ಭಾರತಮಾತೆಯೆ ಪರದೈವ
ದರಿದ್ರನಾರಾಯಣೋಭವ !
ಇದೆ ಆಧ್ಯಾತ್ಮದ ತಿರುಳೆಂದ – ಯುಗಪುರುಷ ವಿವೇಕಾನಂದ        || 1 ||

ಗಿರಿವನ ಗ್ರಾಮವ ಮುಟ್ಟುತಲಿ, ಮನೆ-ಮನಗಳ ಕದ ತಟ್ಟುತಲಿ
ಭರತಕುಲವ ಬಂಧುತ್ವದಿ ಬೆಸೆಯುತ ಹೊಸನಾಡೊಂದನು ಕಟ್ಟುವೆವು
ಮರಳಿ ಸಿರಿಯ ತಂದೊಟ್ಟುವೆವು !
ಪ್ರೇರಣೆ ಪಡೆವೆವು ನಿನ್ನಿಂದ – ಯುಗಪುರುಷ ವಿವೇಕಾನಂದ        || 2 ||

ತರತಮ ಭೇದವ ಹೂಳುವೆವು, ಸಮರಸ ಸೂತ್ರದಿ ಬಾಳುವೆವು
ಅಂಜದ ಎದೆಯಿದೆ ದೈವದ ಒಲವಿದೆ ವಿಘ್ನವಿರೋಧವ ಸೀಳುವೆವು
ನಾಳೆಗಳನು ನಾವಾಳುವೆವು!
ಭರವಸೆ ನಿನ್ನಯ ನುಡಿಯಿಂದ – ಯುಗಪುರುಷ ವಿವೇಕಾನಂದ    || 3 ||

ಪರಾನುಕರಣೆಯ ಸೆರೆ ಹರಿದು, ಸ್ವಾಭಿಮಾನ ಸವಿ ಸುಧೆ ಕುಡಿದು
ಪುನರಪಿ ವಿಶ್ವಗುರುತ್ವ ಕಿರೀಟವ ಭಾರತಮಾತೆಗೆ ತೊಡಿಸುವೆವು
ಸಂಘಟನೆಯ ಧೃಡಪಡಿಸುವೆವು!
ಕೃತಸಂಕಲ್ಪವು ಯುವವೃಂದ – ಯುಗಪುರುಷ ವಿವೇಕಾನಂದ    || 4 ||

2 thoughts on “ಯುಗದ ನಿರೀಕ್ಷೆಯ ಬಸಿರಿಂದ

 1. ಇದರ ಸಾಹಿತ್ಯದ ಜೊತೆಗೆ ಧ್ವನಿ ಸುರುಳಿಯನ್ನು ಪ್ರಕಟಿಸಿ.

  • Phone No: 88678 02404
  1. ನಮಸ್ತೇ,
   ಸಾಹಿತ್ಯದ ಧ್ವನಿ ಸುರುಳಿಯನ್ನು ಪ್ರಕಟಿಸುವ ಕೆಲಸ ನಡೆಯುತ್ತಿದೆ. ಸಧ್ಯದಲ್ಲೇ ನಿರೀಕ್ಷಿಸಬಹುದು.

  Leave a Reply

  Your email address will not be published. Required fields are marked *

  *

  code