ನವ ಭಾರತ ಶಿಲ್ಪಿಗಳಾಗೋಣ
ಹೊಸ ಬಾಳಿನ ಭಾಗ್ಯವ ಬರೆಯೋಣ || ಪ ||
ಗಂಗೆಯ ತಂದ ಭಗೀರಥನಂತೆ
ವಿಷವನು ಉಂಡ ನಂಜುಂಡನಂತೆ
ತಪವನು ಗೈದು ವಿಷವನ್ನು ಕುಡಿದು
ಸಮಾಜ ದೇವಗೆ ಪ್ರಾಣವ ಎರೆದು || 1 ||
ಕಾಣುವ ಅರಿಗಳ ಅಟ್ಟುತ ಯೋಧರು
ಕಾಣದ ವೈರಿಯ ಮೆಟ್ಟುತ ವೈದ್ಯರು
ಕಾಯಕ ಯೋಗಿಯ ತರದಲಿ ರೈತರು
ತಾಯಿಯ ಕಷ್ಟವ ತೊಳೆಯುತಲಿಹರು. || 2 ||
ನವ ಚೈತನ್ಯದ ನವ ಕುಸುಮಗಳು
ಕಾಣುತ ಹೊರಟಿವೆ ನವ ಕನಸುಗಳು
ಭಾರತ ಮಾತೆಯು ಆತ್ಮನಿರ್ಭರಳು
ಇದ ಸಾಧಿಸಿ ತೀರುವ ನಾವೇ ಕಲಿಗಳು. || 3 ||