ನುಗ್ಗು ಮುಂದಕೆ ನೀ ನುಗ್ಗು ಮುಂದಕೆ

ನುಗ್ಗು ಮುಂದಕೆ ನೀ ನುಗ್ಗು ಮುಂದಕೆ
ಹಿಗ್ಗಿನಿಂದ ಬಗ್ಗು ಬಡಿದು ಸೊಕ್ಕಿಮೆರೆವ ಅರಿಗಳ
ಲಗ್ಗೆ ಹಾಕಿ ಸಗ್ಗಸಿರಿಗೆ ನುಗ್ಗು ಗೆಲುವಿನಂಗಳಕ್ಕೆ || ಪ ||

ತಡೆವರಾರು ನಿನ್ನನು, ಧೈರ್ಯ ನಿನ್ನೊಳಿದ್ದರೆ
ಬಡಿವರಾರು ನಿನ್ನನು ಬಲವು ನಿನ್ನೊಳಿದ್ದರೆ
ಹೇಡಿಯಲ್ಲ ಭಾರತ ಶಕ್ತಿವಂತವೀಧರೆ
ಎಂದು ಜಗಕೆ ಸಾರುವ ಸಮಯವಿಂದು ಬಂದಿದೆ || 1 ||

ಬೆಟ್ಟ ಗುಡ್ಡ ಪರ್ವತ ಅಡ್ಡಿಯಾಗದೆಂದಿಗೂ
ಕಲ್ಲುಮುಳ್ಳು ಕಾನನ ತಡೆಯನೊಡ್ಡದೆಂದಿಗೂ
ಹೆಜ್ಜೆ ಹೆಜ್ಜೆ ತುಳಿತಕೆ ಭೂಮಿಯೆಲ್ಲ ನಡುಗಲಿ
ನಿನ್ನ ವೀರ ಘೋಷಕೆ ಅರಿಯ ಸದ್ದು ಅಡಗಲಿ || 2 ||

ಮತ್ತೆ ತಲೆಯನೆತ್ತಬೇಕು ಶ್ರೀರಾಮ ದೇಗುಲ
ಚಿತ್ತದಲ್ಲಿ ಚಿಗುರಲಿ ಜಗವ ಗೆಲುವ ಹಂಬಲ
ಸ್ವಾಭಿಮಾನ ಭರಿತ ಭವ್ಯ ರಾಷ್ಟ್ರವನ್ನು ಕಟ್ಟಲು
ಧ್ಯೇಯ ಮಾರ್ಗದಲ್ಲಿ ಸಾಗಿ ಭರದಿ ಗುರಿಯ ಮುಟ್ಟಲು || 3 ||

3 thoughts on “ನುಗ್ಗು ಮುಂದಕೆ ನೀ ನುಗ್ಗು ಮುಂದಕೆ

  1. ನುಗ್ಗು ಮುಂದಕ್ಕೆ ನೀ ನುಗ್ಗು ಮುಂದಕ್ಕೆ
    ಈ ಗೀತೆಯಲ್ಲಿ ಕೊನೆಯ ಸಾಲು “ಮತ್ತೆ ತಲೆಯೆನ್ನುತ್ತಬೇಕು ಶ್ರೀರಾಮ ದೇಗುಲ” ಇದನ್ನು”ಮತ್ತೆ ತಲೆಯನೆತ್ತಿದೆ ಶ್ರೀರಾಮದೇಗುಲ” ಎಂದು ಸರಿಪಡಿಸಬೇಕಾಗಿದೆ

  2. ಈ ಹಾಡಿನಿಂದ ಜನರ ಮನದಲಿ ರಾಷ್ಟ್ರ ಭಕ್ತಿ ಹುಟ್ಟಿತ್ತದೆ

Leave a Reply to Anand Cancel reply

Your email address will not be published. Required fields are marked *