ಯುದ್ಧಭೂಮಿ ಕರೆದಿದೆ

ಯುದ್ಧಭೂಮಿ ಕರೆದಿದೆ ನಿದ್ದೆ ತೊರೆದು ಎದ್ದು ಬಾ
ಘೋರ ಸಂಗ್ರಾಮಕೆ ಸಿದ್ಧನಾಗಿ ಮುಂದೆ ಬಾ
ಭರತಮಾತೆಗೆ ಜೈ ಭರತಮಾತೆಗೆ
ಶಿರವಬಾಗಿ ಮುನ್ನಡೆ ವಿಶ್ವನಾಥಗೆ || ಪ ||

ರಣಕಹಳೆಯ ಸಿಂಹನಾದ ಮೊಳಗುತಿರುವುದು
ಸಮರಭೇರಿ ಗಡಿಯುದ್ಧಕು ಗುಡುಗುತಿರುವುದು
ನಡುಗುತಿಹರು ಅರಿಗಳು ಚದುರುತಿಹುರು ರಿಪುಗಳು
ಶತ್ರುಕುಲದ ಹುಟ್ಟನಳಿಸೆ ಮುನ್ನುಗ್ಗು ಬಾ || 1 ||

ಸಾಕು ಮಾಡು ಬರಿಯ ಶಾಂತಿಮಂತ್ರ ಬೋಧನೆ
ಅರಿಯದೇನು ಭಾರತಾಂಬೆಯೊಡಲ ವೇದನೆ ?
ಗೈದು ವೀರಘೋಷಣೆ ಅಸ್ತ್ರಶಸ್ತ್ರ ಚಾಲನೆ
ದ್ರೋಹಿಗಳಿಗೆ ತಕ್ಕ ಪಾಠವನ್ನು ಕಲಿಸು ಬಾ || 2 ||

ಕಾಶ್ಮೀರ ನಮ್ಮದೆಂದು ಜಗಕೆ ಸಾರುವಾ
ಉಗ್ರಗಾಮಿ ಖಳರ ಮೆಟ್ಟಿ ನಾಶ ಮಾಡುವಾ
ಭವ್ಯರಾಷ್ಟ್ರ ಕಟ್ಟಲು ಭರದಿ ಗುರಿಯ ಮುಟ್ಟಲು
ವೀರಸಂಕಲ್ಪವನ್ನು ಧರಿಸಲಿಂದು ಬಾ || 3 ||

Leave a Reply

Your email address will not be published. Required fields are marked *