ತಾಯೇ ನಿನ್ನ ಉದರದಲ್ಲಿ ಜನಿಸಿ ಧನ್ಯನಾದೆನು ನಾನು
ಹೇ ವತ್ಸಲೇ ಹೇ ದುರ್ಗಾಮಾತೆ ಮಂಗಲದಾತೆ
ಪರಮಪುನೀತೆ ಪುಣ್ಯವಂತೆ ಕರ್ತವ್ಯನಿರತೆ
ಓಂ ನಮಸ್ತೇ ಶ್ರೀ ನಮಸ್ತೇ || ಪ ||
ಹಿಂದೂರಾಷ್ಟ್ರದ ಅವಯವಗಳು ನಾವು
ಆದರದಿಂದಲಿ ಪೂಜಿಸುವ ನಾವು
ನಿನ್ನಯ ಸೇವೆಗೆ ಬದ್ಧರು ನಾವು
ಆಶೀರ್ವಾದವ ಕೋರುವ ನಾವು || 1 ||
ವಿಶ್ವವೇ ಜಯಿಸದ ಶಕ್ತಿಯ ನೀಡೆ
ಜ್ಞಾನದ ನೆರಳ ವಿವೇಕವ ನೀಡೆ ||
ಜಗವೇ ನಮಿಸುವ ಶೀಲವ ನೀಡೆ
ಕಂಟಕ ಅಳಿಸುವ ಜ್ಞಾನವ ನೀಡೆ || 2 ||
ಅಭ್ಯುದಯವು ನಿಃಶ್ರೇಯಸ್ಸು
ಸಾಧಿಸಲು ಅದೇ ವೀರವ್ರತವು
ಪ್ರಖರವಾದ ಅಕ್ಷಯವಾದ
ಧ್ಯೇಯನಿಷ್ಠೆಯ ನಮ್ಮಲಿ ಬೆಳಗಿಸು || 3 ||
ನಮ್ಮಯ ಕಾರ್ಯವು ವಿಜಯೀಕೃತಿಯು
ಧರ್ಮದ ರಕ್ಷಣೆ ಜಯದುರ್ಗೆ ಜೊತೆಯು
ನಿನ್ನಯ ವೈಭವ ಸ್ಥಿತಿಯ ಕಾಣಲು
ಆಶೀರ್ವಾದವ ಬೇಡುವೆವು ನಾವು || 4 ||