ಉಜ್ವಲ ಸಂಸ್ಕೃತಿ ಮೈಮರೆತಿಹುದು ಮಲಗಿದೆ ಹಿಂದುಸ್ಥಾನ್
ಎಚ್ಚರವಾಗಿ ಮೆರೆಯುವುದೆಂದು? ಜ್ವಲಂತ ರಾಷ್ಟ್ರಮಹಾನ್
ನನ್ನೀ ದೇಶ ಮಹಾನ್ || ಪ ||
ಸಿಂಧೂ ನದಿಯ ನಾಗರಿಕತೆಯು, ಪವಿತ್ರ ವೇದದ ಕಾವ್ಯದ ಕಥೆಯು
ಬುದ್ಧ ಶಂಕರರ ಸಿದ್ಧಾಂತಗಳು, ಸಾಧು ಸಂತರ ಆಚಾರಗಳು
ಕರಗಿದೆ ಕಾಲದಲಿ, ತೇಲಿದೆ ಬಾನಿನಲಿ || 1 ||
ತರುಣ ಶಕ್ತಿಯು ಏಳುವುದೆಂದು? ರಾಷ್ಟ್ರದುನ್ನತಿಗೆ ಶ್ರಮಿಸುವುದೆಂದು?
ವೈಭವ ದೀಪ್ತಿ ಬೆಳಗುವುದೆಂದು? ತ್ಯಾಗ ಸಾಹಸ ಮೊಳಗುವುದೆಂದು?
ಎಂದಿಗೆ ಪುನರುತ್ಥಾನ? ನಾಡಿನ ನವ ಕಲ್ಯಾಣ? || 2 ||
ಉನ್ನತ ಜನತೆ ಮೈ ಕೊಡವೇಳಲಿ, ಭಾರತ ಮಾತೆಯ ಸೇವೆಗೆ ನಿಲ್ಲಲಿ
ಚೇತನ ತುಂಬಿ ಮೈ ನವಿರೇಳಲಿ, ಮಹಾತ್ಮರು ತೋರಿದ ದಾರಿಯ ತುಳಿಯಲಿ
ಅಂದಿಗೆ ಹೊಸ ಬೆಳಕು, ನೂತನ ಚಿರ ಬದುಕು || 3 ||