ಧ್ಯೇಯಪಥದಿ ದಿಟ್ಟತನದಿ ಹರುಷದಿಂದ

ಧ್ಯೇಯಪಥದಿ ದಿಟ್ಟತನದಿ ಹರುಷದಿಂದ ಸಾಗುವಾ
ಅಜೇಯ ಶಕ್ತಿಯನ್ನು ಗಳಿಸಿ ವಿಜಯಭೇರಿ ಹೊಡೆಯುವಾ || ಪ ||

ದೇಶಕಾಗಿ ಸತತ ಕಾದ ವೀರರನ್ನು ಸ್ಮರಿಸುವಾ
ಅವರ ಕಾರ್ಯದಿಂದ ನಾವು ಸ್ಫೂರ್ತಿಯನ್ನು ಪಡೆಯುವಾ
ವಿಶುದ್ಧ ರಾಷ್ಟ್ರಪ್ರೇಮದಿಂದ ಕಾರ್ಯರಂಗಕಿಳಿಯುವಾ || 1 ||

ಧ್ಯೇಯ ಮಾರ್ಗದಲ್ಲಿ ಬರುವ ಕಷ್ಟಗಳನು ಸಹಿಸುತ
ಹಿಮಾದ್ರಿಯಂತೆ ಅಚಲರಾಗಿ ಮಾತೆ ಸೇವೆಗೈಯುತ
ಎಡರಿನಲ್ಲಿ ಸುಖವ ಕಂಡು ಹಿಗ್ಗಿ ಹಾಡಿ ನಲಿಯುತ || 2 ||

ವಿಶಾಲ ಹಿಂದು ರಾಷ್ಟ್ರವನ್ನು ದೇಶದಲ್ಲಿ ಕಟ್ಟುವಾ
ಪ್ರೇಮ ಪಾಶದಿಂದ ಎಲ್ಲ ಬಂಧುಗಳನು ಸೆಳೆಯುವಾ
ಅವರ ಹೃದಯದಲ್ಲಿ ರಾಷ್ಟ್ರಜ್ಯೋತಿಯನ್ನು ಬೆಳಗುವಾ || 3 ||

ಹೃದಯ ಪುಷ್ಪದಿಂದ ನಾವು ಮಾತೆ ಪೂಜೆ ಗೈಯುವಾ
ನಿತಾಂತ ಭಕ್ತಿಯಿಂದ ನಾವು ಜನನಿಯನ್ನು ನಮಿಸುವಾ
ಭರತಮಾತೆ ಲೋಕಮಾತೆ ಎಂದು ಜಗಕೆ ತೋರುವಾ || 4 ||

Leave a Reply

Your email address will not be published. Required fields are marked *

*

code