ಕಡಲತಡಿಯ ಸಿಡಿಲ ಸಂತನ
ಮನಸಿನಾಳದ ಕಿಡಿ ನುಡಿ
ಎದ್ದುನಿಂತಿಹ ಹಿಂದು ತರುಣನೆ
ಮುಂದು ಮುಂದಕೆ ನಡಿ ನಡಿ || ಪ ||
ತರುಣ ಹೃದಯಕೆ ಮನಕೆ ನಯನಕೆ
ಭಾವಬಿಂಬಕೆ ಕನ್ನಡಿ
ವಿಶ್ವವಿಜಯದ ಯಶದ ಕಥನಕೆ
ಬರೆದ ಸುಂದರ ಮುನ್ನುಡಿ || 1 ||
ಅಡಿಯ ಮುಂದಿಡೆ ಸ್ವರ್ಗ ಕಾದಿದೆ
ಹಿಂದಕುಳಿದಿದೆ ನರಕವು
ಮುಂದೆ ಗುರಿ ಇದೆ ಗುರುವು ಜತೆಗಿರೆ
ನಿತ್ಯ ಸಾಧನೆ ಮಾರ್ಗವು || 2 ||
ಕಡಲತಡಿಯ ಸಿಡಿದ ಸಂತ ಪೇಜಾವರ ಸ್ವಾಮೀಜಿಗಳ ಕುರಿತ ಹಾಡು ಅತ್ಯುತ್ತಮವಾಗಿದೆ