ವಿರಸವ ಮರೆತು ಸರಸದಿ ಬೆರೆತು
ಅಭಿನವ ಭಾರತ ಕಟ್ಟೋಣ |
ತರತಮವಿಲ್ಲದ ಸಮರಸ ಭಾವದಿ
ಸ್ವರ್ಗವನಿಲ್ಲೆ ರಚಿಸೋಣ || || ಪ ||
ಮೇಲುಕೀಳುಗಳ ಕಿತ್ತೊಗೆದು
ಸರ್ವಸಮಾನತೆ ಸಾಧಿಸುವ |
ಏಳುಬೀಳುಗಳ ಹಾದಿಯಲಿ
ಏಳುಬೀಳುಗಳ ಹಾದಿಯಲಿ || || 1 ||
ಎದೆಗುಂದದೆ ನಾವ್ ಮುನ್ನಡೆವ
ಮಾನವ ನಿರ್ಮಿತ ಭೇದಗಳು
ಧರ್ಮದ ಅನುಮತಿ ಅದಕಿಲ್ಲ |
ನಾಡಿನ ನೈಜ ಸುಧಾರಣೆಗೆ
ಅನ್ಯರ ಆಶ್ರಯ ಬೇಕಿಲ್ಲ || || 2 ||
ಜಾತೀಯತೆಯನು ಬದಿಗಿರಿಸಿ
ರಾಷ್ಟ್ರೀಯತೆಯನು ಬಲಪಡಿಸಿ
ಹಿಂದುತ್ವದ ಹೊಂಬೆಳಕಿನಲಿ
ಕತ್ತಲ ಕಾಲವ ಕೊನೆಗೊಳಿಸಿ || || 3 ||