ಉನ್ನತೋಜ್ವಲ ಗುರುಸ್ವರೂಪಿಯೆ

ಉನ್ನತೋಜ್ವಲ ಗುರುಸ್ವರೂಪಿಯೆ
ಧ್ವಜ ನಮೋ ಚಿರಸ್ಪೂರ್ತಿದಾತಾ                             || ಪ ||

ಹೃದಯ ಸಾಗರದರುಣ ಜಲದಲಿ ಭಾವಕಮಲದ ಅಗ್ನಿಕಾಂತಿ
ಧ್ಯೇಯ ಭಾಸ್ಕರನುದಯ ಕಾಲದಿ ಅರಳಿ ದಲದಲ ತಾನೆ ಪ್ರಣತಿ
ಭಕ್ತಿಯಲಿ ಶುಚಿ ತಳೆದು ನಿಂತ, ದೀಕ್ಷೆಯಲಿ ಅಚಲತೆಯನಾಂತ
ಬಾಳಸೌಧದ ಭವ್ಯ ಶಿಖರದ ತ್ಯಾಗಸ್ತಂಭದ ತುದಿಗೆ ಸ್ವಾಗತ         || 1 ||

ತಾಯ್ಧರೆಯ ಪ್ರೀತಿಯಲಿ ಯುವಜನ ಒಂದುಗೂಡುತ ಬಂಧುಭಾವದಿ
ಧ್ಯೇಯ ಸಾಕ್ಷಾತ್ಕಾರದುತ್ಕಟ ಬಯಕೆ ದಿವ್ಯತೆಯಾಂತು ಹೃದಯದಿ
ಸಾಧನಾಮಯವಾಗಿ ಜೀವನ, ಚಿರ ಸಮರ್ಪಿತ ತನುಮನ
ಸ್ವೀಕರಿಸು ಸಾರ್ಥಕತೆ ಕರುಣಿಸು ಸ್ಪೂರ್ತಿಧಾರೆಯ ಸತತವೆರೆಯುತ   || 2 ||

ಅಂತರಂಗದ ಧ್ವನಿತರಂಗದ ಮಧುರ ಸ್ಪಂದನ ರೌದ್ರವಾಗುತೆ
ಶೌರ್ಯ ಧೈರ್ಯದ ಕ್ಷಾತ್ರತೇಜದ ವಜ್ರಲೇಪನ ರಕ್ಷೆಯಾಗುತೆ
ದೀಪ್ತಗೊಳ್ಳಲಿ ಸುಪ್ತಚೇತನ, ಕೆಚ್ಚು ಕಲಿತನ ಅರಳಿ ನೂತನ
ಆದಿ ಅಂತ್ಯವ ಮೀರುತೇರುತ ಹಾರು ಜ್ಞಾನದ ಪ್ರಭೆಯ ಬೀರುತ    || 3 ||

One thought on “ಉನ್ನತೋಜ್ವಲ ಗುರುಸ್ವರೂಪಿಯೆ

  1. ಈ ಹಾಡಿನ ಲಿರಿಕ್ಸ್ ನನಗೆ ಹಿಂದಿಯಲ್ಲಿ ಬೇಕು. ಕಾರಣ ಕನ್ನಡೇತರ ವ್ಯಕ್ತಿ ಯಿಂದ ಹಾಡಿಸಬೇಕು

Leave a Reply to ಜಯಚಂದ್ರ Cancel reply

Your email address will not be published. Required fields are marked *